ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ ಆಗಲೇ ಇ೦ಜನಿಗೆ ಗತಿಯು ಉಂಟಾಗುವದು. ಈ ನಿಯಮವೇ ಪ್ರಗತಿಪರ ಮನುಷ್ಯನಿಗೆ ಹತ್ತುವದು. ಯಶಃಪ್ರಾಪ್ತಿಯ ಗುಹ್ಯವು ಹೆಚ್ಚಾದ ಆಸಕ್ತಿಯಲ್ಲಿರುವದು. ಪ್ರತಿಬಂಧಗಳನ್ನು ಛೇದಿಸುವ ಶಕ್ತಿಯ ಮಿತಿಮೀರಿದ ಆಸಕ್ತಿಯಿಂದ ಉಂಟಾಗುವದು, ಪ್ರತಿಬಂಧ ಗಳಿಗೆ , ವಿಘಗಳಿಗೆ ಹೆದರುವವರು ಅವುಗಳ ವರ್ಚಸ್ಸನ್ನು ಒಪ್ಪಿಕೊಂಡಂತಾಗುವದು. ಆದರೆ ಕಾರ್ಯಾಸಕ್ತಿಯನ್ನು ಬೆಳಿಸಿ ದಢನಿಶ್ಚಯದಿಂದ ಕೆಲಸ ಮಾಡಹತ್ತಿದರೆ ಧೈಯವನ್ನು ಬಹುಬೇಗ ಸಾಧಿಸಲಿಕ್ಕೆ ಬರುತ್ತದೆ, ತಮ್ಮ ಊರ ಭೂಮಿಗಿಂತ ಬೇರೆ ಊರ ಭೂಮಿಗಳು ಹೆಚ್ಚು ಫಲಕಾರಿಗಳೆ೦ದು ತಿಳಿಯುವ ಮೂಢಒಕ್ಕಲಿಗನಂತೆ, ಎಷ್ಟೋ ಜನರು ಕಾರ್ಯ ನಾಧನಕ್ಕಾಗಿ ಸ್ಥಳಾಂತರಮಾಡುವದು ಅವಶ್ಯವೆಂದು ತಿಳಿಯುತ್ತಾರೆ ಆದರೆ ಜಾಣತನು ಕೆಡುಭೂಮಿಯನ್ನೇ ಗೊಬ್ಬ ರಹಾಕಿಫಲರೂಪವಾಗಮಾಡಿಕೊಳ್ಳುವಂತೆ, ಬುದ್ದಿವಂತರಾಗು ದೃಢ ನಿಶ್ಚಯದ ಮನುಷ್ಯನು ಕಾರ್ಯಸಾಧನಕ್ಕಾಗಿ ಸ್ಥಳಾಂತರವಾಡದ ಇದ್ದ ಊರಲ್ಲಿಯೇ ಇದ್ದ ಸ್ಥಿತಿಯಲ್ಲಿಯೇ ಇದ್ದು, ಸ್ವಂತ ಪರಿಶ್ರಮ ದಿಂದ ಬೇಕಾದ ಅನುಕೂಲತೆಗಳನ್ನು ಉತ್ಪನ್ನ ಮಾಡಿಕೊಂಡು ಕಾರ್ಯ ಸಾಧಿಸಹತ್ತಿ ಪ್ರಗತಿಹೊಂದುವನು. ಆದ್ದರಿಂದ ಕಾರ್ಯದಲ್ಲಿ ಆಸ ಕೈಯನ್ನಿಡದೆ ದೈವಪರೀಕ್ಷೆಯನ್ನು ಕಂಡುಹಿಡಿಯುವದಕ್ಕಾಗಿ ಸ್ಥಳಾಂ ತರಮಾಡಿ ದೊಡ್ಡ ದೊಡ್ಡ ಪಟ್ಟಣಗಳ ಕಡೆಗೆ ಓಡಹತ್ತಬಾರದು: ಆಧವಾ ಒಂದು ಉದ್ಯೋಗವನ್ನು ಬಿಟ್ಟು ಬೇರೆ ಉದ್ಯೋಗವನ್ನು ಕೈಕೊಳ್ಳಬಾರದು. ಸಂಕಟಗಳು, ವಿಷ್ಣು ಗಳು ಮನುಷ್ಯನಲ್ಲಿ ಆಸ ಕಿಯನ್ನು ಹೆಚ್ಚಿಸಲಿಕ್ಕೂ, ನಿಶ್ಯವನ್ನು ದೃಢಪಡಿಸಲಿಕ್ಕೂ, ಸ್ವಾತಂತ್ರ್ಯಪ್ರೀತಿಯನ್ನು ವೃದ್ಧಿಗೊಳಿಸಲಿಕ್ಕೂ, ಅಪೂರ್ವತೆಯನ್ನು ವ್ಯಕ್ತಗೊಳಿಸಲಿಕ್ಕೂ ಕಾರಣಗಳಾಗುವವ, ಯಾವನು ಸಂಕಟಪರಂ ಪರೆಗಳಿಗೆ ಎದೆಗೊಟ್ಟು ಕಾರ್ಯ ಸಾಗಿಸುವನೋ ಅವನು ಪುಟಕೊಟ್ಟಿ ಚಿವು ಶುದ್ಧವೂ, ಹೆಚ್ಚು ಕಾಂತಿಮಯವೂ, ವಿಶೇಷ ಬೆಲೆಯು