ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ದೊಡ್ಡ ಕೂಟದಲ್ಲಿ ಅರ್ಥ ಹೇಳಿದ್ದರು! ಸ್ವಂತ ಅಣ್ಣ ಶಂಕರ ಜೋಶಿಯೇ ಪ್ರಭಾಕರ ಜೋಶಿಯವರನ್ನು ಅರ್ಥಕ್ಕೆ ಕೂರಿಸಿದ್ದು,

ಮಾಳದ ಮಲ್ಲಾರು ಎಂಬಲ್ಲಿದ್ದ ಗುರುಕುಲ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ವ್ಯಾಸಂಗ, ಅದು ಕೃಷ್ಣ ಜೋಶಿ ಎಂಬವರು ನಡೆಸುತ್ತಿದ್ದ ಶಾಲೆ. ೧೯೫೦ರಲ್ಲಿ ಸ್ಥಾಪನೆಯಾಗಿದ್ದ ಆ ಶಾಲೆಯಲ್ಲಿ ಜೋಶಿಯವರದ್ದು ನಾಲ್ಕನೇ ತಂಡ. ಮಾಳದ ಶಾಲೆಯಲ್ಲಿದ್ದಾಗ ಜೋಶಿಯವರನ್ನು ಪ್ರಭಾವಿಸಿದ ಶಿಕ್ಷಕರು ಬಿ.ಮೂರ್ತಿ ಗೋರೆ ಮತ್ತು ಸದಾಶಿವ ಮಾಸ್ಟ್ರು. ಬಿ. ಮೂರ್ತಿ ಗೋರೆ, ಶಿಸ್ತಿನ ಸಿಪಾಯಿ, ಸದಾಶಿವ ಮಾಸ್ಟ್ರು ಬಾಲ್ಯದಲ್ಲಿ ಜೋಶಿಯವರನ್ನು ನಾಟಕದಲ್ಲಿ ಭಾಗವಹಿಸುವಂತೆ ಎಳವೆಯಲ್ಲೇ ಹುರಿದುಂಬಿಸಿದವರು.ಹಾಗೆ ಶಾಲಾ ಹಂತದಲ್ಲೇ ಜೋಶಿಯವರು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರು.

ಸೂರ್ನೊಳಿಯಂತೆ ಕಾರ್ಕಳದ ನೆನಪು...

