ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 - ದರೆ ಕೂಡ ಇವರಿಗೆ ಮೌಲ್ಯವಾದ ವಸ್ತುಗಳು ದೊರೆಯದಾಗುವವು, ಆದರೆ ದಢನಿಶ್ಚಯದ ಧೈಯವನ್ನ, ಗೊತ್ತು ಮಾಡಿಕೊಂಡ, ಅಪೂ ರ್ವತೆಯ ಗುಣವುಳ್ಳ ಹಾಗು ಸ್ವಾತಂತ್ರಪ್ರೀತಿಯುಳ್ಳ ಮನುಷ್ಯ ನನ್ನು ಎಂಧ ರುಕ್ಷ ಹಾಗು ಕಾಡುಪ್ರದೇಶದಲ್ಲಿ ಬಿಟ್ಟರೂ ಅವನಿಗೆ ತನ್ನ ಸುತ್ತು ಮುತ್ತು ಸಾಧನಗಳ ಸಂಗ್ರಹಾಲಯವೇ ಇದ್ದಂತೆ ಕಾಣುವದು, - ಲೋ, ಟಿಳಕರು ಗೀತಾರಹಸ್ಯ”ದಂಧ ಕರ್ಮಯೋಗಶಾ ಸ್ವದ ಸರ್ವಮಾನ್ಯವಾದ ಉದ್ಯಂಧವನ್ನು ಜೇಲಿನಲ್ಲಿದ್ದಾಗ ಬರೆದು ಮುಗಿಸಿದರು. ಅವರ ಆಗಿನ ಮನಸ್ಥಿತಿ, ಅನುಕೂಲತೆ, ಪರಿಸ್ಥಿತಿ ಗಳನ್ನು ಅವಲೋಕಿಸಿದರೆ, ದೃಢನಿಶ್ಚಯವೇ ಅವರಿಂದ ಈ ಪ್ರಚಂಡ ಕೆಲಸವನ್ನು ಮಾಡಿಸಿತೆನ್ನಬೇಕಾಗುವದು. ಲೋ, ಟಿಳಕರಂತ ಪ್ರಗತಿಗಾಮಿಗಳಾದ ಅನೇಕರು ಕಠಿಣ ಪ್ರಸಂಗದಲ್ಲಿ ಅಲೌಕಿಕ ಕೃತಿಗಳನ್ನು ಮಾಡಿ ಕೀರ್ತಿಶೇಷರಾಗಿರುವರು. ಆದರೆ ತಮ್ಮ ಎಲ್ಲ ವೇಳೆಯನ್ನು ಕಾರ್ಯಸಾಧನದಲ್ಲಿ ಕಳೆಯುವವರು ವಿರಳ. ಕೆಲವ ರಿಗೆ ಕಾರ್ಯ ಸಾಧನದಲ್ಲಿ ಇಡಿದಿವಸದಲ್ಲಿ ತಾಸು ಅರ್ಧ ತಾಸು ಕೊಡವಿರಾ ಮಹೊಂದಲು ವೇಳೆಸಿಗದಿರುವಾಗ, ಬೇರೆ ಕೆಲವರು ಏನೂ ಕೆಲಸ ವಿಲ್ಲದೆ ಯಾವ ಮೋಜಿನ ಆಟಗಳಲ್ಲಿ ಕಾಲಕಳೆಯಬೇಕೆಂಬ ಆಲೋ ಚನೆಯಲ್ಲಿ ಮಗ್ನರಾಗಿರುವರು: ಇದರಂತೆ ಯಾರು ನಿರೋಗಿಗಳಾಗಿ ರುವರೋ ಅವರು ಹೆಚ್ಚು ಆರೋಗ್ಯವನ್ನು ಹೊಂದುವದಕ್ಕಾಗಿಯೂ, ದೇಹದ ಬಲವನ್ನು ಬೆಳಿಸುವದಕ್ಕಾಗಿಯೂ ವ್ಯಾಯಾಮಾದಿಗಳ ಆವ ಲಂಬನ ಮಾಡುತ್ತಿರಲು, ಬೇರೆ ಕೆಲವು ಶ್ರೀಮಂತ ರೋಗಿಗಳು ರೋಗನಿವಾರಣಕಾಗಿ ಆರೋಗ್ಯವಿಷಯದ ಯಾವ ಮಾರ್ಗ ವನ್ನೂ ಅವಲಂಬಿಸಲಾರದೆ, ಕೇವಲ ಆಲಸ್ಯದಲ್ಲಿಯೂ, ತಿನಸುಗೂ ಳಿತನದಲ್ಲಿಯೇ ಕಾಲಕಳೆದು ಹೆಚ್ಚು ಹೆಚ್ಚು ರೋಗಗ್ರಸ್ತರಾಗು ತಿರುವರು, ಪ್ರಗತಿಹೊಂದುವ ಇಚ್ಛೆಯು ಪ್ರಾಪ್ತವಾದಹೊರ್ತು ಮನುಷ್ಯನಿಗೆ ಸರಿಯಾಗಿ ಹೊಟ್ಟೆ ಹಸಿಯದಿದ್ದಾಗ, ಮಧುರವಾದ