ಅನ್ಯರನ್ನು ತುಳಿದರೆಂಬ ಅರ್ಥ ಬರುವಂತೆ ಬಹಳ ಜನ ಬರೆದಿದ್ದಾರೆ. ಮೇಲ್ನೋಟಕ್ಕೆ
ಹಿಡಿಸುವ, ಚಳವಳಿಗಳಿಗೆ ಅಗತ್ಯವಾದ ವಾದವಿದು. ಆದರೆ ಕ್ಷಣಿಕ ರಂಜಕ ಮತ್ತು ಅನರ್ಥಕವೇ ಸರಿ. ವೈದಿಕ (ಬ್ರಾಹ್ಮಣ?)ರನ್ನು ಹಳಿಯುವುದು, ಅವರ ವಿರುದ್ಧ ದ್ವೇಷ ಕಾರುವುದು,
ದೇಶದ ಎಲ್ಲ ಸಮಸ್ಯೆಗಳಿಗೆ ಅವರು ಕಾರಣರೆಂಬಂತೆ ಬರೆಯುವುದು, ಒಂದು ವರ್ಗದ ವಿದ್ವಾಂಸರ ನಿತ್ಯಾಭ್ಯಾಸ. ಆದರೆ ಧಾರ್ಮಿಕ ವಿನ್ಯಾಸ, ತಾರತಮ್ಯ, ಶೋಷಣೆ, ವೈದಿಕತೆ
ಇವೆಲ್ಲ ಅಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ವೈದಿಕ ನಿಂದೆ ಸುಲಭ, ಸುಭದ್ರ ಅಷ್ಟೇ!
ಬಲಿಯೂ ವೈದಿಕನೇ. ವಾಮನನಿಗೆ ದಾನ ಕೊಡಬೇಡ ಎಂದು ಸಾರಿ ಸಾರಿ ಹೇಳಿದ ಶುಕ್ರಾಚಾರ್ಯನೂ ಬ್ರಾಹ್ಮಣನೇ. ವಾಮನನ ಮೂಲ ರೂಪ-ವಿಷ್ಣು. ಲಕ್ಷ್ಮೀಪತಿ,ಭೂಪತಿಯಾಗಿ ಕ್ಷತ್ರಿಯ ಲಕ್ಷಣಗಳ ದೇವರು. ಬ್ರಹ್ಮನಲ್ಲಿ ಬ್ರಾಹ್ಮಣರೂಪ, ಶಿವನಲ್ಲಿ ಸರ್ವ
ವರ್ಣಾರೂಪ ಕಾಣುತ್ತದೆ. ಬಲಿ ವಾಮನ ಶುಕ್ರ ಕಥೆಯು ಭಕ್ತಿ ವೇದಾಂತ ಎಲ್ಲ
ಮಾಂಸಾರ್ದಶನೆಗಳ, ಸುರಾಸುರ ಸಂಬಂಧಗಳ ಕಥೆ. ಉಳ್ಳವರ-ಇಲ್ಲದವರ,
ಬ್ರಾಹ್ಮಣರಿಂದಾಗುವ ಶೋಷಣೆಯ ಕಥೆ ಅಲ್ಲ. ಹತ್ತು ಅವತಾರಗಳನ್ನು ತೆಗೆದುಕೊಂಡರೆ ಪರಶುರಾಮ, ರಾಮ ಇಬ್ಬರೇ ಬ್ರಾಹ್ಮಣರು. ಉಳಿದವರು (ಮತ್ಯ, ಕೂರ್ಮ, ವರಾಹ,
ನೃಸಿಂಹ, ಕೃಷ್ಣ, ಬುದ್ಧ) ವಿವಿಧ ಮೂಲದವರು.
ಯಾರನ್ನು ಯಾರು ಶೋಷಣೆ ಮಾಡಿದ್ದು ಯಾವಾಗ ಎಂಬುದೂ ಮುಖ್ಯ.
