ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--೫೦ ಸ್ಪಷ್ಟವಾಗಿ ಕಾಣುವಂತೆ ಮಾಡಿದ್ದನು. ಸಂಗಡಿಗರಾದ ವಿದ್ಯಾ ರ್ಧಿಗಳಲ್ಲೊಬ್ಬರಿಗೂ ಮೆನಾರ್ಡನು ಬರೆದಿದ್ದ V> ಯೆ ಆರ್ಧವು ತಿಳಿಯಲಿಲ್ಲ. ಆದ್ದರಿಂದ ಅವರು ಮೆನಾರ್ಡನನ್ನು ವಿಕ್ಷಿಪ್ರನೆಂದು ಭಾವಿಸಿ ಅವನಿಗೆ V» ಯನ್ನೇ ಸಂಬೋಧನವಾಗಿ ಉಪಯೋಗಿಸ ಹತ್ತಿದರು. ಕಾಲೇಜಿ ಪರೀಕ್ಷೆಯಾಗಿ ಯಾವಾಗ ಅವನು ಲಿಡಿ ಕೊರಿಅನ' (ಫೆಲೋ) ನಾಗಿ ಆರಿಸಲ್ಪಟ್ಟನೋ, ಆವಾಗ ಅವನು ಸಂಗಡಿಗರಾದ ವಿದ್ಯಾರ್ಥಿಗಳನ್ನು ಕುರಿತು-1 ಮಿತ್ರರೇ, ನಾನು ಕೋಣೆಯ ಬಾಗಿಲ ಮೇಲೆ ಬರೆದಿಟ್ಟಿದ್ದ (+V” ಯ ಅರ್ಧವು ಈಗ ನಿಮಗೆ ತಿಳಿದಿರಬಹುದು, ಕಾಲೇಜದಲ್ಲಿ ಸೇರಿದಾಗಿನಿಂದ ಲಿಡಿ ಕೊರಿಆನ” ನಾಗಬೇಕೆಂದು ನನ್ನ ಇಚ್ಛೆಯಿತ್ತು” ಎಂದು ಹೇಳಿ ದನು. ಪ್ರಬಲವಾದ ಇಚ್ಛಾಶಕ್ತಿಯ, "ಹಾಗು ಸಂಕಲ್ಪಬಲದ ನಾಮ ರ್ಧ್ವದಿಂದ ಯಾವದು ತಾನೆ ಅಸಾಧ್ಯವೆ? ಹರೆಸ ಮನುರ್ಡ ಇವರ ಉದಾಹರಣೆಯಿಂದ ಪ್ರಗತಿಗಾ ಮಿಗೆ ಬಹಳ ಸಂಗತಿಗಳ ಬೋಧವಾಗಬಹುದಾಗಿದೆ. ತನ್ನ ಸಂಗಡಿ ಗರಾದ ವಿದ್ಯಾರ್ಥಿಗಳಲ್ಲಿ, ಎಷ್ಟೋ ಜನರು ಬುದ್ಧಿಯಿಂದಲೂ, ಪಾರಶಕ್ತಿಯಿಂದಲೂ ತನ್ನನ್ನು ತಲಮೆಟ್ಟಿ ಹಾರುವರಿರುತ್ತಿರಲಿಕ್ಕೆ, ತನ್ನಂಧ ಸಾಧಾರಣ ವಿದ್ಯಾರ್ಥಿಗೆ ಮೇಲಿಡಿರಿಅನ” ಪದವಿಯು ಸಿಗುವದು ಅಸಾಧ್ಯವೆಂದು ಅವನು ತಿಳಿದಿದ್ದರೆ, ಅಡಿಕ್ಟೋರಿ ಆನ” ಕ್ಕಾಗಿ ಪ್ರಯತ್ನಿಸುವ ಪೂರ್ವದಲ್ಲಿಯೇ ಅದರಲ್ಲಿ ಪರಾಜಯವು ಖಾತ್ರಿಯಿಂದಾಗುವದೆಂದು ಭಾವಿಸಿದಂತಾಗುತ್ತಿತ್ತು. ಈ ತರದ ಹೇಡಿಭಾವನೆಗಳೇ ಸಾಮರ್ಥ್ಯವಿ ಹೀನತೆಯ ಹಾಗು ದೃಢನಿಶ್ಚಯದ ಅಭಾವದ ದ್ಯೋತಕಗಳಾಗಿರುವವು. ಆದರೆ ಮೊನಾರ್ಡನು ಈ ಭಾವನೆಯುಳ್ಳವನಾಗಲಿ: ಅವನು ಮೊದಲಿನಿಂದಲೇ ತನಗೆ ಯಶಃಪ್ರಾಪ್ತಿಯಾಗುವದೆಂದು ಭಾವಿಸಿಕೊಂಡನು. ಹಾಗು ಆ ಭಾವ ನೆಯನ್ನು ಕಾರ್ಯರೂಪವಾಗಿ ಪರಿಣಮಿಸುವದಕ್ಕೆ ಅವನು ಮನ ಮುಲ್ಕಿ ದೀರ್ಘ ಪ್ರಯತ್ನ ಮಾಡಹತ್ತಿದನು. ಯಾವಾಗಲೂ ತನ್ನ