ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

– ೩೪ ಚುತಿಬಾರದ ಹಾಗೆ, ಸ್ವಾತಂತ್ರ್ಯ ಪ್ರೀತಿಗೆ ಕುಂದು ತಟ್ಟಿದ ಹಾಗೆ ಕಾರ್ಯಮಾಡಿ ಪ್ರಗತಿಹೊಂದಬೇಕು. ೫ನೆಯ ಖಂಡ-ಪ್ರತಿಕೂಲತೆ, (“ಮಹಾರಾಜಾ, ಈ ಘಟಕ್ಕೆ ಬಂದು ಪ್ರತಿಕೂಲಪ್ರಸಂಗ ಗಳು ನಿಮಗೆ ಬಂದಿದ್ದರೆ 'ಮಹಾರಾಜಾ ನಿಮ್ಮ ಸ್ಥಿತಿಯು ಏನಾಗು ತಿತೊ ಹೇಳಲಾಗದು ಮಹಾರಾಜಾ ! ಮಹಾರಾಚಾ ಮನೆಯಲ್ಲಿ ರಾಮಭಟ್ಟ ತಂದೆಯವರ ತ್ರಾಸ, ಅಣ್ಣ-ತಮ್ಮಂದಿರಸ, ಜಾಜ್ಯ ಲ್ಯ ಸ್ವಭಾವದ ಹೆಂಡತಿಯೆತ್ರಾಸ ಅಲ್ಲದೆ ಆಷ್ಯರ ಹಾಗು ನೆರೆ ಹೊರೆಯವರ ನಿಂದು, ಚೇಷ್ಮೆ, ಅಪಮಾನಗಳತ್ರಾಸ ಇಷ್ಟೆಲ್ಲ ತ್ರಾಸ ಗಳನ್ನು ಸಹಿಸಿ ಸಹಿಸಿ, ಮಹಾರಾಜಾ, ಸಾಧು'ಎಂಬ ಎರಡು ಅಕ್ಷರ ಗಳನ್ನು ಕಾಯ್ದುಕೊಳ್ಳಬೇಕಾದರೆ ಈ ದೇಹವು ಎಷ್ಟು ಕಷ್ಟ ಪಟ್ಟ ರುವದೆಂಬದನ್ನು ನೀವೇನು ತಿಳಿದೀರಿ ಮಹಾರಾಜಾ ” ಎಂಬ ಶ್ರೀ ಶೇಷಾಚಲ ಸದ್ಗುರು ಮಹಾರಾಜರವರ ಉಪದೇಶವು ಸ್ಮರಣವಾಯಿ ತೆಂದರೆ ನಮ್ಮ ಹೃದಯವು ಕಂಪಿಸಹತ್ತುತ್ತದೆ. ಪ್ರತಿಕೂಲಸಂಗತಿಗಳಿಂದ ಶ್ರೀ ಶೋಷಾಚಲ ಗುರುವರರಲ್ಲಿ ಸಾಧ್ಯ ತ್ವವು ನೆಲೆಗೊಂಡದ್ದು ಹ್ಯಾಗೆಂಬದನು ವಿವೇಚಿಸುವಾ, ಭಾವಿಕರ ದೃಷ್ಟಿಯಿಂದ ಅವರು ಶ್ರೀ ಚಿದಂಬರನ ದ್ವಿತೀಯಾವತಾರಿಕರು ಆಗಿ ದರೂ ಪ್ರಯತ್ನವಾದಿಗಳ ದೃಷ್ಟಿಯಿಂದಲೂ, ಅವರ ಅವತಾರದ ಮಹತಿಯು ತಿಳಿದುಬರುವಂತಿದೆ. ಸದರುಗಳು ಸಾಧಾರಣಸ್ಥಿತಿಯ ಬ್ರಾಹ್ಮಣಮನೆತನದಲ್ಲಿ ಜನ್ಮತಾಳಿದರು; ಅವರು ಸ್ವಭಾವತಃ ಕುಶಾ ಗ್ರಬುದ್ಧಿಯವರಾಗಿರದೆ, ಮಂದಬುದಿಯವರಾಗಿದ್ದರು. ಬಾಲ್ಯ ದ ಬಹಳದಿವಸಗಳವರೆಗೆ ಅಭ್ಯಾಸದಕಡೆ ಲಕು ಇರದ್ದರಿಂದ ಕೇವಲ ಆಟನೋಟಗಳಲ್ಲಿ ಹೊತ್ತುಗಳೆಯುತ್ತಿದ್ದರು, ಉಪನಯನ, ಸಂಸ್ಕಾರವಾದಮೇಲೆ ಅವರ ವೈದಿಕ ಶಿಕ್ಷಣಕ್ಕೆ ಪ್ರಾರಂಭವಾಯಿತು' ಆದರೆ ದಡ್ಡತನದ ಮೂಲಕ ಅವರು ಅದರಲ್ಲಿ ಆಗ ಪ್ರಗತಿಯನ್ನು