ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೬ಗಿ ಅವನಿಗೆ ಉತ್ತರಧ್ರುವದ ಶೋಧವಾಯಿತು. ಜೇಡಹುಳವು ಮನೆಕಟ್ಟು ವಾಗ ತಂತುಗಳು ಮೇಲಿಂದ ಮೇಲೆ ಹರಿಯುತ್ತಿದ್ದರೂ ಬೇಸರಪಡದೆ ದೃಢನಿಶ್ಚಯದಿಂದ ತಂತುಗಳನ್ನು ಹೆಣೆದು ಮನೆ ಕಟ್ಟುವದು, ಕ್ಷಣ ಶಃ ಪ್ರಗತಿಹೊಂದುತ್ತಲಿದ್ದ ಈ ಸೃಷ್ಟಿಯಲ್ಲಿ ನಾವು ನಮ್ಮ ಪ್ರಗ ತಿಯನ್ನು ಮಾಡಿಕೊಳ್ಳುವದು ಕರ್ತವ್ಯವಾಗಿದೆ. ಹೀಗೆ ಮಾಡದೆ ಪ್ರಗತಿಹೀನರಾಗುತ್ತ ಹೋಗಿ, ಸೃಷ್ಟಿಯ ರಚನೆಗೆ ಬಾಧೆತರುವದು ಯೋಗ್ಯವಾದೀತೆ? ೧೦ ನೆಯ ಖಂಡ-ಆಸ್ಥೆ-ಕಾಳಜಿ ಹೆಚ್ಚು ಕೆಲಸಮಾಡುವವನಿಗಿಂತ ಕಾಳಜಿಪೂರ್ವಕ ಕೆಲಸ ಮಾಡುವವನು ನನಗೆ ಅತ್ಯಂತ ಪ್ರಿಯನಾಗುವನು” ಎಂದು ಓರ್ವ ಬ್ರಿಟಿಶ ಮಂತ್ರಿವಠನು ಅಂದಿದ್ದಾನೆ. ಆಚಾರ್ಯರು ಕುದುರೆಯ ಹಿಂದೆಬಿದ್ದದ್ದನ್ನೆಲ್ಲ ತಕ್ಕೊಂಡು ಬಾ ಎಂದು ಹೇಳಿದ ಮಾತ್ರದಿಂದ ಬುದ್ಧಿಗೇಡಿ ಭಗವಂತನು ಕುದುರೆಯ ಲದ್ದಿಯನ್ನು ಕೂಡ ಹಸಿಬಿ ಯಲ್ಲಿ ತುಂಬಿತಂದಂತೆ, ಕಾರ್ಯಗಳ ಮಹತ್ವವನ್ನು ತಿಳಿಯದೆ ಕೆಲ ಸಮಾಡುವವರು ಬಹಳ, ಕಾರ್ಯದ ಮಹತ್ವ ತಿಳಿಯುವದಕ್ಕೆ ಮನ ಸ್ಸಿನಲ್ಲಿ ಆಸ್ಟ್ರೇ-ಕಾಳಜಿ ವಹಿಸಬೇಕಾಗುವದು, ಆಸ್ಥೆಯು ಬೆಳೆ ಬೆಳೆ ದಂತೆ ಪ್ರಯತ್ನಗಳು ಎಂದೂ ನಿರರ್ಥಕವಾಗುವದಿಲ್ಲ. ಹಿಂದಕ್ಕೆ ಆಗಿ ಹೋದ ಮಂತ್ರಿವರ್ಯ ಯೋಗಂಧರಾಯಣ, ಅಮಾತ್ಯ ರಾಕ್ಷಸ ಮೊದಲಾವರು ಅತ್ಯಂತ ಆಸ್ಥೆಯಿಂದ ಕೆಲಸಮಾಡು ತಿದ್ದುದರಿಂದಲೇ ಅವರು ಸುಪ್ರಸಿದ್ದ ಪ್ರಧಾನರಾಗಿದ್ದರು, ಮೈಸೂರು ಮಾಜಿ ದಿವಾಣರಾದ ಸರಶೇಷಾದ್ರಿ ಅಯ್ಯನವರು ಒಳ್ಳೆ ಆಸ್ಥೆಯಿಂದ ಕಾರ್ಯಭಾರವನ್ನು ಸಾಗಿಸಿದ್ದರಿಂದಲೇ ಅಂಧಕಠಿಣ ಪ್ರಸಂಗಿದಲ್ಲಿ ಕೂಡಾ ಮೈಸೂರ ರಾಜ್ಯವು ಪ್ರಗತಿಯನ್ನು ಹೊಂದಿತು. ನಮ್ಮ ವಿಷ ಯಕ್ಕೆ ನಮ್ಮಲ್ಲಿ ಆಸ್ಥೆಯಿಲ್ಲದಿರಲು ಮಂದಿಯ ಬಗ್ಗೆ ನಾವು ಆಸ್ಟೆಪ ಡುವ ಬಗೆಯಾದರೂ ಹೇಗೆ?