ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಳ ದೇಗುಲದ ಜಾತ್ರೆ...

ಬಾಲ್ಯದಲ್ಲಿ ಕಾಣುವ ಇಂಥ ವಿನ್ಯಾಸಗಳೇ ಮುಂದೆ ಬದುಕಲ್ಲೂ ಕ್ರಿಯಾಶೀಲತೆ, ಸೃಜನಶೀಲತೆಯನ್ನು ತುಂಬುವುದಲ್ಲವೇ? ಮಾಳದಲ್ಲಿ ಚಿತ್ಪಾವನರದ್ದೇ ಪರಶುರಾಮ ದೇವಾಲಯವಿದೆ. ಅಲ್ಲಿನ ವಾರ್ಷಿಕ ಜಾತ್ರೆಯೂ ಜೋಶಿಯವರನ್ನು ಪ್ರಭಾವಿಸಿದ ಒಂದು ಅಂಶ. ಆ ಕಾಡ ನಡುವಿನ ಪುಟ್ಟ ದೇಗುಲದಲ್ಲಿ ಕಾರ್ತೀಕ ಹುಣ್ಣಿಮೆಯಂದು ನಡೆಯುವ ಮಹಾ ಜಾತ್ರೆಯಲ್ಲಿ ಪುಟ್ಟ ಹುಡುಗನಾಗಿ ಪ್ರಭಾಕರ ಜೋಶಿ ಸಂಭ್ರಮಿಸಿದ್ದಾರೆ.

ಆ ಉತ್ಸವದಲ್ಲಿ ಸಂಗೀತ ಸೇವೆಯೂ ಒಂದು ಆಚರಣೆ, ದೇವರು ಮಂಟಪದಲ್ಲಿ ಕೂತ ಬಳಿಕ ಅಷ್ಟ ಸೇವೆಗಳು, ಅವುಗಳಲ್ಲಿ ಸುತ್ತು ತಾಳಮದ್ದಲೆಯೂ ಒಂದು. ತಾಳಮದ್ದಲೆ ಸಮೇತ ಅರ್ಥ ಹೇಳುತ್ತಾ ದೇವಾಲಯಕ್ಕೆ ಪ್ರದಕ್ಷಿಣೆ ಬರುವುದು. ಸ್ವಲ್ಪ ಮಟ್ಟಿಗೆ ಅಭಿನಯವೂ ಇರುತ್ತಿತ್ತು. ಬಾಲ್ಯದಲ್ಲಿ ಜೋಶಿಯವರೂ ಹೀಗೆ ಸುತ್ತಿನಲ್ಲಿ ಅರ್ಥ ಹೇಳಿದ್ದರಂತೆ.

ಮಾಳಕ್ಕೆ ಬರುತ್ತಿತ್ತು 'ಕೇಸರಿ'!

