ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ಶ್ರೀಮಂತನೂ, ಅಶಿಕ್ಷಿತನು ಸುಶಿಕ್ಷಿತನೂ ನಿಶ್ಚಯವಾಗಿ ಆಗುವನು, ನೌಕರಿಯನ್ನು ಮಾಡಿ ಉಳಿದ ಕಿರುಕಳ ವೇಳೆಯಲ್ಲಿ ಕೆಲಸಮಾಡಿ ಹತ್ತಿ ಪ್ರೊಧೋಂಡೋಪಂತ ಕರ್ವೆಯವರು ಶಿಕ್ಷಣದ ಹಲವು ಸಂಸ್ಥೆ, ಅನಾಧಬಾಲಿಕಾಶ್ರಮ, 'ವನಿತಾವಿದ್ಯಾಲಯ, ನಿಷ್ಕಾಮ ಕರ್ಮಮರ, ಸ್ತ್ರೀಯರ ಸ್ವತಂತ್ರ ಯುನಿವರ್ಸಿಟಿಗಳನ್ನು ಸ್ಥಾಪಿಸಿ ದರು. ಕೈ. ನಾ. ರಾನಡೆಯವರು ತಮ್ಮ ಕಿರುಕಳ ವೇಳೆಯನ್ನು ದೇಶಹಿತದ ಕಾರ್ಯದಲ್ಲಿ ಉಪಯೋಗಿಸಿ, ಪ್ರಸಿದ್ಧ ದೇಶಹಿತಚಿಂ ತಕರಾದರು. ಪ್ರಸ್ತುತದಲ್ಲಿ ಈ ಕಿರುಕಳ ವೇಳೆಯಲ್ಲಿ ಶಿಕ್ಷಣಕೊಡುವ ಹಲವು ಸಂಸ್ಥೆಗಳು ರಾಜಾಶ್ರಯ-ಲೋಕಾಶ್ರಯಗಳಿಂದ ನಡೆದಿರು ನವು. ಇವುಗಳಿಂದ ಜನರಿಗೆ ಬಹಳ ಉಪಯೋಗವಾಗುತ್ತಲಿದೆ. ಇದೇ ಊರಲ್ಲಿ ಇದು ಪಟ್ಟಣಗಳಲ್ಲಿ ನಡೆಯುವ ಶಿಕ್ಷಣವನ್ನು ಕಲಿಸುವ (ಅಕೌಂಟನ್ಸಿ ಕೋರ್ಸದಂಧ ಉಪಯುಕ್ತ ಪತ್ರವ್ಯವಹಾ ರದ ಸಂಸ್ಥೆಗಳೂ, ರಾತ್ರಿಯಸಾಲೆ, ಸೂಟಿಯದಿವಸದಸಾಲೆ, ಕೂಲಿ ಕಾರರ ಸಾಲೆಗಳೂ ಇದಕ್ಕೆ ಉದಾಹರಣಗಳಾಗಿವೆ. ಈ ಸಂಸ್ಥೆಗಳ ದ್ವಾರಾ ತಮ್ಮ ತಮ್ಮ ಕಿರುಕಳ ವೇಳೆಯಲ್ಲಿ ಪ್ರಗತಿಯನ್ನು ಹೊಂದ ಲಿಕ್ಕೆ ಅತ್ಯಂತ ಸಹಾಯವಾಗಿದೆ. ಮುಖ್ಯವಾದ ಮಾತು ಏನಂದರೆ, ತವ ಇಡಿ ಆಯುಷ್ಯವು ತಮ್ಮ ಪ್ರಗತಿಯ ಸಲುವಾಗಿಯೇ ಇರುತ್ತದೆ. ಹಲವು ತರದ ವಸ್ತು ಗಳು, ಪ್ರಸಂಗಗಳು, ಪ್ರಾಣಿಗಳು ಇವು ನಮ್ಮ ಪ್ರಗತಿಗೆ ಕಾರಣೀಭೂ ತಗಳಾಗಿರುತ್ತವೆ. ಕಣ್ಣು ಹಾಗು ಕಿವಿಗಳನ್ನು ತೆರೆದಿಟ್ಟು ಆಯು ಷ್ಯದ ಪ್ರತಿಕ್ಷಣವನ್ನು ಜ್ಞಾನಾರ್ಜನ-ಪ್ರಗತಿಯಲ್ಲಿ ಕಳೆಯಬೇಕು. ಕೆಲವಂಬಲ್ಲವರಿಂದ ಕಲ್ಲುಕಲವಂ ಸುಜ್ಞಾನದಿಂನೋಡುತ” ಇತ್ಯಾ ದಿ ವಿಚಾರಗಳ ಸೋಮೇಶ್ವರಕವಿಯ ಉಕ್ತಿಯಂತೆ ನಾವು ದಿನಾಲು ಕೇಳುವ ಸಂಭಾಷಣಗಳಿಂದಲೂ, ಕೇಳುವ ಸುದ್ದಿಗಳಿಂದಲೂ, ಓದುವ ಪುಸ್ತಕಗಳಿಂದಲೂ ಪ್ರಗತಿಮಾರ್ಗಕ್ಕೆ ಅವಶ್ಯವಿರುವ ಸಂಗತಿಗಳನ್ನು