ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-~- ಮನುಷ್ಯನನ್ನು ಯಾರು ಮುಂದೆ ಕರೆಯಲಿಕ್ಕಿಲ್ಲ' ನಗೆಮೊಗದ ಹೆಂಡತಿಯನ್ನು ಯಾವ ಗಂಡನು ಪ್ರೀತಿಸಲಿಕ್ಕಿಲ್ಲ ? ಇದು ಯಾತರ ಪರಿಣಾಮವ? ಅವರ ಪ್ರಸನ್ನ ಮಯಿಯಾದ ಮುದ್ರೆಯಿಂದಲ್ಲವೇ? ಸರಳವಾದ ನಡಾವಳಿಯವರಾಗುವದೂ, ಮಿತ್ರರ ಆದರಕ್ಕೆ ಪುತ್ರರಾಗುವದ್ರೂ, ಸಮಾಜದ ಪ್ರೇಮಕ್ಕೆ ಪಾತ್ರರಾಗುವದೂ ಪ್ರಸ ನ್ನ ಚಿತ್ರದಿಂದಲೇ ಪ್ರಸನ್ನತೆಯನ್ನೊಂದು ಕಳಕೊಳ್ಳುವದರಿಂದ ಮನೆಯನ್ನ ಮಿತ್ರರ ಸಮಾಜದ ರಾಷ್ಟ್ರದ ಕ್ಷೇಭಕ್ಕೆ ಪಾತ್ರರಾಗ ಬೇಕಾಗುತ್ತದೆ. ಎಷ್ಟೋ ಜನರು ಸಾಧಾರಣವಾದ ವ್ಯವಹಾರಗ ಳಲ್ಲಿ ಕೂಡ ಸಭ್ಯತೆಯನ್ನು ಕಾಯ್ದುಕೊಳ್ಳುವದಿಲ್ಲ. ಈ ದಾರಿಯು ಯಾವ ಊರಿಗೆ ಹೋಗುವದೆಂದು ಪ್ರವಾಸಿಕನು ಕೇಳಲು, ದಾರೀ ತೋರಿಸಲಿಕ್ಕೆ ನನ್ನನ್ನು ಆಳುಗಿ ನಿಯಮಿಸಿರುವೆಯೇನು? ಎಂದು ಕೇಳುವ ನಿರ್ದಯರು ನಮ್ಮಲ್ಲಿ ಬಹುಜನರಿರುವರು. ಇ೦ಧ ದುರ ಭಿಮಾನಿಗಳಿಂದ ಸ್ವಹಿತದ ಕಾರ್ಯವಾಗಲಿ, ದೇಶಹಿತದ ಕಾರ್ಯ ವಾಗಲಿ ಆಗುವ ಸಂಭವವಿಲ್ಲ. ಇವರ ಈ ದುಶ್ಚಿತತನದಿಂದ ಅವರ ಪ್ರಗತಿಯ ಘತಮಾತ್ರ ತಪ್ಪದೆ ಆಗುವದು: - ಶ್ರೀ ಶೇಷಾಚಲ ಸದ್ಗುರುಗಳು ಎಲ್ಲರನ್ನೂ ಸ್ಮಿತವದನ ಪೂರ್ವ ಕವಾಗಿ ನಮಿಸುತ್ತ ಅವರನ್ನು ಕುರಿತು--ಮಹಾರಾಜಾ, ಎಂಬ ಉಪಪದದೊಡನೆ ಸಂಬೋಧಿಸುತ್ತ ಬೋಧಮಾಡುತ್ತಿದ್ದದರಿಂದಲೇ ಅವರ ಬೋಧವು ಸುಪರಿಣಾಮಕಾರಿಯಾಗಿ, ಅವರು ಲೋಕವಂದ್ಯ ರೂ, ಭಕ್ತಾನುರಾಗಿಗಳೂ ಆದರು. ಶ್ರೀ ಟೇಂಬೇ ಮಹಾರಾಜರು ಸದ್ಗುಣಿಗಳನ್ನು ಮನ್ನಿಸುತ್ತಲೂ, ದುರ್ಗುಣಿಗಳನ್ನು ದಂಡಿಸು ತಲೂ ಲೋಕಹಿತದಕ್ಷರಾದರು. ಆದರೆ ಅಗಡಿಯ ಸಾಧುಗಳು ದುಷ್ಯರ ಹಾಗು ಶಿಷ್ಯರ ದೃಷ್ಟಿಯಿಂದ ಸರಿಯಾಗಿಯೇ ವಂದ್ಯರಾ 'ದಂತೆ ಟೇಂಬೇಮಹಾರಾಜರು ಆಗಲಿಲ್ಲ. ಇದರಲ್ಲಿ ಶ್ರೀ ಟೇಂಬೇಮ ಹಾರಾಜರನ್ನು ನಿಂದಿಸಬೇಕೆಂದು ಲೇಖಕನ ಉದ್ದೇಶವಿಲ್ಲ. ಶ್ರೀಗುರು ಗಳಂತೆ ಅವರೂ ಲೇಖಕನಿಗೆ ಅತ್ಯಂತ ಪೂಜ್ಯರಾಗಿರುವರು. ಆದರೆ