ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ ದಲ್ಲಿ ವಿಶಿಷ್ಟತ್ವಕ್ಕೆ ಮಹತ್ವವುಂಟಾಗಿರುವದರಿಂದ ಪ್ರತಿಯೊಬ್ಬನೂ ಯೋಗ್ಯವಾದ ಮಾರ್ಗವನ್ನವಲಂಬಿಸಿ ಪ್ರಗತಿಯನ್ನು ಹೊಂದ ಹತ್ತಬೇಕು, ಯಾರು ಹೊಸದನ್ನು ತಿರಸ್ಕರಿಸುವರೋ, ಹಳದನ್ನು ಅನುಕ ರಿಸುವದರಲ್ಲಿ ಯ, ಅದರ ವಿಷಯಕ್ಕೆ ಅಭಿಮಾನವಹಿಸುವದರಲ್ಲಿ ಯ ಭೂಷಣವೆಂದು ತಿಳಕೊಳ್ಳುವರೋ, ಅಪೂರ್ವತೆಯನ್ನು ವ್ಯಕ್ತ ಗೊಳಿಸುವದು ಯಾರಿಗೆ ಶಕ್ಯವಾಗಿ ತೋರುವದಿಲ್ಲವೋ, ಇಂಧವರ ಪುಗತಿಯು ಬಹುಶಃ ಆಗುವದಿಲ್ಲ. ಕರಿಣಸಂಗತಿಗಳನ್ನು ಆಶಕ್ಯವೆಂದು ತಿಳಿಯುವದೇ ಪ್ರಗತಿರಹಿತನ-ಆಪೂರ್ವತೆಯು ಇಲ್ಲದವನ ಮುಖ್ಯ ಲಕ್ಷಣವಾಗಿದೆ. ಇದಕ್ಕೆ ಮಹಾಭಾರತದೊಳಗಿನ ಒಂದು ಚಿಕ್ಕಸಂಗತಿ ಯ ಉದಾಹರಣೆಯನ್ನು ಕೊಡುವಾ! - ದುರ್ಯೋಧನನು ಸಭೆಯಲ್ಲಿ ಕುಳಿತಾಗ ಆಕಸ್ಮಿಕವಾಗಿ ನಾರ ದರು ಬಂದರು. ಆಗ ರಾಜನು ನಾರದರನ್ನು ಯಧಾಯೋಗ್ಯ ಉಪ ಚರಿಸಿ-ಸ್ವಾಮಿ, ನೀವು ತ್ರಿಲೋಕಸಂಚಾರಿಗಳು ಯಾವದಾದರೂ ಹೊಸ ಸಂಗತಿಯನ್ನು ಕಂಡಿದ್ದರೆ ತಿಳಿಸುವದಾಗಬೇಕು ಎಂದು ಕೇಳಿಕೊಂಡನು. ಅದಕ್ಕೆ ನಾರದರು-ವಿಶ್ವಾಸದಿಂದ ಕೇಳುತ್ತಿದ್ದರೆ ಹೇಳುವೆನು, ಎಂದು ಹೇಳಲು, ದುರ್ಯೋಧನನು ಒಪ್ಪಿಕೊಂಡನು ಆಗ ನಾರದರು-ವಿಶ್ವಾಸದಿಂದ ಕೇಳಬೇಕು ಮಹಾರಾಜಾ, ವಿಷ್ಣು ಲೋಕದಿಂದ ಭೂಲೋಕಕ್ಕೆ ಬರುವಾಗ ಮಾರ್ಗದಲ್ಲಿ ವಿಶ್ವಾಸದಿಂದ ಕೇಳಬೇಕು ಮಹಾರಾಜಾ, ಒಂದು ಸೂಚಿಯಹೆಜ್ಞದಲ್ಲಿ ಅಕ್ಷೇಹಿಳೆ ಗಟ್ಟಲೆ.ಸೈನ್ಯವು ಸಾಯುಹೋಯಿತು ಎಂದು ಹೇಳಿದನು. ಅದನ್ನು ದುರ್ಯೋಧನನು ಆಶ ಕ್ಯವೆಂದು ಭಾವಿಸಿ ನಕ್ಕನು, ಮರ್ಮವನ್ನು ತಿಳಿದ ನಾರದರು ಕೂಡಲೆ ಅಲ್ಲಿಂದ ಹೊರಟು ಧರ್ಮರಾಜನಿದ್ದಲ್ಲಿ ಹೋಗಿ ಅವನಿಗೂ ಈ ಸಂಗತಿಯನ್ನು ಮೇಲಿನಂತೆಯೇ ನಿವೇದಿಸಿ ದರು. ಆದರೆ ಸ್ವತಃ ಅಪೂರ್ವ ಸ್ವಭಾವವುಳ್ಳ ಧರ್ಮರಾಜನಿಗೆ ನಾ ದರ ವಾಕ್ಯವು ಸತ್ಯವಾಗಿ ತೋರಿತು. ಧರ್ಮರಾಜನು ತನ್ನ ಆವ