೮ ನೆಯ ಖಂಡ-ಸಾಮರ್ಧ್ಯಸಂಚಯ. ಯುದ್ಧದಲ್ಲಿ ಉಪಯೋಗಿಸಬೇಕಾದ ತೋಪುಗಳನ್ನು ಮೊದ ಲು ಪರೀಕ್ಷಿಸಿ ಆ ಮೇಲೆ ಉಪಯೋಗಿಸುವ ರೂಢಿಯುಂಟು, ಪರೀ ಕ್ಷಯ ಕಾಲಕ್ಕೆ ಅವುಗಳಲ್ಲಿ ಸಾಧಾರಣವಾಗಿ ತುಂಬುವ ಮದ್ದು ಗುಂಡುಗಳಿಗಿಂತ ಹೆಚ್ಚು ಮದ್ದು-ಗುಂಡುಗಳನ್ನು ತುಂಬಿ ಹರಿಸಿ ನೋಡುವರು. ಹೆಚ್ಚು ಮದ್ದು-ಗುಂಡು ಉಪಯೋಗಿಸಿ ಹಾರಿಸಿ ನೋಡುವ ಕಾರಣವೇನೆಂದರೆ, ಯಾವನಾದರೊಬ್ಬ ಅರಿಯದ ಮನು ಷ್ಯನು ಯುದ್ಧ ಪ್ರಸಂಗದಲ್ಲಿ ಹಾಗೆ ಹಾರಿಸಿದರೆ ಅಪಘಾತವಾಗಬಾ ರದು, ಪರೀಕ್ಷೆಯಲ್ಲಿ ಪಾಸಾಗದ ನ್ಯಾಭಾವಿಕ ಶಕ್ತಿಗಿಂತ ಹೆಚ್ಚು ಜ ಮದ್ದು-ಗುಂಡಿನ ಆಘಾತವನ್ನು ತಡೆಯದ ತೋಪುಗಳನ್ನು ಯುದ್ಧಿ ದಲ್ಲಿ ಉಪಯೋಗಿಸದ ಅವನ್ನು ನಾಶಗೊಳಿಸುವರು ಇಲ್ಲವೆ ಅವು ಗಳ ಸ್ವಾಭಾವಿಕ ಶಕ್ತಿಯನ್ನಾದರೂ ಕಡಿಮೆಮಾಡುವರು, ಉಗೆಬಂಡಿಯ ಇಲ್ಲವೆ ಉಗೆಹಢಗಗಳ ಇಲ್ಲವೆ ಎಂದಿನ್, ಪ್ರೆಸ್ಸು ಮೊದಲಾದವುಗಳ ಇಂಚಿನಗಳ ಶಕ್ತಿಯನ್ನಾದರೂ ಅವುಗ ಳನ್ನು ಉಪಯೋಗಿಸುವ ಶಕ್ತಿಗಿಂತ ತುಸು ಹೆಚ್ಚು ಶಕ್ತಿಯನ್ನು ಬೇಕಂತ ಇಟ್ಟಿರುತ್ತಾರೆ, ಸಾಧಾರಣವಾಗಿ ಅಂಹಾರ್ಸ-ಕುದು ರೆದು ಶಕ್ತಿಯ ಇಂಜಿನವು ನಮಗೆ ಬೇಕಾಗಿದ್ದರೆ, ನಿಪುಣಯಾಂತ್ರಿ ಕನು ತಿಳಿಸಿಯೇ ಆಗಲಿ, ತಿಳಿಸದೆಯೇ ಆಗಲಿ, ಬೇಕಂತ ೫ ಹಾರ್ಸ ಪಾವರ ಹೆಚ್ಚು ಶಕ್ತಿಯುಳ್ಳ ಅಂದರೆ ೨೫ ಹಾರ್ಸ ಪಾವರವುಳ ಇಂಜಿನವನ್ನು ನಮಗೆ ಕೊಡುವನು: ಈ ಹೆಚ್ಚು ಶಕ್ತಿಯು ಉಳ ಯೋಗವನ್ನು ಮಾಡಿಕೊಳ್ಳದಿದ್ದರೂ ಚಿಂತೆಯಿಲ್ಲ. ಆದರೆ ಅದರಲ್ಲಿ ಆ ಶಕ್ತಿಯು ಇರಬೇಕಾದದ್ದು ಅತ್ಯವಶ್ಯವಾಗಿದೆ. ಇದರಂತೆ ಪ್ರಗತಿ ಹೊಂದುವ ಮನುಷ್ಯನಲ್ಲಿ ಅವನು ಮಾಡಬೇಕಾದ ಕೆಲಸದ ಜ್ಞಾ ನವು ಅವನು ಅದರಲ್ಲಿ ಹೊಂದಬೇಕಾದ ಯಶಸ್ಸಿಗಿಂತ ತುಸುಹೆಚ್ಚ ಇರಬೇಕಾಗುವದು. ಈ ಹೆಚ್ಚು ಶಕ್ತಿಯು ಸಾಮರ್ಧ್ಯ ಸಂಚಯವು ಪುಸಂಗದಲ್ಲಿ ಅವನಿಗೆ ಒಳ್ಳೆ ಸಹಾಯಕಾರಿಯಾಗದೆ ಇರದು.
ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೭
ಗೋಚರ