ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وسط - ದಲೂ ಕಾರ್ಯಾಸಕ್ಷರಾಗಲಾರೆವು ಯೋಗ್ಯ ಆಶೆಯು ಮನುಷ್ಯ ನಿಗೆ ತಾರಕವಾಗಿಯೂ, ದುರಾಶೆಯು ಮಾರಕವಾಗಿಯೂ ಪರಿಣಮಿ ಸುವದು, ಯೋಗ್ಯ ಆಶೆಯಂದರೇ ನಿರಾಶಾಮಯ ಆಶೆಯು, ಕೆಲಸ ವನ್ನು ಮನಮುಟ್ಟಿ ಮಾಡುವವನು ತಾನಾಗಿ ಹೆಚ್ಚು ಪಗಾರವನ್ನು ಕೇಳಬೇಕಾಗಿಲ್ಲ. ಕಾರಖಾನದಾರನೇ ಅವನ ಕಲಸಕ್ಕೆ ಮೆಚ್ಚಿ ಹೆಚ್ಚು ಹೆಚ್ಚು ಪ್ರತಿಫಲವನ್ನು ಕೊಡುತ್ತ ಹೋಗುತ್ತುನ. ಆದರ ಆಶೆಬುರುಕನು ತನಗೆ ಪಗಾರವು ಹೆಚ್ಚಿಗೆ ದೂರಯಬೇಕೆಂಬ ಆಶೆ ಯಿಂದ ಯಜಮಾನನೆದುರಿಗೆ ಒಳ್ಳೆ ದುಡಿಯುವವನಂತೆ ನಟಿಸು ವನು, ಯಜಮಾನನು ಮೊದಮೊದಲು ಅವನ ಆಶೆಗೊಳಪಟ್ಟರೂ ಪರಿಣಾಮದಲ್ಲಿ ನಿಜಸ್ವರೂಪವು ಅವನಿಗೆ ಗೊತ್ತಾಗದ ಇಂದು, ಒಮ್ಮನಸ್ಸಿನಿಂದ ಯೋಗ್ಯ ಕೆಲಸಮಾಡುವ ಮನುಷ್ಯನಿಗೆ ಪ್ರತಿಫಲವು ದೊರೆಯುವದು ಸಿದ್ಧಾಂತವು, ಆಕೆಮಾಡಿದ ಫಲಗಳು ಕಡಿಮ ಯೋಗ್ಯತೆಯವೂ, ಆಶಮಾಡದಿದ ಫಲಗಳು ಅಮೂಲ್ಯಯೋಗ್ಯತೆ ಯವೂ ಆಗಿರುತ್ತವೆ, ಇದಕ್ಕೆ ಉದಾಹರಣೆಯು-ನೌಕರನು ಆಕೆ ಗಾಗಿ ಕೆಲಸಮಾಡುವದರಿಂದ ಕಟತನಕ ನೌಕರಿಯ ಕಡಿಮಯೋಗ್ಯ ತೆಯವನಾಗುವನು. ಎಷ್ಟು ಪಗಾರಿಗಳಿಸಿದರೂ ಅವನ ವ್ಯಕ್ತಿಯು ಆಶಾವೃತ್ತಿಯದಾಗಿರುವದರಿಂದ ಅವನ ಯೋಗ್ಯತೆಯು ಕಡಿಮೆಯಾ ಗುವದೇ ಸರಿ. ಆದರೆ ಅದೇ ಒಬ್ಬ ಸಾಧವು ಇಲ್ಲವೆ ಸನ್ಯಾಸಿಯು ಮಾಡುವ ಕೆಲಸವು (ಇವರು ಪ್ರತ್ಯಕ್ಷ ಕಲಸಮಾಡುವ ಅವಶ್ಯಕ ತೆಯೇ ಇಲ್ಲ. ಇವರ ನಿತ್ಯದ ನಡಾವಳಿಗಳ ವ್ಯಕ್ತಿಗಳೇ ಇವರ ಪೂಜ್ಯ ಕತಿಯ ದ್ಯೋತಕಗಳಾಗಿವೆ.) ಅತ್ಯಂತ ಶ್ರೇಷ್ಠವಾಗಿದ್ದು ನಿರಾಶೆಯಿಂದ ಮಾಡಲ್ಪಡುವದರಿಂದ ಅವರಿಗೆ ಬೇಕಾದಷ್ಟು ಧನಧಾನ್ಯ ಮೊದಲಾದ ಮಲ್ಯ ಪದಾರ್ಧಗಳು ದೂರಯುವವಲ್ಲದೆ, ಅಮೂಲ್ಯವಾದ ಕೀರ್ತಿಯು ಅವರನ್ನು ಸೇವಿಸಲಕ್ಕೆ ತತ್ನರವಾಗು. ವದು. ಆದ್ದರಿಂದ ಪ್ರಾಪಂಚಿಕನೇ ಆಗಲಿ, ಪಾರಮಾರ್ಧಿಕನೇ ಆಗಲಿ ಸ್ವತಂತ್ರ ಧೈಯದ ಪ್ರಗತಿಮಾರ್ಗವನ್ನು ಗೊತ್ತು ಮಾಡಿಕೊಂಡು,