&- ಹೇಳಿದಂತೆ ಪ್ರತ್ಯೇಕವಾಗಿರುವದರಿಂದ, ಅವನು ಪೂರ್ವಜರ ಅನುಕ ರಣಮಾಡುವದು ಯೋಗ್ಯವಾದೀತೇ?ಹುಡುಗರಿಗೆ ತಿಳಿಯಹತ್ತಿದ•ಗಿ ನಿಂದ ಅವರ ಒಲವು ಜಾಗ್ರತಿವಗಹತ್ವದ; ಕಾರ್ಯಕಾರಣ ಗಳಿಂದ ಚಿಕಿತ್ಸೆ ಮಾಡುವ ಅಧಿಕಾರವು ಪ್ರಸ್ತವಾಗುತ್ತದೆ. ಎಷ್ಟೋ ಹುಡುಗರು ಒಂದೇ ಸಾಲೆಯಲ್ಲಿ, ಒಂದೇ ವರ್ಗದಲ್ಲಿ, ಒಬ್ಬನೇ ಶಿಕ್ಷಕನಲ್ಲಿ ಕಲಿಯುತ್ತಿದ್ದರೂ, ಅವರೆಲ್ಲರ ಬುದ್ಧಿಯ, ವಿಚಾರ ಗಳೂ, ಶಿಕ್ಷಣವೂ ಭಿನ್ನ ಭಿನ್ನವಾಗುವಂತೆ, ಅವರವರ ಧೈಯಗಳೂ ಭಿನ್ನ ಭಿನ್ನವಾಗುವವು, ಹೀಗಿರಲು ಹೇಡಿ ಹಾಗು ಕರ್ತವ್ಯಪರಾ ಬುಖನಾದ ತಂದೆಯು ತನ್ನ ಓಜಸ್ವಿ ಹಾಗು ಕರ್ತವ್ಯನಿಷ್ಟ ಮಗನಿಗೆ ಮೇಲಿನಂತೆ ಬೋಧಿಸುವದು ಯೋಗ್ಯವೇ? ಅಪಕ್ವವಿಚಾರಗಳಿರುವ ವರೆಗೆ ಮಗನಿಗೆ ತಂದೆಯ ಬೋಧವು ಸಮ್ಮತವಾಗಿದ್ದರೂ, 'ಕರ್ತ ವ್ಯದಿಶೆಯನ್ನು ಕಂಡುಹಿಡಿದ ಮಗನಿಗೆ ತಂದೆಯ ಬೋಧದಲ್ಲಿ ಅರ್ಧ ವಿಲ್ಲೆಂಬದು ವ್ಯಕ್ತವಾಗುವದು, ಯಾಕಂದರೆ ಕರ್ತವ್ಯನಿಷ್ಕನು ತನ್ನ ಪೂರ್ವಜರ ಧನ-ಧಾನ್ಯಗಳನ್ನು ಉಪಯೋಗಿಸುವದರಲ್ಲಿ ಸುಖ ಯಾಗಿರುವದಿಲ್ಲ. ಅವನು ಅವುಗಳನ್ನು ಪಿತೃಗಳ ಪೂಜ್ಯತೆಯ ಮಾನದಿಂದ ಪ್ರಸಾದವೆಂದು ತಿಳಿದರೂ, ಮನುಷ್ಯತ್ವದ ದೃಷ್ಟಿ ಯಿ೦ದ ಅವನ್ನು ಅವನು ತನ್ನ ಮಾರಕ-ಆಗಾಹಗಳಂದು ಭಾವಿಸುವನು. ಹಿರಿಯರ ಹೆಸರಿನ ಮೇಲೆ, ಕೀರ್ತಿಯ ಮೇಲೆ, ಪುಣ್ಯದ ಮೇಲೆ, ಆಸ್ತಿಯ ಮೇಲೆ ಉಪಜೀವಿಸುವದು ಅಲೌಕಿಕ ಮನುಷ್ಯನಿಗೆ ನರಕಪ್ರಾಯವಾಗಿ ತೋರುವದು, ಹಿರಿಯರ ಆಸ್ತಿಯ ಚೆಳ್ಳಿ-ಬಕ್ಕರಿ, ಇಲ್ಲವೆ ತರತರದ ಪಕ್ವಾನ್ನ ಇವುಗಳ ಸೇವನಕ್ಕಿಂತ ಸ್ವಂತದ ಬೆವರುಹನಿಯಿಂದ ಸಂಪಾದಿಸಿದ ಕಾಟಿಯನ್ನು ಕುಡಿದುಜೀವಿ ಸುವದರಲ್ಲಿ ಹೆಚ್ಚು ಸುಖವದೆಯೆಂದು ಓಜಸ್ವಿ ಮನುಷ್ಯನು ಭಾವಿಸಿ, ಶಕ್ತಿಮೀರಿ ಹೆಣಗಿ ಆಲೌಕಿಕತೆಯನ್ನು ವ್ಯಕ್ತಗೊಳಿಸುವನು. ಆದ್ದ ರಿಂದ ಪ್ರಗತಿಹೊಂದಬಯಸುವ ಮನುಷ್ಯನು, ಸಾಧನಾಭಾವಕ್ಕಾಗಿ ತಡೆಯದೆ, ಅಪೂರ್ವತೆಗೆ ಭಂಗತಂದುಕೊಳ್ಳದೆ, ದೃಢನಿಶ್ಚಯಕ್ಕೆ
ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೪
ಗೋಚರ