ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ ಪೂರ್ವಕವಾಗಿ ಕೇಳಿದರೆ, ಆ ಎಲ್ಲರ ಕಾರ್ಯಸಾಧನೆಗೂ ಒಂದೇ ಒಂದು ಸಂಗತಿಯ ಅಭಾವವು ವ್ಯಕ್ತವಾಗುವದು, ಆ ಸಂಗತಿ ಯಾವ ದೆಂದರೆ ಸಾಧನಾಭಾವವು, ಕೆಲವರಿಗೆ ಸಮಯದ ಅಭಾವ, ಕೆಲವ ರಿಗೆ ಮನುಷ್ಯರ ಅಭಾವ, ಕೆಲವರಿಗೆ ದುಡ್ಡಿನ ಅಭಾವ, ಕೆಲವರಿಗೆ ಆರೋಗ್ಯದ ಅಭಾವ; ಹೀಗೆ ಎಲ್ಲಿ ನೋಡಿದರೂ ಸಾಧನಾಭಾವವೇ ಸಾಧನಾಭಾವವು. ಯಾವ ಪವಿತ್ರ ಭರತಭೂಮಿಯಲ್ಲಿ ನನ್ನ ಜನ್ಮವಾಗಿರುವ ಆ ದೇಶದ ಸಲುವಾಗಿಯೂ, ನನ್ನ ಸ್ವಂತದ ಸಲುವಾಗಿಯೂ, ಹಾಗು ನನ್ನ ದೇಶಬಾಂಧವರ ಸಲುವಾಗಿಯೂ ಕೆಲಮಟ್ಟಗಾದರೂ ಹಿತದ ಕಾರ್ಯವನ್ನು ಮಾಡಬೇಕೆಂದು ನಾನು ಬಯಸುವೆನು' ಹಾಗು ಅದಕ್ಕಾಗಿ ನಾನು ಯಧಾಶಕ್ತಿ ವರ್ತಿಸುತ್ತಿರುವೆನು” ಎಂಬಸಂಕ್ಷಿ ಪ್ರವೃತ್ತಾಂತದಿಂದ ಕೈ, ನಾಮದಾರ ಗೋಖಲೆಯವರು ಒಂದು ಪ್ರಸಂಗದಲ್ಲಿ ವಿದ್ಯಾರ್ಥಿಗಳ ಮುಂದೆ ಆತ್ಮನಿವೇದನ ಮಾಡಿಕೊಂಡಿ ರುವರು. ದಾರಿದ್ರಾವಸ್ಥೆಯಲ್ಲಿ ಹುಟ್ಟಿ, ಕೇವಲ ಬಡತನದಲ್ಲಿ ಬೆಳೆದು, ಸಂಕಟ ಪರಂಪರೆಗಳಿಂದ ವೇಷ್ಟಿತರಾಗಿ, ಪ್ರಗತಿಮಾರ್ಗ ದಲ್ಲಿ ಕೇವಲ ನಿರಾಧಾರರಾಗಿದ್ದ ಈ ಗೋಖಲೆಯವರು ಅತ್ಯಂತ ಪ್ರಗತಿಯನ್ನು ಹೊಂದಿ, ಹಿಂದೂಮಾತೆಯ ಸುಪುತ್ರರ ಮಾಲಿಕೆಯಲ್ಲಿ ಶೋಭಿಸುತ್ತಿರುವರು. ದೃಢನಿಶ್ಚಯದವನಿಗೆ ಪ್ರಗತಿಮಾರ್ಗವನ್ನು ತೋರಿಸಲಿಕ್ಕೆ ಸೃಷ್ಟಿಯು ಹ್ಯಾಗೆ ತತ್ತರವಾಗಿರುತ್ತದೆಂಬದನ್ನೂ ಯಶಃಪ್ರಾಪ್ತಿಯು ಕೇವಲ ಸಾಧನಗಳಲ್ಲಿರದೆ, ಮನುಷ್ಯನು ಪ್ರಯ ತ್ಯದಿಂದ ಅದನ್ನು ಹ್ಯಾಗೆ ಸಾಧಿಸಬಹುದೆಂಬದನ್ನೂ ಗೋಪಾಳರಾವ ಗೋಖಲೆಯವರ ಉದಾಹರಣೆಯಿಂದ ತಿಳಿದುಕೊಳ್ಳಬಹುದಾಗಿದೆ ಆ ಕಾಲಕ್ಕೆ ಪುಣೆಯಲ್ಲಿ ಗೋಪಾಳರಾಯರ ಸಮ ವಯಸ್ಕರಾದ ಎಷ್ಟೋ ಜನ ವಿದ್ಯಾರ್ಥಿಗಳು ಸಾಧನಾಭಾವದ ಸಲುವಾಗಿ ಅಳುತ್ತ ಕೂತಿದ್ದರು. ಆದರೆ ಗೋಪಾಳರಾಯರು ಅವರಂತೆ ಅಳಬುರಕರ ಗದ್ದರಿಂದ ಅವರು ಪ್ರತಿಯೊಂದು ಪ್ರತಿಕೂಲ ಪ್ರಸಂಗಕ್ಕೂ ಧೈರ್ಯ