ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wಳಲ್ಲಿ ಮಾಡಹತ್ತಿವೆ' ಅರ್ಧ ಸಾಧಕದ ವಿಚಾರಗಳ ಚರ್ವಣವಾಗಹತ್ತಿ ಜನರ ಆರ್ಥಿಕ ದೃಷ್ಟಿಯು ವಿಸ್ತ್ರತವಾಗಹತ್ತಿದೆ. ಕನ್ನಂಬಾಡಿಯ (ಕೃಷ್ಣರಾಜಸಾಗರ'ದಂಧ ವಿಸ್ತೀರ್ಣ ಕೆರೆ ಕಟ್ಟಲು ಪ್ರಾರಂಭ ವಾದ್ದರಿಂದ ರೈತರು ವಿಶ್ವೇಶ್ವರಯ್ಯನವರ ವಿಷಯಕ್ಕ ಆದರವುಳ್ಳವ ರಾಗಿದ್ದಾರೆ. ಪ್ರಜಾಪ್ರತಿನಿಧಿಸಭೆಯಿಂದ ರಾಜ-ಪ್ರಜೆಗಳಲ್ಲಿ ಪ್ರೇಮವು ವೃದ್ಧಿ೦ಗತವಾಗಹತ್ತಿದೆ. ಆದರೆ ಇದು ಯಾತರ ಫಲವು' ಸರ ವಿಶ್ವೇಶ್ವರಯ್ಯನವರ ಸಮಯಸಾಫಲ್ಯವೆಂದು ನಿಸ್ಸಂಶಯವಾಗಿ ಮೂರು ಮೂರು ಸಾರೆ ಹೇಳಬಹುದು. ಯಾಕೆಂದರೆ, ವಿಶ್ವೇಶ್ವರ ಯನವರಿಗಿಂತ ಮೈಸೂರ ರಾಜ್ಯಕ್ಕೆ ಪೂರ್ವದಲ್ಲಿ ದಿವಾಣರಿದ್ದಿಲ್ಲ ವೆಂತಲ್ಲ: ಇಲ್ಲವೆ ಆಗ ಅನಾನುಕೂಲತೆಗಳು ಇದ್ದವೆಂದು ಹೇಳ ಲಿಕ್ಕೂ ಬರುವಹಾಗಿಲ್ಲ ಆಗ ಈಗಿನಕ್ಕಿಂತ ಹೆಚ್ಚು ಅನುಕೂಲತೆ ಗಳು ಇದ್ದವು. ಪ್ರಸ್ತುತದ ಮಹಾಯುದ್ಧದಂಧ ಸಾಧನಾಭಾವದ ಪ್ರಸಂಗದಲ್ಲಿ ಕೂಡ ಮೈಸೂರರಾಜ್ಯದ ಸುಧಾರಣೆಯು ಒಂದೇಸ ವನೆ ಆಗುವದನ್ನು ನೋಡಿದರೆ ಸಮಯ ಸಾಫಲ್ಯ ಮಾಡಿಕೊಳ್ಳುವ ಶಕ್ತಿ ವಿಶೇಷದಿಂದ ವಿಶ್ವೇಶ್ವರಯ್ಯನವರು ಕೀರ್ತಿಶಾಲಿಗಳಾಗುತ್ತಲಿ ರುವರು: ಅವರ ದೃಢನಿಶ್ಚಯ, ಸ್ವಾತಂತ್ರ್ಯಪ್ರೀತಿ, ಸುಧಾರಣಾ ಕಾಂಕ್ಷೆ, ದೇಶಹಿತರಕ್ಷತೆ ಮೊದಲಾದ ಗುಣಗಳು ಆವರ್ಣನೀಯವಾ ಗಿವೆ. ಇವರು (ಕ್ಷಣಶಃ ಕಣಶಃ ಚೈವ ವಿದ್ಯಾವರ್ಧಂಚ ಸಾಧ ಯೇತ್” ಎಂಬಂತೆ ತಮ್ಮ ಪ್ರತಿಕ್ಷಣವನ್ನು ದೇಶಹಿತದಲ್ಲಿ ವೆಚ್ಚ ಮಾ ಡುತ್ತಿರುವದರಿಂದ ಇವರ ಪ್ರಸಿದ್ದಿಯಾಗಹತ್ತಿದ್ದರಲ್ಲಿ ಆಶ್ಚರ್ಯವಿಲ್ಲ. ಕೈ, ಶ್ರೀ ದೇಸಾಯಿ ಎಂಬ ಗಣಿತಜ್ಞರು ಒಂದು ಮಿನಿ ಟನ್ನು ಸಹ ವ್ಯರ್ಥವಾಗಿ ಕಳೆಯುತ್ತಿಲ್ಲವಂತೆ; ಹೊತ್ತುಹೋ ದರೆ ಮತ್ತಬಾರದು, ಮುತ್ತುಹೋದರೆ ಮತ್ತೆ ಬಪ್ಪದು ಸಾವಿರಾರು ರೂಪಾಯಿಗಳಿಗಿಂತ ಒಂದು ತಾಸಿನ ಬೆಲೆ ಎಷ್ಟೇ ಹೆರುವ ದೆಂದು ಅವರು ಭಾವಿಸಿದ್ದರು. ಅವರ ನಡಿಗೆಯ ಗತಿಯು ಕೇವಲ ಯಾಂತ್ರಿಕ ಪದ್ಧತಿಯದಾಗಿತ; ಮನೆಯಿಂದ ಸಾಲೆಗೆ ಬರಲಿಕ್ಕೆಂದು