ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೫೪ ಮೊದಲೂ, ಕೆಲಸಮಾಡಹತ್ತಿದಾಗಲೂ ನಾವು ಆ ಬಗ್ಗೆ ವಿಚಾರಮಾ ಡುವದರಲ್ಲಿ ವೇಳೆಯನ್ನು ಮಿತಿಮೀರಿ ಕಳೆಯುವೆವು, ಅನುಕರಣ ಪ್ರಿಯರಾದ ಅಪೂರ್ವಗುಣಗಳಿಲ್ಲದ ನಾವು ಮಂದಿಯ ಅನುಕರಣ ಮಾಡಬೇಕೆಂದು ಆಲೋಚಿಸುವಾಗ ವಿಚಾರದಲ್ಲಿ ಹೀಗೆ ಬಹಳ ವೇಳೆ ಹಾಳುಮಾಡಿಕೊಳ್ಳುವೆವು. ಇದರಿಂದ ಪರಿಣಾಮದಲ್ಲಿ ನಮ್ಮ ಆತ್ಮ ವಿಶ್ವಾಸದ, ಸ್ವಾತಂತ್ರ್ಯದ ಹ್ರಾಸವಾಗುವದು, ಪ್ರಸಂಗದಲ್ಲಿ ಸಹಯವಾದೀತೆಂಬ ಮರುಳು ವಿಶ್ವಾಸವು ಕೆಲಸದಲ್ಲ. ನಾವು ಪ್ರ ಗತಿ ಕಾರ್ಯ ಕೈ ಮ ಹ ತೈ ತೊ ಡ ದೆ, ಕ್ಷುಲ್ಲಕ ಜನರ ಮಾತನ್ನು ನಡಿಸುವಭರಕ್ಕೂ , ಅವರ ಪ್ರೇರಣೆ ಯಿಂದ ಹೊಲ್ಲದ ಕೆಲಸಮಾಡಲಿಕ್ಕೂ ಪ್ರವೃತ್ತರಾಗುತ್ತೇವೆ. ಇದರಿಂದ ಪ್ರಗತಿಯಾಗದೆ ಕಾರ್ಯಸಾಧನವಾಗದೆ ದುಷ್ಟ ಜನರ ಸಂಗತಿಯಿಂದ ಹೊಲ್ಲದ ಕೆಲಸಮಾಡಿದ್ದರಿಂದ ಲೋಕೋತ್ತರ ಅಪಕೀರ್ತಿಯು ಮಾತ್ರ ನಮ್ಮ ಉಡಿಯಲ್ಲಿ ಬೀಳುವದು. ಆದ್ದರಿಂದ ಪ್ರಗತಿಗಾಮಿ ಯು ಪುನಃ ಪುನಃ ವಿಚಾರಮಾಡದೆ, ದುಷ್ಟ ಜನರ ಮಾತು ಕೇಳದೆ, ಕೇವಲ ತನ್ನ ಸದಸದ್ವಿವೇಕಬುದ್ದಿಗೆ-ಅಂತಃಕರಣಕ್ಕೆ ಸ್ಫೂರ್ತಿಯಾ ಗುವ ಮಾರ್ಗದಿಂದ ಪ್ರಗತಿಮಾರ್ಗವನ್ನು ಹಿಡಿಯಬೇಕು. ಹೀಗೆ ಮಾಡುವದರಿಂದ ಪ್ರಸಂಗದಲ್ಲಿ ಸಹಾಯವಾದೀತೆಂಬ ಸಂಗತಿಗಳ ಆಶ್ರಯಗಳ ಛೇದನವನ್ನು ಮಾಡಿಕೊಳ್ಳುವದರಿಂದ ಮುಂದೆ ಪ್ರಗತಿಗೆ ಯಾವ ಬಾಧಕಗಳೂ ಉಳಿಯಲಾರವು: ಅನಿಶ್ಚಿತಧೈಯದ ಹಾಗು ಅಂಜುಬುರುಕನಾದ ಮನುಷ್ಯನು ಕಂಡ ಕಂಡವರ ಮಾತಿನಂತೆ ನಡೆಯಹತ್ತುತ್ತಾನೆ. ಪ್ರತಿಯೊಬ್ಬರ ಅನುಕೂಲ ಹಾಗು ಪ್ರತಿಕೂಲ ಅಭಿಪ್ರಾಯಗಳಿಂದ ಅವನ ಮನಸ್ಸು ಚಂಚಲವಾಗುವದು. ಧೈಯವು ಗೊತ್ತಾಗದ್ದರಿಂದ, ಅಭಿಪ್ರಾಯ ಕೊಡುವ ಪ್ರತಿಯೊಬ್ಬನ ಮತಕ್ಕೆ ಅವನು ಸಮ್ಮತಿಪಡಬೇಕಾಗು ತದೆ. ಒಂದು ಕಾರ್ಯವನ್ನು ಮಾಡಿಯೇ ತೀರಬೇಕೆಂದು ಎಷ್ಟು ನಿಶಯಸಿದ್ದರೂ, ಅವನ ನಿಶ್ಚಯವನ್ನು ತಿರುಗಿಸಲಿಕ್ಕೆ ಒಬ್ಬ ಸಾ