ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-~&o= ವಕ್ರತ್ಯಕ್ಕೆ ಅಪೂರ್ವತೆಯು ಪ್ರಾಪ್ತವಾಗಹತ್ತಿತು, ಮತ್ತು ಕಡೆ ಕಡೆಗೆ ಗೋಖಲೆಯವರೆಂದರೆ ಭೂಲೋಕದ ಬ್ರಹಸ್ಪತಿಯೇ ಆಗಿ ಹೋದರು, ಕೋರ್ಟುಗಳಲ್ಲಿ ನಡೆಯುವ ಎಷ್ಟೋ ಖಟ್ಟೆಗಳನ್ನು ಹೊಸಬ ರಾದ ವಕೀಲರು ನಡೆಯಿಸಲಾರರೆಂತಲ್ಲ ; ಆದರೆ ಕೋರ್ಟಿನ ಕೆಲಸ ಗಳಲ್ಲಿ ತೀರ ಅನನುಭವಿಕರಾದ ಇವರ ಕಡೆಗೆ' ಪಕ್ಷಗಾರರು ಮುದ್ದಾ ಮಾಗಿ ಹೋಗುವದಿಲ್ಲ; ಯಾಕಂದರೆ ಖಟ್ಟೆ ಕೆಡಲಿಕ್ಕೆ ಈ ಅಪಕ್ಕೆ ವಕೀಲನೊಬ್ಬನು ಮತ್ತೆ ಎಲ್ಲಿ ಕಾರಣನಾಗುವನೋ ಎಂದು ಅವರು ತಿಳಿಯುವರು. ಯಾವದಾದರೊಂದು ಯಂತ್ರವನ್ನು ಮಾಡುವವನಿಗೆ ೫೦ ರೂ. ಬಕ್ಷೀಸು ಕೊಡುವೆನೆಂದೂ, ಯಾವದಾದರೊಂದು ಯಂತ್ರವನ್ನು ಮಾ ಡಕಲಿಯುವವನಿಗೆ ೩೦೦೦ ರೂ. ಬಕ್ಷೀಸು ಕೊಡುವೆನೆಂದೂ ಒಬ್ಬ ಪ್ರಸಿದ್ಧ ಯಂತ್ರಕಲಾವಿಶಾರದನು ಪ್ರಸಿದ್ದಿಸಿದ್ದನಂತೆ, ಇದರಲ್ಲಿ ಅವನು ಕೆಲಸಮಾಡುವ ಮನುಷ್ಯನಿಗಿಂತ ಕೆಲಸಕಲಿಯುವ ಮನುಷ್ಯನಿಗೆ ಹೆಚ್ಚು ಇನಾಮು ಕೊಡಲಿಚ್ಚಿಸಿದ್ದನ್ನು ಕೇಳಿ ಸಾಮಾನ್ಯರು ಚಕಿತ ರಾಗಬಹುದಾಗಿದೆ. ಆದರೆ ಅವನು ಹಾಗೆ ಬಕ್ಷೀಸು ಕೊಡುವದು ಯೋ ಗ್ಯವೇ ಆಗಿರುವದು. ಯಾಕಂದರೆ ಯಂತ್ರ ಪ್ರವೀಣನಿಗೆ ಹೊಸಯಂತ್ರ ಮಾಡುವದಕ್ಕೆ ಒಂದೆರಡು ದಿವಸಗಳಾದರೆ ಸಾಕು ಅದರೆ ಆದೇ ಯಂತ್ರ ಮಾಡಕಲಿಯುವವನು ೪-೬ ವರ್ಷ ಒಂದೇಸವನೆ ಲಕ್ಷಗೊಟ್ಟು ಶಿಕ್ಷಣ ಹೊಂದಬೇಕಾಗುತ್ತದೆ. ಆ ಮಾನದಿಂದ ಅವನಿಗೆ ಬಕ್ಷೀಸು ಹೆಚ್ಚು ಸಿಗುವದು ಅವಶ್ಯವಾಗಿದೆ. ಕಲಿಯುವವನು ಸಾಮರ್ಧ್ಯಸಂಚಯ ಗೊಳಿಸಲಿಕ್ಕೆ ಪ್ರಯತ್ನ ಮಾಡಬೇಕಾಗುತ್ತದೆ. ಆದರೆ ಮಾಡುವವನು ತನ್ನಲ್ಲಿದ್ದ ಸಾಮರ್ಥ್ಯದ ಲೇಶಾಂಶವನ್ನು ಖರ್ಚು ಮಾಡಿ ಯಂತ್ರ ತಯಾರಿಸುವನು. ತಾಸೆರಡು ತಾಸಿನ ಕೆಲಸಕ್ಕಾಗಿ ಪ್ರಸಿದ ಡಾಕ್ಟರರೂ, ಬ್ಯಾರಿ ಸ್ವರರೂ ಮಿತಿಮೀರಿ ಪ್ರತಿಫಲವನ್ನು ಕೇಳುವದನ್ನು ನೋಡಿದರೆ ಆಶ್ಚ