ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲO ಗಳಲ್ಲಿಯ ದೈವೀಭಾವನೆಯು ಸರಿಯಾದ ಪ್ರಮಾಣದಲ್ಲಿ ಹೊರತು ಸಾಧಕನ ಪ್ರಗತಿಯು ಆಗುವದಿಲ್ಲ. ಬ್ರಹ್ಮಭಾವನೆಯುತನಾಗಬೇಕಾದರೆ ( ಅಹಂಬ್ರಹ್ಮಾಸ್ಮಿ” ಎಂದು ಸಾಧಕನು ತಿಳಿದಿರಬೇಕಾಗುವದು. ಗುರುಸಾಕ್ಷಾತ್ಕಾರ ಮೊದಲಾದ ವುಗಳಿಗಿಂತ ಆತ್ಮಸಾಕ್ಷಾತ್ಕಾರವೇ ಪ್ರಗತಿಪರನಿಗೆ ಪ್ರಾಮುಖ್ಯವಾದ ಸಾಧನವೆಂದು ವೇದಾದಿಗಳಲ್ಲಿ ಹೇಳಿದೆ ಆತ್ಮಸಾಕ್ಷಾತ್ಕಾರದಿಂದ ಬ್ರಹ್ಮ ತ್ವವನ್ನು ವಹಿಸುವವನು, ತಾನೊಬ್ಬ ಕೈಲಾಗದ ಆಶಾವಾದಿಯೆಂದು ಭಾವಿಸಿ ನಡೆದರೆ, ಬ್ರಹ್ಮತ್ವವನ್ನು ಎಂದೂ ಹೊಂದಲಾರನು. ಆದ್ದ ರಿಂದ ಪ್ರಗತಿಪರನು ಸುಗುಣಯುತ ನಾಗಿ ಸ್ವಂತದ ವಿಷಯದಲ್ಲಿ ದೈವೀಭಾವನೆಯುಳ್ಳವನಾಗಿರಬೇಕು, ಆದರೆ ನಾನೇ ದೇವರು; ನಾನೇ ಕುಲಗುರುವು; ನಾನೇ ಕುಲಪತಿಯು ಎಂದು ಬಹಿರಂಗದಲ್ಲಿ ಹೇಳುತ್ಯಹೊಗುವದು ದೈವೀಭಾವನೆಯ ಲಕ್ಷಣವಲ್ಲ. ಭಾವ ನೆಯು ಬರೇ ಭಾವಿಸತಕ್ಕ ವಿಷಯವೇ ಹೊರತು ಒಡನುಡಿಯುವ ವಿಷಯವಲ್ಲ. ಪ್ರಗತಿಪರನು ತಾನೆಷ್ಟು ಪೂಜ್ಯನೂ, ಸನ್ಮಾರ್ಗಿಯ ಕರ್ತ ಮಾಕರ್ತೃಮಶಕ್ತಿಯುಳ್ಳವನೂ ಆಗಿದ್ದರೂ, ತನ್ನ ದೊಡ್ಡಿಸಿಕೆ ಯನ್ನು ಹೇಳಿಕೊಳ್ಳಬಾರದು. ಹೀಗೆ ಹೇಳುವದರಿಂದ ತನ್ನ ಬಗ್ಗೆ ಜನರಲ್ಸಿ ಆದರವು ಕಡಿಮೆಯಾಗಿ, ದ್ವೇಷಕ್ಕೆ ಗುರಿಯಾಗಿ ಸನ್ಮಾರ್ಗ ದಿಂದ ಚ್ಯುತಿಹೊಂದಲಿಕ್ಕೆ ಕಾರಣವಾಗುವದು. ಆದ್ದರಿಂದಲೇ ಆವ ತಾರಿಕರು ಕೂಡ ತಾವು ಕಿಂಕರರೆಂದು ಹೇಳಿಕೊಳ್ಳುವರು. 'ಮಹಾ ರಾಜಾ, ಈ ದೇಹಕ್ಕೆ ಎದೆ ಸೀಳಿದರೆ ಮೂರು ಅಕ್ಷರವಿ ಮಹಾ ರಾಜಾ ! ಆದರೆ ಮಹಾರಾಜಾ, ಮಹಾಸ್ವಾಮಿಯು ಈ ಘಟದ ನಾಲಿ ಗೆಯಮೇಲೆ ಕುಳಿತುಕೊಂಡು, ಮೃದಂಗಬಾರಿಸುವವನು ಛಾಪಹಾಕಿ ಮೃದಂಗವನ್ನು ನುಡಿಸುವಂತೆ ನುಡಿಸುತ್ತಿರುವನು, ಮಹಾರಾಜಾ' ಎಂದು ನುಡಿದು ದೇವರಲ್ಲಿ ತಾನು ಎಷ್ಟು ದೈವೀಭಾವನೆಯುಳ್ಳವ ನಾಗಿದ್ದೇನೆಂಬದನ್ನು ವ್ಯಕ್ತಗೊಳಿಸುತ್ತಿದ್ದ ಶ್ರೀ ಶೇಷಾಚಲ