ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ -೬೨-~- * ತನ್ನಂತೆ ನರರಬಗೆದೊಡೆ ಕೈಲಾಸಬಿನಾಣವಕು” ಎಂಬ ಸರ್ವಜ್ಞ ಕವಿಯ ಉಕ್ತಿಯು ಮನನೀಯವಾಗಿದೆ. ಖರೇ ಆಸ್ಟೆಯಿಂ ದಾಗಲಿ, ತೋರಿಕೆಯ ಡಂಭಾಚಾರದ ಆಸ್ಥೆಯಿಂದಾಗಲಿ ನಾವು ನಮ್ಮ ಕೆಲಸಗಳನ್ನು ಹೇಗಾದರೂ ಸಾಗಿಸಿಕೊಳ್ಳುತ್ತಿರುವೆವು. ಆದರೆ ಪರರ ಕೆಲಸದಲ್ಲಿ ನಮ್ಮ ಆ ಡಂಭಾಚಾರದ ಆಸ್ಥೆಯನ್ನು ಕೂಡ ಉಪಯೋಗಿಸ ಹೋಗದೆ, (ಹದಲ್ಲಿ ಹತ್ತಿತು ಹಾರಿದಲ್ಲಿ ಹಾರಿತು” ಎನ್ನುವಂತೆ ದುರ್ಲಕ್ಷ್ಯ ಮಾಡುವೆವು. ಇದರಿಂದ ಕಾರ್ಯಕೆಟ್ಟು ಹಾನಿಯಾಗುವ ಮಾನಕ್ಕಿಂತ, ನಮ್ಮ ವೃತ್ತಿಯು ಕೆಟ್ಟು ಪ್ರಗತಿಹೀನ ವಾಗುವಮಾನವು ಹೆಚ್ಚಾಗುವದು. ಆದ್ದರಿಂದ ಪ್ರಗತಿಪರನು ಪ್ರಗ ತಿಹೊಂದುವದಕ್ಕಾಗಿ ಮಾಡಬೇಕಾದ ಕೆಲಸವನ್ನು ಒಳ್ಳೆ ಆಸೆ ಯಿಂದಮಾಡಿ ಪ್ರಗತಿಹೊಂದಬೇಕು. ೧೨ ನೆಯ ಖಂಡ-ದೇಶಪರ್ಯಟಿನ. ಯೋನಸಂಚರತೀ ದೇಶಾನ್ ಯೋನಸೇವೇ ವಂಡಿತಾನ್ | ತಸ್ಯ ಸಂಕುಚಿತಾಬುದ್ದಿ ಮೃತಬಿಂದುರಿನಾಂಭಸಿ || ಸುಭಾಷಿತ || ಎಷ್ಟೋಜನರು ಪ್ರವಾಸದಲ್ಲಿ ಕಳೆಯುವ ವೇಳೆಯು ನಿರರ್ಧಕ ವಾಗಿ ವ್ಯಯವಾಗುವದೆಂದು ಭಾವಿಸುವರು. ಆದರೆ ಹಾಗೆ ತಿಳಿಯು ವದು ದಡ್ಡತನವು, ಪ್ರವಾಸಮಾಡುವದರಿಂದ ವಿಶಿಷ್ಟ ಪ್ರಕಾರದ ಜ್ಞಾನಸಂಚಯವಾಗುವದು, ದೇಹಕ್ಕೆ ಆರಾಮವೆನಿಸುವದು. ಪ್ರಸಿದ್ದ ಜನರ ಗುರುತುಪರಿಚಯವಾಗುವದು. ಕೇಲ್ಕಾನೆದೇಶಾಟನಾ ಪಂಡಿ ತಮೈತ್ರೀಸಭೇತಸಂಚಾರ” ಎಂಬಂತೆ ಪ್ರವಾಸದಿಂದ ಉಪಲಬ್ದವಾ ಗದ ಹಲವು ಸಂಗತಿಗಳ ಜ್ಞಾನವು ಉಪಲಬ್ದವಾಗುತ್ತದೆ, ಪ್ರವಾಸಮಾಡುವದರಿಂದ ಮಹಾ ಮಹಾ ರೋಗಿಗಳು ಗುಣ ಹೊಂದಿರುವದನ್ನು ನೋಡಿದರೆ ಮನುಷ್ಯನಿಗೆ ಅದರಲ್ಲಿಯೂ ಪಟ್ಟಣ ವಾಸಿ ಮನುಷ್ಯನಿಗೆ ಪ್ರವಾಸವು ಅತ್ಯಂತ ಅವಶ್ಯವಾದದ್ದು. ಯಾಕಂ ದರೆ ಮುಂಬಯಿಯ೦ಧ ಅತ್ಯಂತ ದಟ್ಟವಾದ ವಸತಿಯುಳ್ಯ ಪಟ್ಟಣ ಗಳಲಿ ಯ ಸಾಧಾರಣಪ್ರತಿಯ ಜನರು ಹಗಲು-ರಾತ್ರಿ ಶ್ರಮಬಮ್ಮ