ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F ೧೪ನೆಯ ಖಂಡ--ದೈವೀಭಾವನೆ. “ಸತ್ಯಂವದ, ಧರ್ಮಂಚರ; ಆಚಾರ್ಯ ದೇವೋಭವ, ಮಾತೃ ದೇವೋಭವ, ಪಿತೃದೇವೋಭವ' ಮೊದಲಾದ ಉಪನಿಷದ್ವಾಕ್ಯಗಳು ಪ್ರಗತಿಪರನಿಗೆ ಕೇವಲ ಮಾರ್ಗದರ್ಶಕಗಳಾಗಿವೆ. ಪ್ರತಿಯೊಬ್ಬ ಮನುಷ್ಯನು ಪ್ರಗತಿಯನ್ನು ಹೊಂದುವಾಗ ದೈವೀಭಾವನೆಯುಳ್ಳವ ನಾಗಿರಬೇಕು. ದೈವೀಭಾವವಿಲ್ಲದೆ ಪ್ರಗತಿಹೊಂದುವದೆಂದರೆ, ನಾಯಿಯ ಬಾಲವನ್ನು ಕೊಳವೆಯಲ್ಲಿ ಹಾಕಿ ಸರಿಮಾಡಹೋದಂ ತೆಯೇ ಸರಿ. ಗುರುವು ಗುರುತ್ವವನ್ನು ಕಾಯ್ದುಕೊಳ್ಳಲಿಕ್ಕೂ, ಶಿಷ್ಯನು ಶಿಷ್ಯತ್ವವನ್ನು ಕಾಯುಕೊಳ್ಳಲಿಕ್ಕೂ, ತಾಯಿಯು ಮಾತೃತ್ವವನ್ನು ರಕ್ಷಿಸಲಿಕ್ಕೂ, ತಂದೆಯು ಪಿತೃಭಾವದವನಾಗಿರ ಲಿಕ್ಕೂ, ರಾಜನು ರಾಜನೆನಿಸಲಿಕ್ಕೂ ಪ್ರಜೆಗಳು ಪ್ರಜೆಗಳೆನಿಸಲಿಕ್ಕೂ, ಕ್ಷತ್ರಿಯನು ಕತ್ರಧರ್ಮಿಯಾಗಲಿಕ್ಕೂ, ಬ್ರಾಹ್ಮಣನು ಬ್ರಹ್ಮಜ್ಞಾನಿ ಯಾಗಲಿಕ್ಕೂ, ವೈಶ್ಯನು ವ್ಯವಹಾರದಕ್ಷನಾಗಲಿಕ್ಕೂ, ಶೂದ್ರನು ಬೇಸಾಯಿಸಾಗಿಸಲಿಕ್ಕೂ ಆರ್ಹರಾಗಿ, ಪ್ರಗತಿಪರರಾಗಬೇಕಾದರೆ ದೈವೀಭಾವನೆಯು ಅವರಲ್ಲಿ ಅತ್ಯವಶ್ಯವಾಗಿ ನೆಲೆಗೊಂಡಿರಬೇಕು: ದೈವೀಭಾವನೆಯೆಂದರೆ ದೇವರಲ್ಲಿ ಇಡುವ ನಿಷ್ಟೆಯು, ಅಥವಾ ಪೂಜ್ಯರಲ್ಲಿ ಇದ್ದ ಭಕ್ತಿಯು: ಭಕ್ತನು ದೇವರಲ್ಲಿ ವಹಿಸುವ ಭಾವ ನೆಯ, ಪತ್ನಿಯು ಪತಿಯಲ್ಲಿ ವಹಿಸುವ ಭಾವನೆಯ, ಮಗನು ತಂದೆಯಲ್ಲಿ ವಹಿಸುವ ಭಾವನೆಯ, ಪ್ರಜೆಗಳು ರಾಜನಲ್ಲಿ ವಹಿಸುವ ಭಾವನೆಯ ದೈವೀಭಾವನೆಯ ದ್ಯೋತಕಗಳಾಗಿರುವವು: ದೈವೀ ಭಾವನೆಯಿಲ್ಲದ ಭಕ್ತನು ಭಕ್ತನಲ್ಲ ; ಪತ್ನಿಯು ಪತ್ನಿಯಲ್ಲ; ಮಗನು ಮಗನಲ್ಲ ; ಪ್ರಜೆಗಳು ಪ್ರಜೆಗಳಲ್ಲ. ಹೀಗೆಯೇ ಪ್ರಗತಿಪರನನು ಷ್ಯನು ಸಮಾಜದಲ್ಲಿ ಅವಶ್ಯವಾಗಿ ವಹಿಸಬೇಕಾದ ದೈವೀಭಾವನೆಯು ಳ್ಳವನಾಗಿರಬೇಕಲ್ಲದೆ, ಸ್ವೀಕೃತಕಾರ್ಯದಲ್ಲಿ ಯ, ಕಾರ್ಯಸಾ ಧನಗಳಲ್ಲಿಯೂ, ಕಾರ್ಯ ಸಾಧಕನಾದ ತನ್ನಲ್ಲಿಯ ದೈವೀಭಾವ ನೆಯುಳ್ಳವನಾಗಿರಬೇಕು. ಕಾರ್ಯ, ಸಾಧನ, ಸಾಧ್ಯ ಈ ತ್ರಯಿ