ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೪- ಮರಾಟರ ಕೈಸೇರಿ ತಾನಾಜಿಯ • ಪ್ರತಿಜ್ಞೆಯು ಈಡೇರಿತು? ಇದು ಯಾತರ ಫಲವೆಂದು ನಾವು ಭಾವಿಸಬೇಕು? ತಾನಾಜಿಯ ಪ್ರತಿಜ್ಞೆಯ ಸಲವೋ, ಶಿವಾಜಿಯ ಪುಣ್ಯವೋ, ಸೂರ್ಯಾಜೆಯ ಸಮಯಾನುವ ರ್ತನದ ಫಲವೋ, ಅಧವಾ ಮಾವಳರ ಶೌರ್ಯದ ಫಲವೋ? ಸಿಂಹ ಗಡವು ಕೈಸೇರುವದಕ್ಕಾಗಿ ಇವೆಲ್ಲ ಸಾಧನಗಳ ಸಹಾಯವಾಗಿದ್ದರೂ ಆ ಎಲ್ಲ ಸಾಧನಗಳನ್ನು ಏಕಸಮಯಾವಚ್ಛೇದದಿಂದ ಉಪಯೋ ಗಕ್ಕೆ ತಂದ ಮುಖ್ಯ ಸಾಧನವು ಆಶ್ರಯರಜ್ಜು ಛೇದನವಾಗಿದೆ. ಸೂರ್ಯಾಜಿಯು ಗಡದಿಂದ ಇಳಿದು ಹೋಗುವ ಹಗ್ಗವೊಂದನ್ನು ಕೊಯ್ಯದಿದ್ದರೆ, ದುರ್ಗವು ಕೈಸೇರುವದೊತ್ತಟ್ಟಿಗೇ ಇರಲಿ, ಶಿವಾ ಜಿಯ ವಿಷಯಕ್ಕೆ ಈಗ ಉಪಲಬ್ದವಾಗಿದ್ದ ಇತಿಹಾಸವು ಕೂಡ ಬೇರೆ ರೀತಿಯಾಗಿಯೇ ನಮಗೆ ದೊರೆಯಬಹುದಾಗಿತ್ತು, ಆಶ್ರಯ ರಜ್ಜು ಛೇದನದಿಂದ ಪ್ರಗತಿಮಾರ್ಗದಲ್ಲಿ ಎಷ್ಟು ಬೇಗ ಕ್ರಾಂತಿಯಾ ಗುವದಂಒದು ಮೇಲಿನ ಉದಾಹರಣೆಯಿಂದ ಬಹು ಸ್ಪಷ್ಟವಾಗಿ ತಿಳಿಯಬರುವಂತಿದೆ. ಪರಾಜಯಕ್ಕೆ ಆಸ್ಪದವೇ ಉಳಿಯಬಾರದೆಂದು, ತನ್ನ ಸೈನ್ಯ ವೆಲ್ಲ ಇಂಗ್ಲಂಡದ ಧಡಕ್ಕೆ ಇಳಿದ ಕೂಡಲೆ ಜುಲಿಸಸೀಝರನೆಂಬ ಪ್ರಸಿದ ಸೇನಾನಾಯಕನು ತನ್ನ ಎಲ್ಲ ಹಡಗಗಳನ್ನು ಶಿಪಾಯಿಗಳ ಸಮಕ್ಷ ಒಮ್ಮೆಲೆ ಸುಟ್ಟು ಬಿಟ್ಟನು. ಇದರಂತೆ ಸದ್ಯದ ಮಹಾಯು ದದಲ್ಲಿ ಜರ್ಮನ್ನರೂ, ದೋಸ್ತ್ರ ರಾಷ್ಟ್ರದವರೂ ತಮ್ಮ ತಮ್ಮ ಸೈನ್ಯವು ನಿಕರದಿಂದ ಕಾದುವದಕ್ಕಾಗಿ, ಹೊಳೆ-ಹಳ್ಳಗಳನ್ನು ದಾಟಿ ದನಂತರ ತಾವು ಕಟ್ಟಿದ ಪೂಲುಗಳನ್ನು ತಾವೇ ನಾಶಮಾಡಿ ಮುಂ ದಕ್ಕೆ ಸಾಗುತ್ತಿರುವರು. ಹೀಗೆ ಮಾಡುವದು ಸಾಮಾನ್ಯರ ದೃಷ್ಟಿ ಯಿಂದ ಹಾಸ್ಯಾಸ್ಪದವಾಗಿದ್ದರೂ, ಅದರಲ್ಲಿ ಬಹಳ ಮಹತ್ವವಿರುವ ದೆಂದು ಪ್ರಗತಿಪರ ಮನುಷ್ಯನು ಭಾವಿಸುವನು, ನಿರ್ವಾಣದ ಪ್ರಸಂ ಗದಲ್ಲಿ ಕೂಡ ಸ್ವಲ್ಪಾದರೂ ಆಶ್ರಯವಿರುವವರೆಗೆ ಹಿಂದಕ್ಕೆ ಸರಿ ಯುವದು ಮನುಷ್ಯನ ಸ್ವಾಭಾವಿಕ ಪ್ರವರ್ತಿಯಾಗಿದೆ. ಆಶ್ರಯ