ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

=೩೫ ೧೩ ನೆಯ ಖಂಡ-ಪ್ರಸನ್ನತೆ, ಆನಂದಕಾರಕ ಸಾಧನಗಳಲ್ಲಿ ಪ್ರಸನ್ನತೆ ಎಂಬದೊಂದು ಬಹು ದೊಡ್ಡ ಸಾಧನವಾಗಿದೆ. ಪ್ರಸನ್ನತೆಯಿಂದ ಶಿಕ್ಷಕನು ಲೋಕಪ್ರಿಯ ನಗುವನು. ಅಂಗಡಿಕಾರನು ಗಿ ಗಿರಾಕಿಗಳನ್ನು ದೊರಕಿ ಸುವನು; ನೌಕರನು ಹೆಚ್ಚು ಸಂಬಳವನ್ನು ದೊರಕಿಸುವನು; ರಾಜನು ಪ್ರಜಾನುರಾಗಿಯಾಗುವನು; ನಾನಾ ಪ್ರಕಾರದ ಮಹತ್ವಾರ್ಯಗಳು ಪ್ರಸನ್ನತೆಯನ್ನು ಕಾಯ್ದುಕೊಳ್ಳುವದರಿಂದ ಸಹಜವಾಗಿ ಕೊನೆಗಾ ಣುವವು, ಬೆನ್ನತೆಯು ಪ್ರಗತಿಯನ್ನು ನಾಶಮಾಡುವ ಶಸ್ತ್ರವಾಗಿದೆ. ಪ್ರಸನ್ನತೆಯು ಶಕ್ತಿಯ ಉತ್ಪಾದಕವೂ, ವಿನ್ನತೆಯು ಶಕ್ತಿಯ ನಾಶ ಕಾರಕವೂ ಆಗಿರುತ್ತದೆ. ಪ್ರಸನ್ನತೆಯ ಮನೋಹರತ್ವವೂ ಇರುವದು. ಅದರಿಂದ ಆದು ಪ್ರಗತಿಪರನಿಗೆ ಕಾರ್ಯ ನಾಧಕವಾಗಿರುವದು; ಪ್ರಸನ್ನತೆಯಿಂದ ಸ್ನೇಹವು ಬೆಳೆಯುವದು, ಪ್ರಸನ್ನ ಮುಖಿಯು ದುಷ್ಟ ಹಾಗು ವಿರೋಧಿ ಮನುಷ್ಯನಿಂದ ಕೂಡ ಪ್ರಸಂಗದಲ್ಲಿ ಸಹಜವಾಗಿ ಸಹಾಯಹೊಂ ದುವನು. ಮನೆಯಲ್ಲಾಗಲಿ, ಕುರಖಾನೆಗಳಲ್ಲಾಗಲಿ, ರಾಷ್ಟ್ರದ ಲ್ಲಾಗಲಿ, ಲೋಕಪ್ರಿಯನಾದವನು ಪ್ರಸನ್ನ ಮುಖಿಯೇ ಆಗಿರುತ್ಸಾ ನೆಂಬದು ಕಂಡುಬರುತ್ತದ. ತನ್ನ ಹಾಗು ಉಗ್ರಮುದ್ರೆಯ ಮನು ಷ್ಯನು ಲೋಕಪ್ರಿಯನಾಗುವದು ದುರವು, ಸನ್ನವದನನು ಬೇಗ ಯುವನಂದೂ, ಪ್ರಸನ್ನ ಮುಹಿಯು ದೀರ್ಘ ಕುಲಬಾಳುವನೆಂದೂ ತಜ್ಞರು ಹೇಳುತ್ತಾರೆ. ಆದ್ದರಿಂದ ಪ್ರಗತಿಯನ್ನು ಬಯಸುವವನು ಸದು ಪ್ರಸನ್ನ ಚಿತ್ರವಿರುವಂತೆ ಯತ್ನಿಸಬೇಕು. ಅಭ್ಯಾಸದಿಂದ ಬೇಕಾದದ್ದನ್ನು ಕೈವಶಮಾಡಿಕೊಳ್ಳಬ ಹುದು, ದುರ್ಮುಖಿಯು ಕೂಡ ಆಭಾಸದಿಂದ ಪ್ರಸನ್ನತೆಯನ್ನು ಪಡೆಯಬಹುದು , ಪ್ರಸನ್ನಚಿತದವನಿಗೆ ದುಃಖ-ಶೋಕಗಳು ಹೆಚ್ಚಾಗಿ ಬಾಧಿಸಲಾರವು. ಪ್ರಸನ್ನತೆಯನ್ನು ಸಂಪೂರ್ಣವಾಗಿ ಪಡೆಯಲಿಚ್ಚಿಸುವವನು ಮೊದಲು ಸ್ಮಿತವದನನಾಗಿರಲು ಪ್ರಯತ್ನ ಮಾ