ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

»೬೩ ಆಶೆಬಿಟ್ಟಿಲ್ಲ; ಲೌಕಿಕನಿಗೂ ಆಶಬಿಟ್ಟಿಲ್ಲ; ಪಾರಮಾರ್ಥಿಕನಿಗೂ ಆಶೆಬಿಟ್ಟಿಲ್ಲ; ಕಂಪಣನಿಗೂ ಆಶಿಬಿಟ್ಟಿಲ್ಲ. ಅತ್ಯಂತ ಉದಾರನಿಗೂ ಆಶೆಬಿಟ್ಟಿಲ್ಲ. ಇಷ್ಟೇ ಅಲ್ಲ ಜಗತ್ತಿನೊಳಗಿನ ಪ್ರತಿಯೊಂದು ಪ್ರಾ ಣಿ ಯು ಈ ಘೋರ ವಾದ ಆಶಾಸೂತ್ರದಿಂದ ಬಂಧಿ ಸಲ್ಪಟ್ಟಿರುವದು. ಈ ವಿವರಣವನ್ನು ಓದಿ ಕೆಲವರು ಅನುಮಾನಪಡಬಹುದಾಗಿದೆ, ಪರಮಯೋಗಿಗಳೂ, ಪೂಜ್ಯಸನ್ಯಾಸಿಗಳೂ ಇನ್ನೂ ಅನೇಕರೂ ಆಶಾರಹಿತರೆಂದು ಗ್ರಂಧಾಂತರದಲ್ಲಿ ಬರೆದಿರಲು ಇವರು ಹೀಗೆ ಎಲ್ಲರೂ ಆಶೋತ್ರಿಗಳೇ ಎಂದು ಬರೆಯುವದಕ್ಕೆ ಆಧಾರವೇನು? ಎಂದು ಕೇಳಬಹುದಾಗಿದೆಅವರ ಪ್ರಶ್ನೆಗೆ ಉತ್ತರವಿಷ್ಟೇ; ಆಶಾ ರಹಿತನಾದವನು ಲೋಕದಲ್ಲಿ ಯಾರೂ ಇಲ್ಲ. ಆದರೆ ನಮ್ಮ ಆಶೆಗೂ ದೊಡ್ಡವರ ಆಶೆಗೂ ಭೇದ ಮಾತ್ರವಿರುವದು. ನಾವು ಪ್ರತಿಯೊಂದು ವಿಷಯಕ್ಕೆ ಹೆಚ್ಚಾದ ಆಶೆಯನ್ನು ತೋರಿಸಿ, ಆಶೆಗಳು ಪೂರ್ಣವಾಗ ದಿರಲು, ಕಡೆಗೆ ಆಶಾವಯವಾದ ನಿರಾಶೆಯುಳ್ಳ ನಾವುನರಿಯು ತಿನ್ನ ಲಿಕ್ಕೆ ದ್ರಾಕ್ಷಿಗಳು ಸಿಗದಾಗಲು ಹುಳಿ ದ್ರಾಕ್ಷಿಗಳು ಎಂದು ಭಾವಿಸಿ ನಿರಾ ಶೆಪಟ್ಟಂತೆ ಆಗುವೆವು. ಆದರೆ ದೊಡ್ಡವರು, ಜ್ಞಾನಿಗಳು ಯಾತರ ಕೈಯ ಆಸಕ್ತಿಯನ್ನಿಡದೆ ಆಕೆಯನ್ನಿಡದೆ ಹಿಡಿದ ಕೆಲಸಗಳನ್ನು (ಕರ್ಮಣ್ಯವಾಧಿಕಾರಸ್ತೇ ಮಾಫಲೇಷು ಕದಾಚನ” ಎಂಬಂತ ಮಾಡಿ, ನಿರಾಶಾಮಯವಾದ ಆಶೆಯಿಂದ ಕಡೆಗೆ ಶ್ರೇಷ್ಠವಾದ ಫಲ ವನ್ನು ಪಡೆಯುವರು. ಇದೇ ನಮ್ಮ ಹಾಗು ದೊಡ್ಡವರ ಆಶೆಯ ಭೇದವಾಗಿದ್ದರೂ, ಫಲದಲ್ಲಿ ಎಲ್ಲರೂ ಒಂದೇ ವಸ್ತುವನ್ನು ಹೊಂದುವೆವಾದ್ದರಿಂದ, ಎಲ್ಲರೂ ಆಶೋತಿಗಳೇ ಎಂದು ನಮ್ಮ ಮತವದೆ. : ಪ್ರಗತಿಹೊಂದುವ ಮನುಷ್ಯನಲ್ಲಿ ಆಶೆಯು ಅವಶ್ಯವಾಗಿರಬೇ ಕಾಗುವದು. ಆದರೆ ದುರಾಶೆಯು ಮಾತ್ರ ಸರ್ವಧಾ ಇರಕೂಡದು. ಪ್ರಾಪಂಚಿಕರಾದ ನಾವು ಆಶಾಪಾಶದಿಂದಲ್ಲದೆ ಬೇರೆ ಮತ್ಯಾವದರಿಂ