ಅಲ್ಲಿ ದೂರದ ಮಹಾರಾಷ್ಟ್ರದ ಪೂನಾದಲ್ಲಿ ಲೋಕಮಾನ್ಯ ಗಂಗಾಧರ ತಿಲಕರ ಸಾರಥ್ಯದಲ್ಲಿ ಪ್ರಕಟವಾಗುತ್ತಿತ್ತಲ್ಲ 'ಕೇಸರಿ' ಪತ್ರಿಕೆ ಅದು ನಮ್ಮ ಕರಾವಳಿಯ ಒಂದು ಮೂಲೆಯ ಹಳ್ಳಿ ಕಾರ್ಕಳದ ಕಾಡಂಚಿನ ಮಾಳದ ಪುಟ್ಟ ಮನೆಯವರೆಗೂ ಬರುತ್ತಿತ್ತು. ಪ್ರಭಾಕರ ಜೋಶಿಯವರ ಅಜ್ಜ ಹರಿಹರ ಜೋಶಿಯವರ ಕಾಲದಿಂದಲೇ ಆ ಮನೆಗೆ 'ಕೇಸರಿ'ಯನ್ನು ತರಿಸಲಾಗುತ್ತಿತ್ತು. ತಂದೆ ನಾರಾಯಣ ಜೋಶಿಯವರಂತೂ 'ಕೇಸರಿ'ಯನ್ನು ತಪ್ಪದೆ ಓದುತ್ತಿದ್ದರು. ವಾರದಲ್ಲಿ ಮೂರು ಸಂಚಿಕೆಗಳಲ್ಲಿ ಪ್ರಕಟವಾಗುತ್ತಿದ್ದ 'ಕೇಸರಿ' ಮಾಳ ತಲುಪುವಾಗ ಎರಡು ಮೂರು ದಿನ ಕಳೆಯುತ್ತಿತ್ತು. ನಾರಾಯಣ ಜೋಶಿಯವರು ಮನೆಗೆ ಬಂದವರೆದುರು ಆ ಪತ್ರಿಕೆಯ ಸುದ್ದಿಯನ್ನು ಓದಿ ಹೇಳುತ್ತಿದ್ದರು. ಆ ಪತ್ರಿಕೆಯ ವರ್ಷದ ಚಂದಾವೇ ಸುಮಾರು ೨೦೦ ರೂ. ಅಂದರೆ ಅರ್ಧ ಖಂಡಿ ಅಡಿಕೆಯ ಮೌಲ್ಯ. ಆದರೂ ಪತ್ರಿಕೆಯನ್ನು ನಿರಂತರ ತರಿಸುತ್ತಿದ್ದರು ಎನ್ನುವುದು ಆ ಕುಟುಂಬದ ವಿದ್ಯಾವ್ಯಾಮೋಹವನ್ನು ಎದ್ದು ತೋರಿಸುತ್ತದೆ.

ಪ್ರಭಾಕರ ಜೋಶಿ ನಾಲ್ಕರ ಹರೆಯದವರಿದ್ದಾಗಲೇ ತಂದೆ ನಾರಾಯಣ ಜೋಶಿ ಮಗನಿಗೆ ಮರಾಠಿ ಅಕ್ಷರ ಕಲಿಸಿದರು. ಮಹಾರಾಷ್ಟ್ರದಲ್ಲಿ ನಮ್ಮ ಕೋಟ ಶಿವರಾಮ ಕಾರಂತರಂಥ ಪ್ರಸಿದ್ಧ ಸಾಹಿತಿ ಆಚಾರ್ಯ ಅತ್ರೆಯವರ ಪುಸ್ತಕಗಳನ್ನು ತರಿಸಿ ಪಾಠ ಹೇಳಿ ಕೊಟ್ಟಿದ್ದರಂತೆ.

ಪ್ರಭಾಕರ ಜೋಶಿಯವರು ಕೇಸರಿಯನ್ನೂ ಓದುತ್ತಿದ್ದರು. ಆ ಹಳೆಯ ಸಂಚಿಕೆಗಳೆಲ್ಲವನ್ನೂ ಈಗಲೂ ಅವರು ಜೋಪಾನವಾಗಿರಿಸಿದ್ದಾರೆ.

ಹತ್ತರ ಹರೆಯದಲ್ಲೇ ಅರ್ಥ ಹೇಳಿದ್ದರು!

ಸಾಧಕರ ಹೆಜ್ಜೆಗುರುತು ಪಡಿಮೂಡುವುದೇ ಹೀಗೆ. ವಿಶೇಷವೆಂದರೆ ಜೋಶಿಯವರು ತಮ್ಮ ನಾಲ್ಕನೇ ತರಗತಿಯಲ್ಲಿ, ಹತ್ತರ ಹರೆಯದ ಹುಡುಗನಾಗಿದ್ದಾಗಲೇ ಮಾಳದಲ್ಲೇಡಾ.ಎಂ.ಪ್ರಭಾಕರ ಜೋಶಿ / ೬