ಸಂಬಂಧಿಕ ಎಂಬ ನೆಲೆಯಲ್ಲಿ ಜೋಶಿಯವರಿಗೆ ಅಲ್ಲೊಂದು ಪಾತ್ರ ಕೊಟ್ಟಿದ್ದರು. ಆ
ಕಾಲಘಟ್ಟದಲ್ಲಿ ಸಣ್ಣ ಸಣ್ಣ ಊರುಗಳಲ್ಲಿ ನಡೆಯುವ ತಾಳಮದ್ದಲೆಗಳಲ್ಲಿ ಊರ ಕಲಾವಿದರ
ಜೊತೆಗೆ ಹೊರಗಿನ ಪ್ರಸಿದ್ಧರನ್ನೂ ಕೂಡಿಸಿ ಪಾತ್ರ ಸಂಯೋಜಿಸುತ್ತಿದ್ದರು. ಕಲೆಯ ಏಳೆ
ದೃಷ್ಟಿಯಿಂದ ಇಂಥದ್ದು ಆಗಬೇಕು. ಆದರೆ ಈಗ ಹಾಗಾಗುತ್ತಿಲ್ಲ ಎನ್ನುವುದೂ ಜೋಶಿಯವರ
ಕೊರಗು.
ಅಂದು ಪಾರ್ಥ ಸಾರಥ್ಯ-ಭಗವದ್ಗೀತೆ ಪ್ರಸಂಗ, ದೇರಾಜೆ ಸೀತಾರಾಮಯ್ಯನವರದ್ದು
ಪಾರ್ಥ ಸಾರಥ್ಯದ ಕೃಷ್ಣ ಕಾಲೇಜು ಹುಡುಗ ಜೋಶಿಯವರದ್ದು ಕೌರವ! ಹಾಗೆ ಮುಂಡಾಜೆ
ಮನೆಯ ಚಾವಡಿಯಲ್ಲಿ 'ಕುರುಕ್ಷೇತ್ರ' ಅನಾವರಣಗೊಂಡಿತ್ತು. ಹುಡುಗನಾದರೂ ಜೋಶಿ
ವಯಸ್ಸಿಗೆ ಮೀರಿದ ಮಾತಿನ ಪ್ರಬುದ್ಧತೆಯನ್ನು ತೋರಿದ್ದರು! ೩೦ ವರ್ಷ ವಯೋ
ಅಂತರವಿದ್ದರೂ ದೇರಾಜೆಯವರು ಜೋಶಿಯವರ ಕೌರವ ಎದ್ದು ಕಾಣುವಂತೆ ಅರ್ಥ
ಹೇಳಿದ್ದರಂತೆ. ಜೋಶಿಯವರ ಪ್ರಕಾರ ಅದು ತಮ್ಮ ಜೀವಮಾನದಲ್ಲಿ ಹೇಳಿದ ಒಟ್ಟು
ಅರ್ಥಗಳಲ್ಲಿ ಯಶಸ್ವೀ ಅರ್ಥವಂತೆ.
ಇದೇ ವರ್ಷ ಮುಲ್ಕಿಯಲ್ಲೂ ಮೇರು ಕಲಾವಿದರ ಜೊತೆಗೆ ಜೋಶಿ ಅರ್ಥ ಹೇಳಿದ್ದರು.