ಜೋಶಿಯವರು ಹಲವು ಕಡೆಗಳಲ್ಲಿ ಶಿಕ್ಷಣ ಪಡೆದರು. ಹೈಸ್ಕೂಲ್‌ನ ಮೊದಲ ವರ್ಷ ಅವರು ಪೂರೈಸಿದ್ದು ಉಜಿರೆಯ ಡಿಕೆವಿ ಹೈಸ್ಕೂಲ್‌ನಲ್ಲಿ ಬಳಿಕ ಕಾರ್ಕಳದ ಬೋರ್ಡ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ. ಪೂರೈಸಿ ಎಸ್.ಬಿ.ಕಾಲೇಜು ಸೇರಿದರು. ಪಿಯುಸಿಯಲ್ಲಿ ವಾಣಿಜ್ಯ ವಿಷಯ ಆರಿಸಿಕೊಂಡಿದ್ದರು. ಕಾಲೇಜು ಶಿಕ್ಷಣದ ಬಳಿಕ ಎರಡು ವರ್ಷ ಕಲಿತ ಕಾಲೇಜಿನಲ್ಲೇ ಶಿಕ್ಷಕರಾಗಿ ದುಡಿದರು. ೧೯೫೭ರಿಂದ ೧೯೬೯ರವರೆಗೆ ಜೋಶಿ ಕಾರ್ಕಳದ ನಿಕಟ ಸಂಪರ್ಕದಲ್ಲಿದ್ದರು. ಆಗಲೇ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದ ಕಾರ್ಕಳ ಪರಿಸರ ಜೋಶಿಯವರನ್ನು ಇನ್ನಷ್ಟು ಬೆಳೆಸಿತು. ಆಗಲೇ ಸಕ್ರಿಯರಾಗಿದ್ದ ಪ್ರೊ.ಎಂ. ರಾಮಚಂದ್ರ ಅವರು ಜೋಶಿಯವರಲ್ಲಿ ಸಾಹಿತ್ಯಿಕ ಆಸಕ್ತಿ ತುಂಬಿದರು, ಪ್ರೋತ್ಸಾಹವಿತ್ತರು. ಬೋರ್ಡ್ ಹೈಸ್ಕೂಲು, ಅನಂತಶಯನ, ವೆಂಕಟ್ರಮಣ ದೇವಸ್ಥಾನ, ಸ್ವರಾಜ್ ಮೈದಾನ, ರಾಮಸಮುದ್ರವೆಂಬ ವಿಶಾಲ ಕೆರೆ, ಗೊಮ್ಮಟಬೆಟ್ಟ, ತಾಳಮದ್ದಲೆಗಳು ನಡೆಯುತ್ತಿದ್ದ ಫಿಲ್ಮ್ ಟಾಕೀಸು, ಅತಿ ವಿಶಿಷ್ಟ ತಿಂಡಿಗಳು ಸಿಗುತ್ತಿದ್ದ ಕಾರ್ಕಳದ ಹೊಟೇಲುಗಳು... ಹೀಗೆ ಜೋಶಿಯವರಲ್ಲಿ ಹತ್ತು ಹಲವು ಆಸಕ್ತಿಗಳು ಪಡಿಮೂಡಲು ಕಾರ್ಕಳದ ಪ್ರಭಾವ ಸಾಕಷ್ಟು ಸ್ವರಾಜ್ ಮೈದಾನದಲ್ಲಿ ಅವರು ಗೆಳೆಯರ ಜೊತೆ ಕ್ರಿಕೆಟ್ ಆಡುತ್ತಿದ್ದರು. ಇಂದು ಜೋಶಿಯವರು ಯಾವುದೇ ಪ್ರಮುಖ ಪತ್ರಿಕೆಯ ಕ್ರೀಡಾ ವರದಿಗಾರನಿಗಿಂತ ನಿಖರವಾಗಿ ಕ್ರಿಕೆಟ್ ಸಂಬಂಧಿ ಸಂಗತಿಗಳನ್ನು ಹೇಳಬಲ್ಲರು ಜೋಶಿ, ರಾಮಸಮುದ್ರ ಕೆರೆಯಲ್ಲಿ ಈಜಲು ಹೋಗುತ್ತಿದ್ದರು. ಕಾರ್ಕಳದ ಅತಿ ಇಷ್ಟದ ಜಾಗಗಳಲ್ಲಿ ಅದೂ ಒಂದು. ಅನಂತಶಯನದ ಯಕ್ಷಗಾನ ಸಂಘದಲ್ಲಿ ಅರ್ಥದಾರಿಯಾಗಿ ಪಾಲುಪಡೆಯುತ್ತಿದ್ದರು. ಸಂಘದ ತಾಳ ಮದ್ದಲೆಗಳನ್ನು ಕೇಳುತ್ತಲೇ ತಾನೂ ಅರ್ಥ ಹೇಳುತ್ತಲೇ ಬೆಳೆದವರು ಅವರು. ವೆಂಕಟ್ರಮಣ ದೇವಸ್ಥಾನದ ಯಕ್ಷಗಾನ ಸಂಘದ ತಾಳಮದ್ದಲೆ ಆಲಿಸಲೂ ಜೋಶಿ ತೆರಳುತ್ತಿದ್ದರು ಮತ್ತು ಅರ್ಥದಾರಿಯಾಗಿಯೂ ಭಾಗವಹಿಸುತ್ತಿದ್ದರು. ಕಾರ್ಕಳದ ಇವೆರಡು ಯಕ್ಷಗಾನ ಸಂಘಗಳು ಜೋಶಿಯವರೊಳಗಿನ ಅರ್ಥದಾರಿಯನ್ನು ರೂಪಿಸಲು ಪ್ರಮುಖ ಕಾರಣ.

ಜೋಶಿಯವರ ಪಾಲಿಗೆ ಕಾರ್ಕಳದ ನೆನಪು ಅಲ್ಲಿನ ಹೊಟೇಲುಗಳ ಸೂರ್ನೊಳಿ

ಡಾ.ಎಂ. ಪ್ರಭಾಕರ ಜೋಶಿ /೭