ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e-೫೮ ಇಂಜಿನುಗಳಲ್ಲಿ ಎಂದೂ ಉಪಯೋಗಿಸದಂಧ ಹೆಚ್ಚು ಶಕ್ತಿಯು ಹ್ಯಾಗೆ ಅವಶ್ಯವೋ, ಹಾಗೆಯೇ ಬ್ಯಾಂಕುಗಳಲ್ಲಿ ಉಪಯೋಗಕ್ಕಿಂತ ಹೆಚ್ಚು ಹಣವೂ, ರಾಷ್ಟ್ರಗಳಲ್ಲಿ ಯುದ್ಧಕ್ಕೆ ಬೇಕಾಗುವ ದಂಡಿ ಗಿಂತ ಹೆಚ್ಚು (Resevedforce) ಕಾದಿದಂಡ, ವ್ಯಾಖ್ಯಾತ ವಿನಲ್ಲಿ ಕೊಡಬೇಕಾದ ವ್ಯಾಖ್ಯಾನಗಳಿಗಿಂತ ಹೆಚ್ಚು ವಿಷಯಜ್ಞಾ ನವೂ, ಲೇಖಕನಲ್ಲಿ ವಿವೇಚಿಸಬೇಕಾದ ಲೇಖಕ್ಕಿಂತ ಹೆಚ್ಚು ವಿವೇ ಚನಶಕ್ಕಿಯ, ಜಟ್ಟಿಯಲ್ಲಿ ದಿನಾಲು ಉಪಯೋಗಿಸುವ ಶಕ್ತಿ ಗಿಂತ ಹೆಚ್ಚು ಶಕ್ತಿಯ, ಜರರದಲ್ಲಿ ದಿನಾಲು ಸಚಿಸಬಹುದಾದ ಸಾಮರ್ಧ್ಯಕ್ಕಿಂತ ಹೆಚ್ಚು ಸಾಮರ್ಥ್ಯವೂ ಇರಬೇಕಾಗಿರುವದು, ಪ್ರಸಂಗಕ್ಕೆ ಉಪಯೋಗಬೀಳಬೇಕೆಂದು ಪ್ರಯತ್ನ ಮಾಡುವಾಗ ಬ್ಯಾಂಕುಗಳು ಬೇಕಂತ ಕೆಲವು ಹಣವನ್ನು ಬೇರೆಯಾಗಿರಿಸಬೇಕಾ ಗುತ್ತದೆ. ಖರ್ಚಿನಬಾಬಿನಲ್ಲಿ ರಾಷ್ಟ್ರವು ಬಹಳ ತೊಂದರೆಮಾಡಿ ಕೊಂಡು ಕೆಲವು ದಂಡನ್ನು ಕಾದಿಡಬೇಕಾಗುತ್ತದೆ. ಬಾಲ್ಯದಿಂದ ವ್ಯಾಖ್ಯಾತವು ಕಷ್ಟಪಟ್ಟು ಅನೇಕ ವಿಷಯಗಳನ್ನು ಕಲಿತಿರಬೇಕಾ ಗುತ್ತದೆ. ಕೂತಳ್ಳಿ, ನಿಂತಲ್ಲಿ, ಮಲಗಿದಲ್ಲಿ ವಿಚಾರಮಾಡಿ ಮಾಡಿ ಲೇಖಕನು ವಿವೇಚನಶಕ್ತಿಯನ್ನು ಸಂಗ್ರಹಿಸಬೇಕಾಗುತ್ತದೆ, ದಿನಾಲು ಹಲವು ಪ್ರಕಾರದ ಅಂಗಸಾಧನಮಾಡಿ ಮಾಡಿ ಜಟ್ಟಿಯು ಸಾಮರ್ಥ್ಯ ವನ್ನು ಸಂಚಯಗೊಳಿಸಿಕೊಂಡಿರಬೇಕಾಗುತ್ತದೆ. ದಿನಾಲು ತುತ್ತು ತುತ್ತು ಕಡಿಮಾಡಿ ಅನ್ನವನ್ನುಂಡು ಪಚನಶಕ್ತಿಯನ್ನು ಬೆಳೆಸಿರ ಬೇಕಾಗುತ್ತದೆ , ಇಟ್ಟು ಒಳಿಸು” ಎಂಬ ನಾಣ್ಣುಡಿಯ ಗರ್ಭಿತಾರ್ಧವಾದರೂ ಸಾಮರ್ಧ್ಯಸಂಚಯಗೊಳಿಸು ಎಂದಿರುವದು, ಮೇಲಿನ ಸಾಮರ್ಧ್ಯ ಸಂಚಯದ ನಿಯಮವು ರೋಗಿಗಳಿಗೂ ಹತ್ತುವದು. ಮೊದಲಿನಿಂದ ನಿಯಮಿತವಾಗಿ ಉಣ್ಣುತ್ಯ, ಯೋಗ್ಯವಾಗಿ ವಿಶ್ರಾಂತಿಯನ್ನು ಹೊಂದುತ್ತ ಬಂದಿದ್ದರೆ ಬೇನೆಬರುವ ಸಂಭವವಿದ್ದಿಲ್ಲ. ಒಂದು ವೇಳೆ ನಾಧಾರಣಬೇನೆಬಂದರೂ ದೇಹವು ನೈಸರ್ಗಿಕಧರ್ಮದಂತೆ