ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೪F ಎಷ್ಟೋ ಜನರ ಪ್ರಗತಿಯ ಅವನತಿಗೆ ಕಾರಣವೇನೆಂದರೆ, ಅವರಲ್ಲಿ ಹಿಡಿದ ಕಾರ್ಯದಲ್ಲಿ ತಮಗೆ ಯಶಃಪ್ರಾಪ್ತಿಯು ಆಗಿಯೇ ತೀರುವದೆಂಬ ದೃಢನಿಶ್ಚಯವಿಲ್ಲದಿರುವದು. ನಾವು ಎಂಧ ಪ್ರಕಾ ರದ ಹಾಗು ಎಷ್ಟು ಪ್ರಗತಿಯನ್ನು ಹೊಂದಬೇಕೆಂದು ಬಯಸುವೆವೋ ಅಂಧ ಪ್ರಕಾರದ ಹಾಗು ಅವ್ರ ತರದ ಪ್ರಯತ್ನಗಳನ್ನು ಮಾಡಲಿಕ್ಕೆ ಮಾತ್ರ ನಾವು ಹತ್ತುವದಿಲ್ಲ. ಶಿಕ್ಷಣಪ್ರೀತ್ಯರ್ಧವಾಗಿ ಸದಾಚಾರ ದಿಂದ ನಡೆದು ತಪಗಟ್ಟಲೆ ಕಷ್ಟ ಪಡಲು ಮನಸ್ಸು ಮಾಡದಾಗು ವೆವ. ಕ್ಷಣಿಕ ಹಾಗು ಕ್ಷುಲ್ಲಕವಾದ ಸುಖವನ್ನು ತ್ಯಜಿಸಲಿಕ್ಕೂ, ಶ್ರೇಷ್ಟವಾದ ಪ್ರಗತಿಯ ಸಲುವಾಗಿ ಖುಷಿಮೇಜುಗಳನ್ನು ಕಡಿಮೆ ಮಾಡಲಿಕ್ಕೂ ಒಪ್ಪದಾಗುವೆವು, ಕಿರುಕಳ ವೇಳಯನ್ನು ಆತ್ಮಸುಧಾರಣೆಗಾಗಿ ಉಪಯೋಗಿಸು ವದಕ್ಕೂ, ಸಾಮರ್ಥ್ಯ ವನ್ನು ಆರೋಗ್ಯಾದಿ ಸಾಧನಗಳಿಂದ ಬೆಳೆಸಿ ಸುಖಪಡಲಿಕ್ಕೂ ನಮಗೆ ಇಚ್ಛೆಯುಂಟಾಗುವದಿಲ್ಲ. ಯಾರು ಸಂಕ ಶಕ್ತಿಯುಳ್ಳವರಿಲ್ಲವೋ, ದೃಢಮನಸ್ಯರಿಲ್ಲವೋ, ಅಪೂರ್ವತೆಯ ಗುಣಗಳುಳ್ಳವರಿಲ್ಲವೋ, ಯಾರು ಶ್ರಮಸಹಿಸಲಾರರೂ, ಸ್ವಾವಲಂಬಿ ಗಳಲ್ಲವೋ, ಸಮಯಾನುವರ್ತಿಗಳಲ್ಲವೋ, ಪ್ರಯತ್ನವಾದಿಗಳಲ್ಲಿ ಅವರು ಪ್ರಗತಿಹೊಂದಬಯಸುವದು ನಿರರ್ಧ ಕವು. * ಉದ್ಯೋಗಿನಾಂ ಪುರುಷಸಿಂಹ ಮುಪೈತಿಲ ದೃವೇನದೇವಮಿತಿಕಾಪುರುಷಾವ ದಂತಿ | ದೈವಂನಿಹತ್ಯ ಕುರು ಪೌರುಷಮಾತ್ಮಶಕ್ಕಾ | ಯತ್ಕೃತೇ ಯದಿನಸಿದ್ಧತಿ ಕೋತ್ರದೋಷಃ |” ಎಂಬ ಕವಿಯ ಉಕ್ತಿಯಂತೆ ಕೇವಲ ದೈವದ ಮೇಲೆ ಹವಾಲಕೊಟ್ಟು ಕೂಡ್ರುವ ನಿಂದ್ಯಪುರುಷ ರಾಗದೆ, ಪ್ರಯತ್ನಪೂರ್ವಕ ಕೆಲಸಮಾಡಿ ಅಖಂಡ ಲಕ್ಷ್ಮಿಯನ್ನೂ ಆರೋಗ್ಯವನ್ನೂ ಹೊಂದಿ ಪ್ರಗತಿಹೊಂದಬೇಕು, * ಹೊರೆಸ ಮೆನಾರ್ಡನೆಂಬ ಸುಪ್ರಸಿದ್ದ ಅಮೇರಿಕನ್ ಗ್ರಹ ಸನು ಕಾಲೇಜದಲ್ಲಿ ಕಲಿಯುತ್ತಿದ್ದಾಗ, ತನ್ನ ವಸತಿಯ ಕೋಣೆಯ ಬಾಗಿಲ ಮೇಲೆ stV” ಎಂಬ ಅಕ್ಷರವನ್ನು ಕೆಂಪುಬಣ್ಣದಿಂದ ಬರೆದ