ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩L ಎದುರಿಗೆ ಅವರನ್ನು ಸಿಕ್ಕ ಸಿಕ್ಕ ಹಾಗೆ ಅಂದುಕೊಂಡರು. ಇವೆಲ್ಲ ಪರೀಕ್ಷೆಗಳಲ್ಲಿ ಸಾಧುಗಳು ಉತ್ತೀರ್ಣರಾಗಲಿಕ್ಕೆ ಅವರಲ್ಲಿದ್ದ ದೃಢ ನಿಶ್ಚಯ. ಅಲೌಕಿಕತೆ ಮೊದಲಾದ ಗುಣಗಳ ಸಹಾಯವಾಯಿತು' ಎಂಧ ಪ್ರತಿಕೂಲಪ್ರಸಂಗದಲ್ಲಿಯೂ ಅವರಿಗೆ ಸಾಧನದಮಾರ್ಗವು ಸುಗಮವಾಗಿ ತೋರುತ್ತಿತ್ತು ಅಂತೇ ಅವರು ಅಲೌಕಿಕರೂ ಕರ್ತ ಮಾ ಕರ್ತುಮಶಕ್ತಿಯುಳ್ಳವರೂ ಆಗಿ ಲೋಕದಲ್ಲಿ ವಿಖ್ಯಾತ ರಾದರು ಪ್ರತಿಕೂಲತೆಯಲ್ಲಿ ಪ್ರಗತಿಯನ್ನು ಹೊಂದಬೇಕಾದರೆ, ಸೌಜನ್ಯ, ಸಹನಶೀಲತೆ, ಶ್ರಮಸಹಿಷ್ಣುತೆ, ದೀರ್ಘ ಪರಿಶ್ರಮ ಈ ಗುಣಗಳು ಸಾಧಕನಲ್ಲಿರಬೇಕಾಗುತ್ತವೆ. ಒಂದೇ ಕಾರಖಾನೆಯೊಳಗಿನ 'ಸರಿ ಜೋಡಿಯಿಂದ ಕೆಲಸಮಾಡುವ ಇಬ್ಬರು ಕೆಲಸಗಾರರಲ್ಲಿ ಒಬ್ಬನ ಲಕ್ಷವು ತನ್ನ ಪಗಾರವು ಎಷ್ಟು ಬೇಗ ಹೆಚ್ಚಿತೆಂಬದರ ಕಡೆಗೆ ಇದ್ದರೆ, ಇನ್ನೊಬ್ಬನ ಲಕ್ಷವು ತಾನು ಎಷ್ಟು ಬೇಗ ಕಾರಖಾನೆಯ | ಎಲ್ಲ ಕೆಲಸಗಳಲ್ಲಿ ಪಾರಂಗತನಾದೇನೆನ್ನುವದರ ಕಡೆಗೆ ಇರುತ್ತದೆ. ಮೊದಲನೆಯವನಿಗೆ ವರ್ಷರುತಿಂಗಳುಗಳಲ್ಲಿ ಬಡತಿ ಸಿಗರಾಗಲು, ಅವನು ಮನಸ್ಸುಗೊಟ್ಟು ಕೆಲಸಮಾಡದಾಗುವನು. ಆದರೆ ಇದಕ್ಕೆ ವಿರುದ್ದವಾಗಿ ಎರಡನೆಯವನು ಬಡತಿಯ ಆಶೆಗೆ ಬೀಳದೆ ಕಾರಖಾ ನೆಯನ್ನು ನಡೆಸುವ ಕಾರಖಾನದಾರನ ಗುಹ್ಯಗಳನ್ನು ತಿಳಿದುಕೊಳ್ಳು ವದರಲ್ಲಿ ಸತತವಾಗಿ ಶ್ರಮಪಡುವನು, ಆಕಸ್ಮಿಕ ಪ್ರಸಂಗದಿಂದ ಕಾರಖಾನೆಯು ಬಂದುಮಾಡಲ್ಪಟ್ಟರೆ, ಮೊದಲನೆಯವನು ನಿರಾಧಾ ರನಾಗಿ, ನೌಕರಿಗಾಗಿ ಕಂಡಕಂಡವರನ್ನು ಯಾಚಿಸಹತ್ತುವನು. ಎರಡನೆಯವನು ಕೂಡಲೆ ಚಿಕ್ಕದೇ ಯಾಕಾಗಲೆಲ್ಲ ದು ಸ್ವಂತದ ಉದ್ಯೋಗವನ್ನು ಪ್ರಾರಂಭಿಸಿ, ಉತ್ಸಾಹದಿಂದಲೂ, ಜಾಗ್ರತೆಯಿಂ ದಲೂ ನಡೆಯಿಸಹತ್ತುವನು. ಆದ್ದರಿಂದ ಪ್ರಗತಿಯ ನಿಜವಾದ ತತ್ವಗಳನ್ನು ಪ್ರತಿಕೂಲ ಸಂಧಿಯನ್ನೇ ಅನುಕೂಲ ಮಾಡಿಕೊಳ್ಳುವ ರಹಸ್ಯವನ್ನು-ಬಲ್ಲಂಧ ಮನುಷ್ಯನನ್ನು ಪ್ರಗತಿಮಾರ್ಗದಿಂದ ಪರಾ