ದಶಾವತಾರ.. ನಿನಗೆ ಹೇಳಿಸಿದ್ದಲ್ಲ...) ಎಂದಿದ್ದರು.
ಹಾಗೆ ಬೇರೆ ಬೇರೆ ಕಾರಣಗಳಿಂದ ಜೋಶಿಯವರು ಮೇಳ ಸೇರುವುದು ತಪ್ಪಿತು.ಬದುಕಿನ ಗತಿ ಬದಲಾಯಿತು.
ವರದರಾಯ ಪೈಗಳದ್ದು ಮಾತು ಕಡಿಮೆ. ಆದರೆ ಆಡಿದಷ್ಟೂ ಮಾತುಗಳೂ ಪ್ರಭಾವಶಾಲಿ, ಅರ್ಥಪೂರ್ಣ. ಹೀಗೆ ಬಿಕಾಂ ವಿದ್ಯಾರ್ಥಿಯಾಗಿದ್ದಾಗಲೊಮ್ಮೆ ಪೈಗಳಿಂದ ಕೇಳಿದ್ದ ಇದೇ ... ದಶಾವತಾರ್' ಮಾತನ್ನು ಮತ್ತೊಮ್ಮೆ ಭರ್ತಿ ೨೫ ವರ್ಷಗಳ ನಂತರ ಜೋಶಿಯವರು ಅದೇ ಪೈಗಳ ಬಾಯಲ್ಲಿ ಕೇಳುವಂತಾಯಿತು!
ಆಗ ಜೋಶಿ ಉಪನ್ಯಾಸಕರಾಗಿ, ವಿಮರ್ಶಕರಾಗಿ, ಸಂಶೋಧಕನಾಗಿ ಪ್ರಸಿದ್ಧ ರಾಗಿದ್ದರು. ಬೇರೊಂದು ಮೇಳದಿಂದ ಕೈಬಿಟ್ಟಿದ್ದ ಕಲಾವಿದನೊಬ್ಬ, ತಾನು ಸಂಕಷ್ಟದಲ್ಲಿದ್ದೇನೆ ಎಂದು ಜೋಶಿಯವರ ಬಳಿ ಬಂದು, ತನ್ನನ್ನು ಸೇರಿಸಿಕೊಳ್ಳುವಂತೆ ಸುರತ್ಕಲ್ ಮೇಳದ ಯಜಮಾನ ವರದರಾಯ ಪೈಗಳಲ್ಲಿ ಒಂದು ಮಾತು ಹೇಳಬೇಕೆಂದು ವಿನಂತಿಸಿ ಕೊಂಡ.
ಹಾಗೆ ಜೋಶಿಯವರು ಪೈಗಳ ಬಳಿ ಮಾತಾಡಿ, ಸುರತ್ಕಲ್ ಮೇಳಕ್ಕೆ ಸೇರುವಂತೆ ಮಾಡಿದ್ದರು.ಆ ಕಲಾವಿದ ಪೈಗಳಲ್ಲಿ ಮಾತಾಡಿ ಅಡ್ವಾನ್ಸ್ ಪಡೆದುಕೊಂಡೂ ಹೋಗಿದ್ದ. ಆದರೆ ಆತ ಮತ್ತೆ ಮೇಳಕ್ಕೆ ಬರಲೇ ಇಲ್ಲ. ಎಲ್ಲೋ ಜೋಶಿ ಸಿಕ್ಕಾಗ ಈ ಸಂಗತಿ ತಿಳಿಸಿದ ಪೈಗಳು ಮತ್ತದೇ ಮಾತು ಹೇಳಿದ್ದರು. 'ಏ ದೂರ ದಶಾವತಾರ ತುಕ್ಕ ನಕ್ಕ...
