ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-vasa ಡಬೇಕು, ಮುಗುಳುನಗೆಯೆಂದರೆ, ಜಾರಿಣಿಯು ಜಾರನನ್ನು ವಶ ಮಾಡಿಕೊಳ್ಳುವಾಗ ತೋರಿಸುವ ವಿಕಟಹಾಸ್ಯವಲ್ಲ.ಬಾಲ ಬಡಿಯವ ಸ್ವಭಾವದವರು ಅಧಿಕಾರಿಗಳ ಇಲ್ಲವೆ ಶ್ರೀಮಂತರ ಬಳಿಯಲ್ಲಿ ಕಾರ್ಯ ಸಾಧನಕ್ಕಾಗಿಯ, ಒಣಪ್ರತಿಷ್ಠೆಯನ್ನು ಹೊಂದುವದಕ್ಕಾಗಿ ನಗುವ ದೇಶಾವರಿ ನಗೆಯಲ್ಲ; ತಾಯಿಯು ಪ್ರೀತಿಯಿಂದ ಮಗನನ್ನು ಮುದ್ದಾಡುವಾಗ ನಗುವನಗೆಯು ; ಸ್ಮಿತವದನದಿಂದ ಕಡುವೈರಿಯು ಕೂಡಶಾಂತನಾಗುವನು. ಸ್ಮಿತವದನನಾಗುವದು ಸಾಧಿಸಿದ ಬಳಿಕ ಅ೦ ತಃಕರಣವನ್ನು ಪ್ರಸನ್ನ ವಾಗಿಟ್ಟುಕೊಳ್ಳಲಿಕ್ಕೆ ಪ್ರಯತ್ನಿಸಬೇಕು. ಸತ್ಯ ಹಾಗು ಸುಲಲಿತ ಭಾಷಣ ಮಾಡುವದರಿಂದ ಪ್ರಸನ್ನತೆಯು ಅಂತಃಕರಣದಲ್ಲಿ ನೆಲೆಗೊಳ್ಳಹತ್ತುವದು, ಪ್ರಸನ್ನಾಂತಃಕರಣವು ತ್ರಾಸ, ನಿರಾಶೆ, ದುಃಖ, ಕಷ್ಟ ಇವುಗಳ ಮೇಲೆ ಆಧಿಕಾರ ತೋರಿಸಿ ಅವನ್ನು ಓಡಿಸುವದು, ಪ್ರಸನ್ನಚಿತ್ತನು ಎಂಧ ಪ್ರತಿಕೂಲಪ್ರಸಂಗ ಗಳಲ್ಲಿಯ ಅನುಕೂಲತೆಯನ್ನು ದೊರಕಿಸಿಕೊಂಡು ಪ್ರಗತಿ ಪರನಾಗುವನು , ನಿಜವಾದ ಸಭ್ಯ ಸ್ತ್ರೀಪುರುಷರು ದುಃಖ, ಶೋಕ, ದಾರಿದ್ರ ಇವುಗಳನ್ನು ಸಹಜವಾಗಿ ಸಹಿಸುವರು, ಪ್ರಸನ್ನತೆಯಿಂದಲೇ ಸಭ್ಯ ಗುಣವು ಅವರಲ್ಲಿ ಒಡಮೂಡಿರುತ್ತದೆ. ದೈನ್ಯವನ್ನು ಮಂದಿಯ ವಂದೆ ಹೇಳಿಕೊಳ್ಳುವದು ಸಭ್ಯ ಜನರಿಗೆ ಮರಣಪ್ರಾಯವಾಗು ವದು. ಇದರಿಂದಲೇ ಅವರು ಉಜ್ಜಲಚರಿತ್ರರಾಗಿ, ಲೋಕವಂದ್ಯ ರಾಗುವರು. ದುಃಖ, ಶೋಕ, ಶ್ರಮಗಳನ್ನು ನುಂಗಲು ಪ್ರಯತ್ನ ಮಾಡುವದರಿಂದ ಮನೋರಾರ್ಡ್ಯವು ಹೆಚ್ಚುವದು, ದೃಢಮನ ಸ್ಸಿನವನು ಪ್ರಸನ್ನತೆಯನ್ನು ಪಡೆದಿರಬೇಕಾಗುವದು, ಇಲ್ಲದಿದ್ದರೆ ಅವನ ನಿಶ್ಚಯವು ಸಹಜವಾಗಿ ಸಡಿಲಾಗಬಹುದು, ಕಪಟದ, ಮಾತ್ಸರ್ಯದ, ಭಿನ್ನತೆಯ ಮುದ್ರೆಗಳುಳ್ಳ ಮನು ಷ್ಯನು ಯಾವ ಪ್ರಕಾರದ ಪ್ರಗತಿಯನ್ನೂ ಪಡೆಯಲಾರನು. ನಗೆ ಮಾಗದ ಮಗುವನ್ನು ಯಾರು ಮುದ್ದಿಡಲಿಕ್ಕಿಲ್ಲ ? ನಗೆಮೊಗದ