ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--೬F ಮುಖ್ಯ ಶಕ್ತಿಯಾಗಿದೆ. ಅವಿಶ್ರಾಂತಶ್ರಮಮೂಡಿದ ಹೊರತು ಕೆಲಸದ ಮಹತ್ವವು ಬೆಳೆಯುವದಿಲ್ಲ. ಇಂಥ ಹಲವು ಕೆಲಸಗಳನ್ನು ಮಾಡಿದ ಹೊರ್ತು ಮನುಷ್ಯನ ಮಹತ್ವಬೆಳೆಯುವದಿಲ್ಲ. ಕೆಲಸಮಾಡುವ ಸಂಧಿ ಗಳನ್ನು ದೊರಕಿಸುವವನು ಪ್ರಗತಿಪರನ, ಸಂಧಿಗಳನ್ನು ಪ್ರಯತ್ನ ಪೂರ್ವಕ ಕಳಕೊಳ್ಳುವವನು ಪ್ರಗತಿಹೀನನೂ ಆಗುವರು, ತಮ್ಮ ಜಾತಿಯವರ ಸಲುವಾಗಿ ಬಡ ಸಿದ್ದೇಗುಲಾಮನಾದ ಡಾ. ಬುಕರ ಟಿ. ವಾಸಿಂಗ್ಯನ್ನನು ಅತ್ಯಂತ ಶ್ರಮಪಟ್ಟು ಹಿತಮಾಡುವ ಸಂಧಿಯನ್ನು ತಂದುಕೊಂಡಿದ್ದರಿಂದಲೇ ಅವನು ಆ ಜಾತಿಯೆ-ಅದೇಕೆ ಮಾನವಜಾ ತಿಯ ಕಲ್ಯಾಣಕರ್ತನಾದನು. ಅವನು ತಾನು ಶ್ರೀಮಂತನಲ್ಲವೆಂದೂ, ಸುಶಿಕ್ಷಿತನಲ್ಲವೆಂದೂ ಭಾವಿಸಿದ್ದರೆ, ಅವನಿಗೆ ಈ ಸಂಧಿಯು ದೊರಕುತ್ತಿ ದಿಲ್ಲ. ಉಪಹಾಸದಿಂದ ಪೀಡಿತನಾದ ಅವನು ಕೇವಲ ಗುಲಾಮಗಿರಿಯ ಲ್ಲಿಯೇ.ದೀರ್ಘ ಪರಿಶ್ರಮಪಟ್ಟು ಸ್ವತಃ ವಿದ್ಯೆಸಂಪಾದಿಸಿ, ಮಂದಿಗೆ ಕಲಿಸಿ ಅವರಲ್ಲಿ ಮನುಷ್ಯತ್ವವನ್ನುಂಟುಮಾಡಿದ್ದರಿಂದಲೇ ಅವನ ಮಹತ್ವ ಬೆಳೆದಿದೆ. ಸಾಧಾರಣವಾಗಿ ವಿಚಾರಿಸಿ ನೋಡಿದರೆ ಮನುಷ್ಯನು ಆಲಸ್ಯ ಪ್ರಿಯನೆಂಬದು ಕಂಡುಬರುತ್ತದೆ. ಅವನು ಅವಶ್ಯವೆಂದು ಎಲ್ಲಿ ಕೆಲಸಗಳನ್ನು ಮಾಡುತ್ತಿರುತ್ತಾನೆ. ಏಳುವದು, ಕೂಡುವದು, ಓಡಾಡುವದು, ಕೆಲಸಮಾಡುವದು ಇವು ಅವನಿಗೆ ಬೇಸರಿಕೆಯನ್ನು ಟುಮಾಡುತ್ತವೆ. ಶ್ರೀಮಂತರಿಗೂ 'ಆಲಸ್ಯದಲ್ಲಿಯ ಐಷ ಆರಾಮ ಗಳಲ್ಲಿಯೂ ಬೆಳೆದವರಿಗೂ ಒಡವರ ಕಲ್ಪನೆಯೇ ಆಗುವದಿಲ್ಲ. ಕಷ್ಟಪಟ್ಟು ಪ್ರಗತಿ ಹೊಂದೆಂದು ಯಾರಾದರೂ ಅವರಿಗೆ ಬೋಧಿ ಸಿದರೆ ಅವರು ಅದರ ಅರ್ಥವನ್ನೇ ತಿಳಿಯದಾಗುವರು. ಇಂಧವರು ದೀರ್ಘಪರಿಶ್ರಮಪಟ್ಟು ಉಪಹಾಸ ಅಪಮಾನಗಳನ್ನು ಸಹಿಸಿ ಪ್ರಗತಿ ಹೊಂದಲಿಕ್ಕೆ ಎಂದೂ ಯತ್ನಿ ಸಲಾರರು, ಆಲಸ್ಯತನದಿಂದ ಆರೋ ಗತಿಯಾಗಿ ಇವರ ಶ್ರೀಮಂತಿಕೆ ಕಳೆದುಹೋಗಿ' ಬಡತನಬಂದಾಗ ಮಾತ್ರ ಇವರ ಕಣ್ಣುಗಳು ತೆರೆಯಹತ್ತುವವು.