ವಿಜಯಾ ಕಾಲೇಜಿನಲ್ಲಿ ನಡೆದ ಕೂಟ. ಶೇಣಿ ಗೋಪಾಲಕೃಷ್ಣ ಭಟ್ಟರು, ದೊಡ್ಡ ಸಾಮಗರು,
ಪೆರ್ಲ ಕೃಷ್ಣ ಪಂಡಿತರು, ಮಂದಾರ ಕೇಶವ ಭಟ್ಟರು, ವೆಂಕಟ್ರಾಯ ಐತಾಳರು, ಕೆಮ್ಮಣ್ಣು
ನಾರಣಪ್ಪಯ್ಯ.. ಅಂದು ಇವೆಲ್ಲ ಮೇರು ವ್ಯಕ್ತಿತ್ವಗಳೊಂದಿಗೆ ವಿಧೇಯ ವಿದ್ಯಾರ್ಥಿಯಂತೆ
ಅರ್ಥ ಹೇಳಿದ್ದ ಜೋಶಿ ಮುಂದೊಂದು ದಿನ ಅವರೆಲ್ಲರ ಕುರಿತು ಪ್ರತ್ಯಪ್ರತ್ಯೇಕ ಅಧ್ಯಯನ
ವನ್ನೇ ನಡೆಸಿದ್ದರು! ಶೇಣಿಯವರ ಅಭಿನಂದನೆಗೊಂದು ರೂಪು ಕೊಟ್ಟರು. ಪೆರ್ಲ
ಪಂಡಿತರ ಕುರಿತು ಪುಸ್ತಕ ಬರೆದರು. ವೆಂಕಟ್ರಾಯ ಐತಾಳರ ಬಗೆಗೆ 'ರಂಗ ವೆಂಕಟ'ವೆಂಬ
ಕೃತಿ ಸಂಪಾದಿಸಿ ದರು. ಮಂದಾರ ಕೇಶವ ಭಟ್ಟರ ಜೊತೆಗೆ ಮಹತ್ವದ ಸಂಘಟನೆಗಳಲ್ಲಿ
ಭಾಗಿಯಾದರು.
ಬಿಕಾಂ ಬಳಿಕ ಒಂದಷ್ಟು ಸಮಯ ಜೋಶಿಯವರು ತಮ್ಮ ಅಣ್ಣನ ಜಿನಸಿ ಅಂಗಡಿಯಲ್ಲಿದ್ದರು. ಬಳಿಕ ತಾವು ಕಲಿತ ಕಾರ್ಕಳ ಬೋರ್ಡ್ ಹೈಸ್ಕೂಲಿನಲ್ಲಿಯೇ ತಾತ್ಕಾಲಿಕ ಶಿಕ್ಷಕನಾಗಿ ಎರಡು ವರ್ಷ ದುಡಿದರು. ಆಗ ಕಾರ್ಕಳದ ಕುತ್ಯಾರು ಅರಸರ ಕಟ್ಟಡದಲ್ಲಿ ಬಾಡಿಗೆ ಕೊಠಡಿಯಲ್ಲಿದ್ದರು. ಮತ್ತೆ ಅನಂತಶಯನ, ವೆಂಕಟರಮಣ ದೇವಸ್ಥಾನ, ಅಲ್ಲಿನ ಕೂಟಗಳು, ಭಾಷಣಗಳು.. ೧೯೬೯ರಲ್ಲೇ ಪ್ರಬುದ್ಧ ಭಾಷಣಕಾರನಾಗಿ ಪ್ರಕಟಗೊಳ್ಳುವಂಥ ಸಂದರ್ಭ ಒದಗಿಬಂದಿತು. ಅದು ಕಾರ್ಕಳ ಗೊಮ್ಮಟ ಬೆಟ್ಟದಲ್ಲಿ ಪ್ರತಿವರ್ಷ ನಡೆಯುವ ಬೆಟ್ಟ ತೇರು ಉತ್ಸವ. ಅಲ್ಲಿ ಉತ್ಸವದ ಜೊತೆ ವಿಚಾರಗೋಷ್ಠಿಯನ್ನೂ ಏರ್ಪಡಿಸುತ್ತಿದ್ದರು. ಆ ವರ್ಷ ಜೈನ ಶಾಸ್ತ್ರದಲ್ಲಿ ವಿಶೇಷ ಅಧ್ಯಯನ ನಡೆಸಿದ್ದ ಪಂಡಿತ್ ದೇವಕುಮಾರ್ ಜೈನ್ ಅವರ ಜೊತೆ ಯುವಕ ಜೋಶಿಯವರಿಗೂ ವಿಚಾರ ಮಂಡಿಸುವ ಅವಕಾಶ, ರತ್ನಾಕರವರ್ಣಿಯ ಭರತೇಶ ವೈಭವದಲ್ಲೂ, ಪಂಪನ ಆದಿ ಪುರಾಣದಲ್ಲೂ ಬರುವ ಭರತ-ಬಾಹುಬಲಿಯರ