ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೫9 ಕೂಡ ಸಂಕಲ್ಪಮಾಡದೆ ಅವರು ಮಾಡಲುದ್ಯುಕ್ತರಾಗುತ್ತಿದ್ದಿಲ್ಲ. ಆ ಪರಿಪಾರವು ಬ್ರಾಹ್ಮಣರಕ್ರಿಯಾಕರ್ಮಗಳಲ್ಲಿ ಇನ್ನೂ ಕಂಡುಬರು ವದು: ಆದರೆ ಸಂಕಲ್ಪಶಕ್ತಿಯ ಮಹತ್ವವನ್ನರಿಯದ ನಾವು, ಹಿರಿ ಯರ ಅನುಕರಣವನ್ನು ಶಬ್ದ ಮಾತ್ರದಲ್ಲಿ ಮಾಡಿ ಲೌಕಿಕಹಾಸ್ಯಕ್ಕೆ ಕಾರಣರಾಗುತ್ತಿದ್ದೇವೆ. ಯಾವ ಕೆಲಸದ ಸಲುವಾಗಿಯಾದರೂ ದೇವ-ಬ್ರಾಹ್ಮಣರ, ಗುರುಹಿರಿಯರ, ಅಗ್ನಿ-ಸೂರ್ಯರ ಸಮಕ್ಷಮ ಸಂಕಲ್ಪ ಮಾಡಿ ಅಂದರೆ ನಾನು ಇಂಧ ಇಂಧ ಕೆಲಸವನ್ನು ಹೀಗೆಯೇ ಮಾಡುತ್ತೇನೆಂದು ಸಾಕ್ಷಿಯಿಟ್ಟು ಹೇಳಿ, ಕೆಲಸ ಪ್ರಾರಂಭಿಸಿ ಯಧಾ ಯೋಗ್ಯವಾಗಿ ಮುಗಿಸಬೇಕಾಗುತ್ತದೆ. ಸಂಕಲ್ಪವು ಸತ್ಯವಾಗು ವಂತೆ ಯತ್ನಿಸದಿದ್ದರೆ ನಮಗೆ ಅಧೋಗತಿಯು ತಪ್ಪದೆ ಆಗುವದು. ಸಂಕಲ್ಪ ಮಾಡಿ ಕೆಲಸಪ್ರಾರಂಭಿಸುವದರಿಂದ ಆ ಕೆಲಸ ಮುಗಿಸದೆ ಹಿಂದಿರುಗಲು ಮಾರ್ಗವಿದ್ದ ಆಶ್ರಯವನ್ನು ಛೇದನವಾಡಿ ಕೆಲಸ ಪ್ರಾರಂಭಿಸಿದಂತಾಗುವದು. ಕೆಲಸಮಾಡದೆ ಹಿಂತಿರುಗಲು ಮಾರ್ಗ ವೇಇಲ್ಲದಾಗಲು ಎಂಧ ಸಂಕಟಗಳು ಅಡ್ಡ ಬಂದರೂ ಅವಕ್ಕೆ ಅಂಜದೆ ಕೆಲಸವನ್ನು ಪೂರ್ಣಮಾಡುವದರಲ್ಲಿ ತತ್ಪರನಾಗುವನು. ಈ ಸಂಕ ಲ್ಪವನ್ನು ಪಾಲಿಸಲಿಕ್ಕೆ ಆಡಲವಾದ ಭಾವನೆಯಿರಬೇಕಾಗುವದು: “ಭಾವನಾಯದಿಭವೇತ್‌ಫಲದಾತ್ರಿ ಇಲ್ಲವೆ ಭಾವಿಕಸ್ಯ ತಪೋಬಲಂ” ಎಂಬಂತೆ ಭಾವನೆಯುಳ್ಳವರೇ, ಸಂಕಲ್ಪಶಕ್ತಿಯುಳ್ಳವರೇ ಆಶ್ರಯ ರಜ್ಜು ಛೇದನ ಮಾಡಿಕೊಳ್ಳುವವರೇ ಲೋಕದಲ್ಲಿ ಏನಾದರೂ ಕೆಲಸ ಮಾಡಿ ಪ್ರಖ್ಯಾತರಾಗುವರು. ಪುಣ್ಯಶಾಲಿ ರಾಮಚಂದ್ರನು ಭಾವ ನಾಪೂರ್ವಕವಾಗಿ, ಸಂಕಲ್ಪ ಪೂರ್ವಕವಾಗಿ ತಂದೆಯಮಾತನು ಕೇಳಿದ್ದರಿಂದಲೇ ಅವನು ಲೋಕವಂದ್ಯನಾದನು. ಸತ್ಯಪ್ರತಿಜ್ಞ ಹರಿಶ್ಚಂದ್ರರಾಯನು ಸತ್ಯಸಂಕಲ್ಪ ಕಾಯ್ದುಕೊಂಡದ್ದರಿಂದಲೇ ಕೀರ್ತಿಶೇಷನಾಗಿರುವನು. ಶ್ರೀಯಾಳಭೂಪಾಲನೂ, ಧರ್ಮರಾಜನೂ ಲೋಕವಿಖ್ಯಾತರಾದದ್ದಾದರೂ ಸಂಕಲ್ಪಶಕ್ತಿಯಿಂದಲೇ