ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪= ಶ ಚಕಶಕ್ತಿಗೆ ಬಹಳ ಸಹಾಯವಾಗುವದು. ಪೌರ್ವಾತ್ಯರಲ್ಲಿ ಪ್ರತಿವರ್ಷ ಕೆಲವು ದಿವಸಗಳನ್ನು ಪ್ರವಾಸ ದಲ್ಲಿ ಕಳೆಯುವ ರೂಢಿಬಿದ್ದಿದೆ. ಅನುಕರಣೀಯವಾದ ಆ ರೂಢಿಯು ವೃಕ್ಷ ಮೊದಲಾದವುಗಳಿಗೆ ಮಳೆ-ಚಳಿ-ಬಿಸಿಲು-ನೆರಳು ಇವುಗಳಿಂದ ಹೊಸ ಜೀವನವು ಪ್ರಾಪ್ತವಾಗುವಂತೆ, ಮನುಷ್ಯನಿಗೆ ಅತ್ಯಂತ ಉತ್ಸಾ ಹಪೂರ್ಣವಾದ ಹೊಸ ಚೈತನ್ಯವನ್ನು ಕೊಡುವದು, ಪ್ರವಾಸಮಾಡುವಾಗ ನಾವು ಚಿಂತೆಯನ್ನು ಸಂಗಡ ಕಟ್ಟಿ ಕೊಂಡು ಹೋಗಬಾರದು, ಯಾಕೆ ಯಾತ್ರೆಯ ಮಾಡುತಿರ್ಪರ ಲೇನಿಹುದು” ಎಂಬಂತೆ ಪ್ರವಾಸಿಕನು ದ್ವೇಷ, ಅಸೂಯಾ, ನಿಂದಾ, ಮೋಹ ಇತ್ಯಾದಿ ಗುಣಗಳುಳ್ಳವನಾಗಿ ಪ್ರವಾಸಮಾಡಿದರೆ, ಪ್ರವಾ ಸದ ಮಹತ್ವವು ಅವನಿಗೇನೂ ತಿಳಿದುಬರುವದಿಲ್ಲ. ಯಾಕಂದರೆ ಅವನ ಮನಸ್ಸು ಪ್ರವಾಸದ ಸುಖವನ್ನು ಅನುಭವಿಸಲು ಅವನ ಸಂಗಡ ಬಂದಿರುವದಿಲ್ಲ. ಆದು ಮನೆಗೆಲಸ, ಹೆಂಡತಿ, ಮಕ್ಕಳು, ತರುವದು, ಬರುವದು, ಖಟ್ಟೆ-ಖೋಖಲೆ ಇವುಗಳಲ್ಲಿ ಪೇಚಾಡುತ್ತ ಮನೆಯ ಯೇ ಇರುತ್ತದೆ. ಆರೋಗ್ಯವು ಎಲ್ಲಕ್ಕೂ ಮಹತ್ವವಾದ ವಿಷಯವಾಗಿರುತ್ತದೆ. (ಅಪಭಲಾ ತೋ ಜಗಭಲಾ” ಎಂಬ ನಾಣ್ಣುಡಿಯ ಅರ್ಧವನ್ನು ಆರೋಗ್ಯದಷ್ಟಿಯಿಂದ ಮಾಡಿದರೆ ಮನುಷ್ಯನು ಗಟ್ಟಿಮುಟ್ಟಿಯಾ ಗಿದ್ದರೆ ಏನನ್ನಾದರೂ ಮಾಡಿ ಪ್ರಗತಿಹೊಂದುವನು, ಎಂದಾಗುವದು; ರೋಗಿಷ್ಠನಾದ ಮನುಷ್ಯನು ಯಾವ ಕಾರ್ಯವನ್ನೂ ಸಾಧಿಸಲರ್ಹ ನಲ್ಲ.ಆರೋಗ್ಯದ ಬಲದಿಂದಲೇ ನಮಗೆ ಎಲ್ಲ ಸುಖಗಳ ಅನುಭವ ಆಗು ವದು, ಆದ್ದರಿಂದ ಕೃಪಣತನಮಾಡುವದಿದ್ದರೆ ಬೇರೆ ಬೇಕಾದ ವಿಷಯಗಳಲ್ಲಿ ಮಾಡಬಹುದು. ಪ್ರವಾಸಕಾರ್ಯದ ವಿಷಯಕ್ಕೆ ದುಡ್ಡಿನ ಹಾಗು ವೇಳೆಯ ಕೃಪಣತನಮಾಡಿ ಆರೋಗ್ಯ ಮಂದಿರದ ನೆಲಗಟ್ಟನ್ನು ಸಡಲಿಸಲಿಕ್ಕೆ ಯತ್ನಿಸಲಾಗದು.