ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

~೪೨ ವಾದ್ದರಿಂದ ಪ್ರತಿಕ್ಷಣದಲ್ಲಿ ಪ್ರಗತಿಪರ ಕಾರ್ಯ ಮಾಡಲಿಕ್ಕೆ ಹಿಂದು ಮುಂದು ನೋಡಬಾರದು. 'ಬೇಕಾದರೆ ದುಡ್ಡು ಹಾಳು ಮಾಡಿರಿ, ಮನೆವಾರು ಹಾಳು ಮಾಡಿಕೊಳ್ಳಿರಿ; ಆದರೆ ವೇಳಯನ್ನು ಮೂತ್ರ ಹಾಳುಮಾಡಿಕೊಳ್ಳಿ ಬೇಡಿರಿ” ಎಂದು ಒಬ್ಬ ಆಂಗ್ಲ ಗ್ರಂಧಕಾರನು ಸಮಯದ ಮಹತ್ವ ವನ್ನು ಒಂದು ಕಡೆಗೆ ಹೇಳಿರುವನು, ಬೆಲೆಬಾಳುವ ಯಾವ ವಸ್ತು ಗಳ ವೇಳೆಯನ್ನು ಸರಿಗಟ್ಟಲಾರವು. ವೇಳೆಯು ಅಮೂಲ್ಯವಾ ಗಿದೆ. ವೇಳೆ ಯ ಅಪವ್ಯಯದಿಂದ ಆಗಬಹುದಾದ ಹಾನಿಯು ಯಾತರಿಂದಲೂ ತುಂಬಿಬರಲಾರದು. (ಬಾಣಬಿಟ್ಟರೆ ಹೋಯಿತು, ಮುತ್ತು ಒಡೆದರೆ ಹೋಯಿತು” ಎಂಬಂತೆ ಸಂದ ವೇಳೆಯು ತಿರುಗಿ ಎಂದೂ ಬರಲಾರದು. ನಿರರ್ಧಕವಾಗಿ ದುಡ್ಡನ್ನು ಹಾಳುಮಾಡುವ ಮನುಷ್ಯನನ್ನು ಜನರು ನಿಂದಿಸುವಂತೆ ವ್ಯರ್ಥವೇಳೆಯನ್ನು ಕಳೆಯುವ ಮನುಷ್ಯನನ್ನು ಜನರು ಹಳಿಯುವದಿಲ್ಲ. ಈ ಆಲಸ್ಯಗಾರರು ಪ್ರಗತಿ ಪಧವನ್ನು ಹಿಡಿಯಲು ತಮಗೆ ಯೋಗ್ಯ ಸಮಯವೇ ಸಿಗುವದಿಲ್ಲೆಂ ತಲೂ, ಸಾಧನಗಳು ಸರಿಯಾಗಿರುವದಿಲ್ಲೆಂತಲೂ, ಹಿಡಿದ ಕಾರ್ಯ ದಲ್ಲಿ ಯಶವು ಬರುವದಿಲ್ಲೆಂತಲೂ ಗುಣಗುಳ್ಳವರು. ಆದರೆ ಇವರು ತಮ್ಮ ವೇಳೆಯನ್ನು ಸರಿಯಾಗಿ ಉಪಯೋಗಿಸಲಾರದವರು ದರಿಂದ ಇವರ ಪ್ರಗತಿಯು ಎಂದೂ ಆಗಲಿಕ್ಕಿಲ್ಲಂಬದು ಸಿದ್ದಾಂತವು. ಎಂಜಿನವು ಎಷ್ಟು ಕಾಳಜಿಯಿಂದ ತಯಾರಿಸಲ್ಪಟ್ಟಿದರೂ, ಅದಕ್ಕೆ ಉಗಿಯಶಕ್ತಿಯು ದೂರತರತು ಆದು ಒಂದು ತುಸು ಕೂಡ ಸರಿದಾಡಲಾರದು, ಅದರಂತ ಸಾಮರ್ಥ್ಯವು ಎಷ್ಟಿದ್ದರೇನು? ಅದರ ಉಪಯೋಗ ಮಾಡಿಕೊಂಡರೆ ಮಾತ್ರ ಪ್ರಯೋಜನವಾಗುವ ಸಂಭವವಿರುವದು? ಕರ್ತವ್ಯ ಬುದ್ಧಿಯನ್ನು ಜಾಗೃತಗೊಳಿಸಿದ್ದರಿಂದಲೇ ನಮ್ಮಲ್ಲಿಯ ಎಷ್ಟೋ ಜನರ ಆಯುಷ್ಯವು ವ್ಯರ್ಥವಾಗಿ ಕ್ಷೀಣಿಸ ಹತ್ತಿದೆ. ಅವರು ಕೈಲಾಗದವರೆಂತಲ್ಲ. ಬಹು ಜನರು ಸಮಯ ಸಾಫಲ್ಯದ ಮಹತ್ವವನ್ನರಿಯದೆ, ಗಾಢನಿದ್ರೆಹದವರಂತೆ ಸುಖರೂಪ