ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

=&f. ದೃಢನಿಶ್ಚಯಾದಿ ಪ್ರಗತಿವರ್ಧಕಗುಣಗಳಿಂದ ನಿರಾಶಮಯವಾದ ಆಶೆಯಿಂದ ದುಡಿಯಹತ್ಯೆದರೆ, ಅವನಿಗೆ ಇಹದಲ್ಲಿಯ ಎಲ್ಲ ಸುಖ ಗಳೂ ಲಭಿಸುವವಲ್ಲದೆ ಪರದಲ್ಲಿ ಗತಿಯ ದೊರಕುವದು, (fಆಶಾಬಿಡಬೇಕು, ಸಂಸಾರವನ್ನು ಆಶಾರಹಿತವಾಗಿ ಮಾಡ ಬೇಕು ಎಂದು ಬೋಧಿಸುವ ದೊಡ್ಡವರ ಬೋಧದ ತಾತ್ಸರ್ಯವು ನಿರಾಶಾಮಯವಾದ ಆಶೆಯನ್ನು ಧರಿಸಿ ಸಂಸಾರಸಾಗಿಸಬೇಕು ಎಂದಿ ರುವದು. ಮನುಷ್ಯನು ಆಶಾಬದ್ದನಾಗಲಿಕ್ಕೆ ವ್ಯಾಮೋಹವೇ ಕಾರಣವಾಗುತ್ತದೆ. ವ್ಯಾಮೋಹವೆಂದರೆ ನಿಜವಾದ ಮೋಹವಲ್ಲ, ಭಾಸಮಯವಾದ ಮೋಹವು. ಯಾವದಾದರೊಂದು ಪದಾರ್ಥವನ್ನು ಇಪ್ಯಾನಿಷ್‌ ಸಂಗತಿಗಳದ್ವಾರಾ ಪರೀಕ್ಷಿಸದೆ, ಕೇವಲ ಆದರ ತೋರಿ ಕೆಯ ಗುಣಕ್ಕೆ ಮನಜೋಲುವದು ವ್ಯಾಮೋಹದ ಲಕ್ಷಣವು, ಇಂಧ ವ್ಯಾಮೋಹಗ್ರಸ್ತವಸ್ತುವಿಗಾಗಿ ನಾವು ಆಶೆಪಡಹತ್ತುತ್ತೆವೆ. . ಈ ಆಶೆಯೇ ದುರಾಶೆಯಾಗುವದು. ಪತ೦ಗವು ದೀಪದ ದಾಹಕ ಗುಣವನ್ನು ತಿಳಿಯದೆ, ಕೇವಲ ಆದರ ಪ್ರಕಾಶಕ್ಕೆ ಮೆ ಆಲಿಂಗಿಸಹೋಗಿ ಸುಟ್ಟು ಹೋಗುವದೂ ಕಾಮುಕನು ಪರಸ್ತ್ರೀಯನ್ನೂ ಜಾರಿಣಿಯನ್ನೂ ಸಂಭೋಗಿಸುವ ಮೋಹಕ್ಕೆ ಬಲಿಬಿದ್ದು ಅನರ್ಧಕ್ಕೆ ಒಳಗಾಗುವದು, ವ್ಯಾಮೋಹ ದುರಾಶೆಗಳ ಉದಾಹರಣಗಳಾಗಿವೆ. ಆಶಾಗ್ರಸ್ತನಾಗಲಿಕ್ಕೆ ವ್ಯಾಮೋಹದಂತೆ ದುರಭಿಮಾನವೂ ಕಾರಣವಾಗಿರುವದು. ಯಾವನೊಬ್ಬ ಮನುಷ್ಯನಿಗೂ, ನಮಗೂ ಸ್ನೇಹರೂಪವಾದ ಅಭಿಮಾನ ಬೆಳೆಯಬೇಕಾದರೆ ನಾವು ಅವನೊಡನೆ ಸಂಪೂರ್ಣಸಲಿಗೆಯಿಂದ ನಡೆದು, ಅವನ ಗುಣದೋಷಗಳು ತಿಳಿದನಂ ತರ ನಾವಿಬ್ಬರೂ ಸಮಾನಧರ್ಮದವರಾದರೆ ಮಾತ್ರ ನಾವು ಪರಸ್ಪರಾಭಿಮಾನಿಗಳಾಗುವೆವು. ಹೀಗೆ ಆಗದೆ ಕಾರ್ಯ ಸಾಧನ ಕಾಗಿ ಒಬ್ಬನು ನಮ್ಮನ್ನು ಹೆಚ್ಚಾಗಿ ಹೊಗಳಿದ ಮಾತ್ರದಿಂದ ಕೇಳಿದಷ್ಟು ದ್ರವ್ಯಸಹಾಯಮಾಡಿದಮಾತ್ರದಿಂದ ನಾವು ಅವನ ನಿಜ ವಾದ ಗುಣಗಳನ್ನು ಪರೀಕ್ಷಿಸದೆ ಅವನಲ್ಲಿಡುವ ಅಭಿಮಾನವು ನಿಜ