ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ದಿಂದ ಎದೆಗೊಟ್ಟ ಇಷ್ಮ ಕಾರ್ಯಸಾಧಿಸಿದರು; ಅವರ ಧೈಯವು ನಿಶಿತವಾದ್ದರಿಂದ ಎಂಧ ಇಕ್ಕಟ್ಟನಪ್ರಸಂಗಗಳ ಪರಿಯು ಅವರ ಕಣ್ಣಿಗೆ ಬಂದರೂ ಅದರೊಳಗಿಂದ ಧೈಯವು ಅವರಿಗೆ ಸ್ಪಷ್ಟವಾಗಿ ಕಾಣದೆ ಇರುತ್ತಿದ್ದಿಲ್ಲ. ಕೇವಲ ನಧನಾಭಾವಸ್ಥಿತಿಯಲ್ಲಿ ಸಹ ಅವ ರಿಗೆ ತಮ್ಮ ಆಲೌಕಿಕ ಕಾರ್ಯದ ಹಲವು ಅನುಪಮ ಸಾಧನಗಳು ಗೋಚರವಾಗುತ್ತಿದ್ದವು, ಮಾರ್ಗದಲ್ಲಿ ಬರಬಹುದಾದ ಪ್ರತಿಯೊ೦ ದು ಎಡರುಗಳಿಗೆ ಎದೆಗೆಡಲು ತಾನು ಸಮರ್ಧ ನಿದ್ದೇನೆಂದು ಗೋ ಪಾಳರಾಯರಿಗೆ ತೋರುತ್ತಿದ್ದರಿಂದ ಅವರು ಸಂಕಟಗಳಿಗೆ ಹೆದರುತ್ತಿದಿ; ಜೀವಿತನಾಫಲ್ಯ ಮಾಡಿಕೊಳ್ಳುವ ಕಾ ರ್ಯದಲ್ಲಿ ಯಾವಾಗಲೂ ಮುಂದುವರಿಯುತ್ತಿದ್ದರು. ಗೋಪಾ ಳರಾಯರಿಗೆ ಹಲವು ಸಾಧನಗಳು ಬೇಕಾಗಿದ್ದವು. ಆದರೆ ಅವುಗಳ ಸಲುವಾಗಿ ಅವರು ತಮ್ಮ ಪ್ರಗತಿಯನ್ನು ನಿಲ್ಲಿಸಲಿಲ್ಲ: ಆ ಸಾಧನ ಗಳನ್ನು ಅವರು ತಮ್ಮ ಪ್ರಯತ್ನದಿಂದ ಕೈವಶ ಮಾಡಿಕೊಂಡರು. ದೃಢನಿಶ್ಚಯವುಳ್ಳವರು ಕಾರಣಗಳನ್ನು ಹೇಳುತ್ತ ಕೂಡುವ ದಿಲ್ಲ. ಅವರ ಓಟವು ಸದಾ ಕೆಲಸದಕಡೆಗೇ ಇರುತ್ತದೆ. ಈ ಸ್ವಾವಲ ಬಿಗಳು ಮಂದಿಯಸಹಾಯದ ಅಪೇಕ್ಷೆಯನ್ನು ಸಹಸಾಬಯಸುವದಿಲ್ಲ ಅನುಕೂಲಸಮಯದ ನಿರೀಕ್ಷಣಮಾಡುತ್ತ ಕೂಡ್ಲದೆ, ಇಷ್ಟ ಕಾರ್ಯ ಸಾಧಿಸುವದಕ್ಕಾಗಿ ಒಂದೊಂದು ಹಳ್ಮೆ ಮುಂದಿಕ್ಕುತಿರುತ್ತಾರೆ ಅವರ ಈ ಸಾಹಸದಿಂದ ಸಾಧನಗಳು ಅವರಿಗೆ ತಾವಾಗಿಯೇ ದೊರಕ ಹತ್ತುವವು. ಯಾರು ತಮಗೆ ಸಾಧನಾಭಾವವೆಂದು ಹೇಳುವರೋ ಅವರು ತಮ್ಮ ಬಾಯಿಂದಲೇ ತಾವು ದುರ್ಬಲರಿರುತ್ತೇವೆಂದು ಒಪ್ತಿ ಕೊಂಡಹಾಗಾಗುತ್ತದೆ , 'ಸಾಧನಾಭಾವ'ವು ಪರಾಜಯ ಹೊಂದಿದ ಜನರ ನಿಶ್ಚಿತ ಉತ್ರ ರವಾಗಿದೆ. ಈ ಜನರು ಮೇಲೆ ಹೇಳಿದಂತೆ ತಮಗೆ ಧನಸಹಾಯ ಇಲ್ಲವೆ ಜನಸಹಾಯ ಇಲ್ಲವೆ ಬುದ್ದಿ ಸಹಾಯ ಮೊದಲಾದ ಸಾಧನ ಗಳು ಯೋಗ್ಯವಾಗಿ ದೊರಕದ್ದರಿಂದ ಪ್ರಗತಿಮಾರ್ಗದಲ್ಲಿ ಪರಾಜಯ