ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೪೧ನಿಯಮಿಸಿದ ಮಿನಿಟುಗಳಲ್ಲಿ ಅವರು ತಪ್ಪದೆ ಬರುತ್ತಿದ್ದರು. ಪ್ರಿನ್ಸಿ ಪಾಲರಿದಾಗ ರಾತ್ರಿ ಹುಡುಗರ ಕೋಣೆಯನ್ನು ತಪಾಸಿಸುವಾಗ ಪ್ರತಿನಿತ್ಯ ಇಂಧವನ ಕೋಣೆಗೆ ಇಷ್ಟು ಹೊಡೆದು ಇಷ್ಟುಮಿನೀಟಿಗೆ ತಪ್ಪದೆ ಹೋಗುತ್ತಿದ್ದರು. ಆ ಕಾಲವನ್ನು ಅವರು ಎಂದೂ ತಪ್ಪಿ ಸಲಿಲ್ಲ. ಆ ವೇಳೆ ತಪ್ಪಿಸಬೇಕೆಂಬ ವಿಚಾರಮಾಡಲಿಕ್ಕೆ ಕೂಡ ಆವ ರಿಗೆ ಸಮಯದೊರೆಯುತ್ತಿಲ್ಲವಂತೆ! ಆದರೆ ದೇಸಾಯಿಯವರ ಅನುಕರಣಮಾಡಿ ಸಮಯಸಾಫಲ್ಯ ಮಾಡಿಕೊಳ್ಳುವದರಲ್ಲಿ ಅವರ ಶಿಷ್ಯರಲ್ಲಿ ಎಷ್ಟು ಜನ ವಿದ್ಯಾರ್ಥಿ ಗಳು ನಮ್ಮ ಕಣ್ಣಿಗೆ ಬೀಳುತ್ತಾರೆ. ಒಬ್ಬನೂ ಇಲ್ಲವೆಂದು ಹೇಳ ಬಹುದು. ಸರ್ವ ಸಾಧಾರಣವಾದ ನಿಷ್ಕಾಳಜಿತನವೂ, ವೇಳೆಯ ಅಮೂಲ್ಯತೆಯ ಅಜ್ಞಾನವೂ ಇವೇ ಆಯುಷ್ಯವನ್ನು ಶೋಕವರ್ಯ ವಸಾಯಿಯಾಗಿಮಾಡುವ ಕಡುವೈರಿಗಳಾಗಿವೆ. ಬಹುಜನರು ತಮ್ಮ ಆಯುಷ್ಯದೊಳಗಿನ ಎಷ್ಟೋ ತಾಸುಗಳನ್ನೂ, ದಿವಸಗಳನ್ನೂ ತಿಂಗಳುಗಳನ್ನೂ ನಿರರ್ಥಕವಾದ ಕಾರ್ಯಗಳಲ್ಲಿ ಕಳೆಯುತ್ತಾರೆ. ಆಲಸ್ಯದಲ್ಲಿಯಾಗಲಿ, ಖುಷಿಮೋಜಿನಲ್ಲಾಗಲಿ ವ್ಯಯಮಾಡುವ ವೇಳೆಯ ಶತಾಂಶದಷ್ಟು ಹಣವನ್ನು ಕೂಡ ಅತ್ಯಂತ ದೀವಾಳಿಸೋ ರನು ಸಹ ಹಾಳುಮಾಡಿಕೊಳ್ಳುವದಿಲ್ಲ. ಲೋ ಟಿಳಕರ ವಿಷಯಕ್ಕೆ ಆದರವಹಿಸುವ, ಅವರ ಯಶ ಸೃನ್ನು ಕುರಿತು ಚಕಿತರಾಗುವ, ಅವರನ್ನು ಹಿಂದುಮಾತೆಯ ಭಾಗ್ಯ ವಾನ್ ಇತ್ರರೆಂದು ಭಾವಿಸುವ ಜನರು, ಟಿಳಕರವರು ಹೊಂದಿರುವ ಪ್ರಗತಿಯು ಅವರ ಸಮಯಸಾಫಲ್ಯದ ಫಲವೇ ಆಗಿದೆಯೆಂದು ತಿಳಿಯ ಬೇಕಲ್ಲವೇ? ಟಿಳಕರವರು ಪ್ರತಿಯೊಂದು ಸಾರೆಯ ಜೀಲಿನೊಳಗಿನ ಆಯುಷ್ಯವನ್ನು ಕೂಡ ಸಾಫಲ್ಯಮಾಡಿಕೊಂಡಿರುವರಾದ್ದರಿಂದ, ಅವ ರಂಧ ಬೇರೆ ಉದಾಹರಣೆಯೇ ಇಲ್ಲದಾಗಿದೆ. ಸಮಯ ಸಾನಲ್ಲವೇ ನಿಜವಾದ ಜೀವನ ಸಾಫಲ್ಯವು, ನಿರರ್ಥಕವಾಗಿ ವೇಳೆ ಕಳೆದು ಯಾರು ಪ್ರಸಿದ್ದಿಗೆ ಬಂದಿರುವರು? ಮರಣವು ಅನಿತ