ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

any& ಈ ಎರಡನೇ ವರ್ಗದವನೇ ನಿಜವಾದ ದಾಸ್ಯವೃತ್ತಿಯವನು: ಇವ ನಲ್ಲಿ ಪೌರುಷವಿರುವದಿಲ್ಲ. ಕೇವಲ ಲಾಂಗೂಲಚಾಲನೆಯೇ ಇವನ ಉಚ್ಚತಮ ಧೈಯವಾಗಿರುವದು. ಈ ಎರಡನೇ ವರ್ಗದ ದಾಸ್ಯವನ್ನು ಮಹಾತ್ಮರಲ್ಲಿ ಇಲ್ಲವೆ ದೇವರಲ್ಲಿ ವಹಿಸಬೇಕಲ್ಲದೆ, ಮನುಷ್ಯರಲ್ಲಿ ವಹಿಸಲಾಗದು. ದೇವ ರಲ್ಲಿ ಯ, ಮಹಾತ್ಯರಲ್ಲಿಯ ವಹಿಸಿದ ದಾಸ್ಯವು ದಾಸನಿಗೆ ಉಚ್ಛ ಸ್ಥಿತಿಯ ಪ್ರಾಪ್ತಿಯನ್ನು ಮಾಡಿಕೊಡುತ್ತದೆ. ಮನುಷ್ಯರ ದಾಸ್ಯ ತ್ವವು ಆಧೋಗತಿಯನ್ನು ದೊರಕಿಸಿಕೊಡುತ್ತದೆ: - ಸ್ತ್ರೀಯರು ಜನ್ಮತಃ ಪರಾಧೀನರಾದ್ದರಿಂದ ಅವರು ಪುರುಷ ನಲ್ಲಿ ಅಂದರೆ ಗಂಡನಲ್ಲಿ ದೈವೀಭಾವನೆಯಿಂದ ನಡೆದು ಪುರುಷನ ಆಶ್ರಯದಿಂದ ಪುರುಷಾರ್ಥಗಳನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. “ನ ಸ್ತ್ರೀ ಸ್ವಾತಂತ್ರ್ಯ ರ್ಮಹತಿ (ಮನುಸ್ಮೃತಿ) ಮುಖ್ಯವಾಗಿ ಈಗಿನ ದಾಸ್ಯವರ್ಗದ ಕೆಲವರಲ್ಲಿರುವ ದೊಡ್ಡ ದೋಷವೆಂದರೆ ಯಜಮಾನನ ಪ್ರಸನ್ನತೆಯನ್ನು ಪಡಕೊಳ್ಳುವದ ಕಾಗಿ ಎಂಥ ನೀಚ ಕೆಲಸವನ್ನಾದರೂ ಮಾಡುವದು. ನೀಚ ಕೆಲಸ ವೆಂದರೆ (ಶಗಳೇಬಳಿಯುವ ಕೆಲಸವಲ್ಲ. ಕೇಳಲಿಕ್ಕೆ ಹೇಳಲಿಕ್ಕೆ ಅಸಹ್ಯವಾದವುಗಳು. ಎಷ್ಟೋ ಜನ ನರಾಧಮರು ತಮ್ಮ ವರಿಷ್ಠರ ತೃಪ್ತಿಗಾಗಿ ತಮ್ಮ ಸಹಧರ್ಮಿಣಿಯಾದ ಹೆಂಡತಿಯನ್ನು ಸಹ ಅರ್ಪಿಸು ವರಂತೆ! ಹಾ! ಹಾ! ಇದಕ್ಕೂ ಹೆಚ್ಚಿನ ನೀಚತನವನ್ನು ದಾಸ್ಯವರ್ಗದವರು ಇನ್ನೇನು ಮಾಡಬೇಕು? ಒಟ್ಟಿನಮೇಲೆ ಕಾಯಾವಾಚಾಮನಸ್ಸಿನಿಂದ ಒಬ್ಬರ ಆಳ ಆಗುವದು ಅತಿ ನಿಂದವಿರುವದರಿಂದ ತೇಜಸೀಪುರುಷನು ತನ್ನ ಕುಟುಂಬಪೋಷಣೆಗಾಗಿ ಮಂದಿಯ ಮೊರೆಯನ್ನು ನೋಡುತ್ತ ಕುಳಿತುಕೊಳ್ಳಬಾರದು. ಸದಾ ಉದ್ಯೋಗಿಯಾಗಿ ಅರ್ಥಾತ್ ಪ್ರಗತಿಪರನಾಗಿ ದೈನವಿಲ್ಲದೆ ಖಂಬೀರತನದಿಂದ ಕಾಲಕ್ಷೇಪಮಾಡು ವಷ್ಟು ಸಮರ್ಧನಾಗಬೇಕು. 'ಅನಾಯಾಸೇನಮರಣಂ ವಿನಾದ್ಯ ನೇನ ಜೀವನಂ” ಎಂಬಿವು ತೇಜಸ್ಸಿಗೆ ಲಭಿಸತಕ್ಕವಾಗಿವೆ.