ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬanna ಗುರುವರನನ್ನು ನೋಡಿದವರಿಗೆ ನಿಜವಾದ ದೈವೀಭಾವನೆಯ ಕಲ್ಪ ನೆಯು ಆಗದಿರದು. ಪ್ರಗತಿಪರನು ಎಂಥ ನೀಚನನ್ನೂ ನಿಂದಿಸಬಾರದು. ವಿಂಟ್ ಸ್ವರೂಪವಾದ ಜಗತ್ತೆಲ್ಲ ಈಶ್ವರನ ಸ್ವರೂಪವೇ ಆಗಿರುವದರಿಂದ ಪ್ರತಿಯೊಂದನ್ನು ಈಶ್ವರೀಅಂಶವೆಂದು ತಿಳಿದು ನಡೆಯುವಲ್ಲಿ ಯಾವ ತರದ ದೋಷವೂ ತಟ್ಟುವ ಸಂಭವವಿಲ್ಲ, ಶುನಿಚೈವ ಸ್ವಪಾಕೇಟ್ ಪಂಡಿತಃ ಸಮದರ್ಶಿನಃ” ಎಂಬಂತೆ ವಿವೇಕಿಯಾದ ಪ್ರಗತಿಪರಪಂಡಿ ತನು ಜಗತ್ತಿಗೇ ಕಿಂಕರಭಾವವುಳ್ಳವನಾಗಿ ನಡೆಯುವದು ಅತ್ಯವ ಶವು, ಕಿಂಕರನಾದಹೊರತು ಶಂಕರನಾಗಲಾರನೆಂಬ ದೊಡ್ಡ ವರ ವಚನದ ಮರ್ಮವೂ ಇದೇ ಆಗಿದೆ: ಆದರೆ ದೈವೀಭಾವನೆಯು, ವಿವೇಕಿಗಳು ಸಂಪಾದಿಸತಕ್ಕ ಗುಣವಾಗಿದೆಯೇಹೊರತು, ಅವಿವೇಕಿಗಳಿಗೆ ಸಾಧ್ಯವಲ್ಲ. ಅವಿವೇಕಿ ಗಳಿಂದ ದೈವೀಭಾವನೆ ಧರಿಸಲ್ಪಡಬೇಕಾದರೆ {ಅನರ್ಧಕಾರಕ ಗಳಾದ ತಪ್ಪುಗಳಾಗುವ ಅಂಜಿಕೆ ಬಹಳ ಉಂಟು. ಮಾಘವ ನೈದಿ ಮಗಕೆಟ್ಟನು, ಕುಮಾರವನ್ನೋದಿ ಅಳಿಯಕಟ್ಟನು”ಎಂ ಬಂತೆ ಅವಿವೇಕಿಗಳಿಗೆ ದೈವೀಭಾವನೆಯ ನಿಜಸ್ವರೂಪವು ಗೊತ್ತಾಗ ದಿದ್ದರೆ ಅವರು ಆಡಮಾರ್ಗವನ್ನು ಹಿಡಿಯಹತ್ತುವರು. ಹೆಂಡತಿ ಯಲ್ಲಿ ದೈವೀಭಾವನೆಯಿಡುವವನು ಆಕೆಯನ್ನು “ಭೋಜ್ಪು ಮಾತಾ ಶ ಯ ನೇಷು ರಂಭಾಕಾರ್ಯ ಷು ಮ೦ತ್ರಿ...” ಹೀಗೆ ತಿಳಿಯಬೇಕು. ೧೫ ನೆಯ ಖಂಡ-ದಾಸ್ಯವಿಮೋಚನ (ಹಂಗಿನರಮನೆಗಿಂತ ಇಂಗಡದ ಗುಡಿಲೇಸು, ಭಂಗಬಟ್ಟುಂಬ ಬಿಸಿಯನ್ನಕ್ಕಿಂತ ತಂಗುಳವೇ ಲೇಸು” ಎಂಬ ಸಮಾನಅರ್ಧಗಳುಳ್ಳ ಈ ನಾಣ್ಣುಡಿಗಳು ದಾಸ್ಯವೃತ್ತಿಯನ್ನು ಹೇಯವತಿಯೆಂದು ಬೋಧಿಸುತ್ತಿರುವವು: ದಾಸ್ಯವತಿಯಿಂದ ಪ್ರಗತಿಗೆ ಪೋಷಕಗೆ