ಎಂಕಾಂ ವ್ಯಾಸಂಗ ಮುಗಿದ ತಕ್ಷಣವೇ ಪ್ರಭಾಕರ ಜೋಶಿ, ಸುರತ್ಕಲ್ ಗೋವಿಂದದಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು.ಪ್ರೊ.ಸೀ.ಹೊಸಬೆಟ್ಟು ರಾಮಕೃಷ್ಣ ರಾವ್, ಶಂಕರನಾರಾಯಣ ಭಟ್, ರತ್ನಾಕರ ರಾಯರು, ಪಿ.ಕೆ. ಮೊಯಿಲಿ, ಸಮಾಜವಾದಿ ಶೇಖ
ಇಡ್ಯಾ ಮೊದಲಾದವರು ಸಹೋದ್ಯೋಗಿಗಳು, ರಾಷ್ಟ್ರೀಯ ಹೆದ್ದಾರಿಗೆ ಸನಿಹವಿದ್ದದ್ದೂ ಸಾಕಷ್ಟು ತಿರುಗಾಟಕ್ಕೆ ಸಹಕಾರಿಯಾಯಿತು. ಸುರತ್ಕಲ್‌ನಲ್ಲಿ ಪೈಗಳ ಮೇಳದ ನವರಾತ್ರಿ ಸೇವೆ ಆಟಗಳಲ್ಲಿ ವೇಷ ಹಾಕಿದರು. 'ದುರ್ಗಾ ಭವನ' ಸುಬ್ರಾಯರು, ರಮ್ಯೂಷಾ ರಮಾನಾಥ ರಾಯರು, ವೆಂಕಟ್ರಾಯರಂಥ ಅಪೂರ್ವ ವ್ಯಕ್ತಿತ್ವಗಳ ಸಂಪರ್ಕ ಸಿಕ್ಕಿತು. ಆಗುಂಬೆ,ಭಟ್ಕಳ,ಕಾಸರಗೋಡಿನಂಥ ದೂರ ಪ್ರದೇಶಗಳಿಗೂ ಕಾರು ಮಾಡಿಕೊಂಡು ಆಟ ನೋಡಲುಹೋಗುತ್ತಿದ್ದ ಸುಬ್ರಾಯರ ಜೊತೆ ಜೋಶಿಯವರೂ ತೆರಳುತ್ತಿದ್ದರು. ಕಟೀಲು, ಮಂಗಳೂರು,ಕಾಟಿಪಳ್ಳಗಳಿಗೆಲ್ಲ ತಾಳಮದ್ದಲೆಗಳ ಅರ್ಥಗಾರಿಕೆಗೆ ಹೋಗುತ್ತಿದ್ದರು ಜೋಶಿ.
ಉಪನ್ಯಾಸಕರಾಗಿ ತಾಳಮದ್ದಲೆ, ಆಟ ಎಂದೆಲ್ಲ ತಿರುಗುವುದು ಕಾಲೇಜಿನ ಆಡಳಿತ ಮಂಡಳಿಗೆ ಹಿಡಿಸಲಿಲ್ಲ. ಆಡಳಿತ ಮಂಡಳಿಯ ಒಬ್ಬರಂತೂ 'ಯು ಮಿಕ್ಸ್‌ಡ್ ವಿತ್ ಆರ್ಡಿನರಿ ಪೀಪಲ್' ಎಂದು ಬಿಟ್ಟರು. ಈ ಭಿನ್ನಾಭಿಪ್ರಾಯವೇ ಗೋವಿಂದ ದಾಸ್ ಕಾಲೇಜನ್ನು ತೊರೆಯುವಂತೆ ಮಾಡಿತು. ಆದರೂ ಆ ಕಾಲೇಜು ಜೊತೆಗಿನ ಸಂಪರ್ಕವನ್ನು ಜೋಶಿ ಮುಂದೆಯೂ ಇರಿಸಿಕೊಂಡರು. ಸದ್ಯ ಇಂಡಿಯನ್ ಬ್ಯಾಂಕ್‌ನ ಅಧ್ಯಕ್ಷರಾಗಿರುವ ನರೇಂದ್ರ ಇಲ್ಲಿ ಜೋಶಿಯವರ ವಿದ್ಯಾರ್ಥಿಯಾಗಿದ್ದವರು!