ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

=ಆಳಿ ದಾಸ್ಯವಿಮೋಚನವು ವ್ಯಕ್ತಿಗೂ, ಸಮಾಜಕ್ಕೂ, ರಾಷ್ಟ್ರಕ್ಕೂ ಅತ್ಯವಶ್ಯವು, ಆದರೆ ಅದನ್ನು ಹಾಗೆ ಮಾಡಿಕೊಳ್ಳಬೇಕೆಂಬದನ್ನು ಮಾತ್ರ ಬಹು ಸ್ವಲ್ಪ ಜನರಹೊರತು ಉಳಿದವರಾರಿಗೂ ಗೊತ್ತಿಲ್ಲ: ಪ್ರಗತಿಹೊಂದುವವನು, ಅಂದರೆ ದಾಸ್ಯವಿಮೋಚನಮಾಡಿಕೊಳ್ಳುವ ವನುಮೇಲೆ ಹೇಳಿದ ಎಲ್ಲ ಗುಣಗಳನ್ನು ತನ್ನಲ್ಲಿ ಹೆಚ್ಚು ಹೆಚ್ಚಾಗಿ ಸಂಗ್ರಹಿಸಬೇಕು. ಆ ಗುಣಗಳು ಪರಿಪೂರ್ಣವಾದವಾದಂತೆ ಪ್ರಗತಿಯು ಆಗಿ, ದಾಸ್ಯವಿಮೋಚನೆಯಾಗುವದು; ಸಂಶಯವಿಲ್ಲ, ಉಪಸಂಹಾರ, ಪೂರ್ವಸಂಚಯದ ಪ್ರಗತಿ ಪ್ರವರ್ತಕನಿಗೆ ಪ್ರಗತಿಮಾರ್ಗಗಳನ್ನು ಬೇರೆಯವರು ತೋರಿಸುವ ಕಾರಣವಿಲ್ಲ; ಆದರೆ ಆ ಸಂಚಯವು ಸರ್ವರಿಗೂ ಇರುತ್ತದೆಯೆಂದು ಭಾವಿಸಿನಡೆಯುವದು ಮಾತ್ರ ಯೋಗ್ಯ ವಲ್ಲದ್ದರಿಂದ, ಪ್ರಗತಿಮಾರ್ಗಗಳನ್ನು ಕಂಡುಕೊಳ್ಳಿರೆಂದು ಸಾಮಾ ನ್ಯವಾಗಿ ಹೇಳುವದು ತಪ್ಪಾಗಲಾರದು. ಪ್ರಗತಿಮಾರ್ಗಗಳು ಮೇಲೆ ಬರೆದವವಿಷ್ಟೇ ಇವೆಯೆಂದು ನಿನ್ನ ರ್ಷವಾಗಿ ಹೇಳಲಾಗುವದಿಲ್ಲ. ಇವುಗಳಲ್ಲದೆ ಇನ್ನೂ ಅನೇಕ ಮಾರ್ಗಗಳಿಂದ ಪ್ರಗತಿಹೊಂದಬಹುದಾಗಿದೆ. ಆದರೆ ಅವೆಲ್ಲ ಮಾರ್ಗ ಗಳು ಈಗ ವಿವರಿಸಿರುವ ಸ್ವಾತಂತ್ರ್ಯಪ್ರೀತಿ, ದೃಢನಿಶ್ಚಯ, ರೂಢಿ ವಿನಾಶಕ, ಸಾಧನಾಭಾವ, ಪ್ರತಿಕೂಲತೆ, ಸಮಯಸಾಫಲ್ಯ, ಆಶ್ರಯ ರಜ್ಜು ಛೇದನ, ಸಂಕಲ್ಪಶಕ್ತಿ, ಸಾಮರ್ಧ್ಯಸಂಚಯ, ಉಪಹಾಸೋ ಶ್ರೀಜನ, ಆಸ್ಥೆಕಾಳಜಿ, ಪ್ರವಾಸ, ಪ್ರಸನ್ನತೆ, ದೈವೀಭಾವನೆ, ದಾಸ್ಯ ವಿಮೋಚನೆ ಮುಂತಾದ ಪ್ರಗತಿಪದಗಳಲ್ಲಿಯೇ ಹೆಚ್ಚು ಕಡಿಮೆ ಮಾನದಿಂದ ಅಡಕವಾಗಿರುತ್ತವೆ, ಹ್ಯಾಗೇಆಗಲಿ, ಯಾವದೇ ಮಾರ್ಗ ವನ್ನು ಹಿಡಿದೇಆಗಲಿ, ಮನುಷ್ಯನು ಪ್ರಗತಿಹೊಂದಲಿ • • ಇದು, ಇಲ್ಲಿ ಮಾರ್ಗಗಳ ಭೇದಗಳಿಗೆ ಮಹತ್ವವಿರದೆ, ಪ್ರಗತಿಗೆ ಮಹತ್ವವಿರುತ್ತದೆ. ಸ೦ಪೂರ್ಣ,