ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ ಸಂಕಲ್ಪಕೆ ಈಗಿನ ಮನ್ವಂತರದಲ್ಲಿ ಕಾರ್ಯಕ್ರಮ(Programme)ಎಂದೆನ್ನುವರು. ಕಾರ್ಯನಿಷಪ್ರತಿಯೊಬ್ಬನೂ ವಿಶೇ ಷವಾಗಿ ಆಂಗ್ಲೀಯರು ಕಾರ್ಯಕ್ರಮದ ಹೊರತು ಕೆಲಸಕ್ಕೆ ಪ್ರಾರಂ ಭಿಸುವದಿಲ್ಲ. ಕಾರ್ಯಕ್ರಮವು ತನ್ನ ಮನಸ್ಸಿನಂತೆ ಮೊದಲು ಗೊತ್ತು ಮಾಡಲ್ಪಡುವದರಿಂದ, ಅದರಂತೆ ನಡೆಯುವದರಿಂದ ಸ್ವಾತಂ ಪ್ರೀತಿ, ದೃಢನಿಶ್ಚಯ, ಕಾರ್ಯದಕ್ಷತೆ, ಸಾಧನಗಳನ್ನು ಒದಗಿಸಿ ಕೊಟ್ಟು ವಿಕೆ, ಸಮಯ ಸಾಫಲ್ಯಮಾಡುವಿಕೆ ಇನ್ನೂ ಅನೇಕ ಗುಣ ಗಳ ಪೋಷಣಮಾಡಿಕೊಂಡಂತಾಗುವದು. ಆದ್ದರಿಂದ ಪ್ರತಿಯೊಬ್ಬ ಮನುಷ್ಯನೂ ಮೊದಲು ತಾನು ಯಾವ ಹಾಗು ಎಷ್ಟು ಕಲಸವನ್ನು ಮಾಡಿ ಪ್ರಗತಿಯನ್ನು ಹೊಂದಬೇಕೆಂಬದನ್ನು ಗೊತ್ತುಮಾಡಿಕೊಂಡು ಇಡಿ ಆಯುಷ್ಯದ ಕಾರ್ಯಕ್ರಮವನ್ನು ತಯಾರುಮಾಡಿಕೊಳ್ಳಬೇಕು, ಹಾಗು ಆ ಕಾರ್ಯಕ್ರಮದಂತೆ ನಡೆಯುವದರಿಂದ ನಿಜವಾಗಿ ಪ್ರಗತಿ ಯಾಗುವದೆಂದು ದೃಢಭಾವನೆಯನ್ನು ಮಾಡಿಕೊಳ್ಳಬೇಕು. ಅಂದರೆ ಯಶಃಪ್ರಾಪ್ತಿಯ ಕಾರ್ಯದಲ್ಲಿ ಬರಬಹುದಾದ ವಿಘ್ನಗಳಿಗೆ ಆಸ್ಪದ ವುಳಿಯದೆ ಪ್ರಗತಿಯ ಭರಾಟೆಯಿಂದ ಆಗಹತ್ತುವದು. ದೇಹವಾಪಾತ್ರಯಾಮಿ ಕಾರ್ಯ೦ವಾಸಾಧಯಾಮಿ” ಎಂಬಂ ತೆ ಸಂಕಲ್ಪಿಕದಢನಿಶ್ಚಯ ಮಾಡಿಕೊಂಡು, ಪ್ರಗತಿಗಾಗಿ ಪ್ರಯತ್ನ ಮಾಡಬೇಕು. ಅಂದರೆ ತಾನಾಜಿಯಂತೆ ಕಾರ್ಯಸಾಧನದಲ್ಲಿ ದೇಹದ ಪಾತವಾದರೂ ಇಷ್ಟವು ಸಾಧಿಸದೆ ಇರುವದಿಲ್ಲ. ಶಿವಪ್ರಭುಗಳು ತಾನಾಜಿಯಂಧ ಸಾ೦ಕಿಕ ದೃಢಮನಸ್ಸಿನ ಸಾಹಸಿಗನೊಬ್ಬನ ಹೊರತು ಬೇರೆ ಸರದಾರರಲ್ಲೊಬ್ಬನಿಂದಲೂ ಸಿಂಹಗಡವನ್ನು ತಮ್ಮ ಳ್ಳುವದಾಗುವದಿಲ್ಲವೆಂದು ಚೆನ್ನಾಗಿ ತಿಳಿದಿದ್ದರು ಅಂತೇ ಅವರು ಆ ಅತ್ಯಂತ ಕಠಿಣಕಾರ್ಯ ವನ್ನು ತಾನಾಜಿಗೆ ಒಪ್ಪಿಸಿದ್ದರು,

  • ಏನು ಮಾಡುತ್ತೇವೆ, ಹಾಗು ಮುಂದೆ ಏನನ್ನು ಮಾಡಬೇಕಾ ಗಿದೆ ಎಂಬದಾವದನ್ನೂ ಅರಿಯದ ನಾವು, ಸದಾ ಸಂಶಯಪಿಶಾಚಿ ಯಿಂದ ಗ್ರಸ್ತರಾಗಿ ಆಯುರ್ಗಲಿತರಾಗುವೆವ ಕೆಲಸ ಆರಂಬಿಸುವ