'ಶೋಷಣೆ', 'ತುಳಿತ'ಗಳ ಕಥೆ ಸಂಕೀರ್ಣ. ಪ್ರಬಲರ ತುಳಿತಗಳಾದಾಗ, ಬ್ರಾಹ್ಮಣರು ರಕ್ಷಣೆ ನೀಡಿದ್ದರೇನು? ಬ್ರಾಹ್ಮಣರೇ ವಿವಿಧ ಶೋಷಣೆಗಳಿಗೆ ಒಳಗಾದುದುಂಟು. 'ಶೋಷಿತರು', 'ಇಲ್ಲದವರು'ತುಳಿತಕ್ಕೊಳಗಾದವರೆಂಬ ಜಾತಿಗಳು- ಅವರಿಂದ 'ಕೆಳಗೆ'
ಇದ್ದವರನ್ನು ನಡೆಸಿಕೊಂಡ ಕಥೆಗಳು ಪರಿಶೀಲನಾರ್ಹ.ಸ್ಪಷ್ಟವಾಗಿ ವಿಚಾರಪರರು
ಪರಾಂಬರಿಸಬೇಕು. ದ್ವೇಷ ಉರಿಗೊಳಿಸುವುದು ಬೇರೆ, ವಿಮರ್ಶೆ ಬೇರೆ.
ಹೌದು ನನಗೆ ಗೊತ್ತಿದೆ. ಈ ನನ್ನ ಬರಹವನ್ನು ಬಹಳ ಸುಲಭವಾಗಿ ಬ್ರಾಹ್ಮಣ್ಯ ಹುನ್ನಾರ ಎಂದು ದಮನಿಸಬಹುದು. ರೆಡಿಮೇಡ್ ಸೈದ್ಧಾಂತಿಕ ವಿಶ್ಲೇಷಣೆ ಸತ್ಯ ಸೂಕ್ಷ್ಮಗಳನ್ನು
ಗುಡಿಸಿಹಾಕುತ್ತದೆ.
ಕ್ಲೀಷೆ, ಹಳಸಲು ಪದಪ್ರಯೋಗವನ್ನು ಪದೇಪದೇ ವಿಡಂಬಿಸುತ್ತ,ವಿರೋಧಿಸುತ್ತ
ಬಂದಿದ್ದಾರೆ ಜೋಶಿ.ಯಕ್ಷಗಾನ ಭೀಷ್ಮ, ಯಕ್ಷ ಬ್ರಹ್ಮ, ಯಕ್ಷ ಧ್ರುವತಾರೆ ಮೊದಲಾದ ಸವಕಲು ಬಿರುದು ಪ್ರದಾನಗಳ ಬಗೆಗೂ ಅವರೊಳಗೆ ತೀವ್ರ ಅಸಹನೆಯಿದೆ. ಈವರೆಗೆ
ನೂರಿನ್ನೂರು ಕಲಾವಿದರ ಬಗೆಗೆ ನಾನಾ ಪತ್ರಿಕೆಗಳಲ್ಲಿ ಲೇಖನ ಬರೆದ, ನೂರಾರು
ಅಭಿನಂದನಾ ಭಾಷಣ ಮಾಡಿರುವ ಜೋಶಿಯವರ ಈ ಅಸಹನೆಯನ್ನು ಸೈದ್ಧಾಂತಿಕವಾಗಿ ನೋಡಬೇಕಿದೆ. ತನಗೇ ಯಾರಾದರೂ ಒಂದು ಬಿರುದು ಕೊಡುವುದಾದರೆ 'ಯಕ್ಷ
ದುಶ್ಯಾಸನ' ಎಂಬ ಬಿರುದು ಕೊಡಲಿ ಎಂದು ತಮಾಷೆಯಾಗಿಯೂ ಪ್ರತಿಕ್ರಿಯಿಸುತ್ತಾರೆ.
ಹೊರ ಜಗತ್ತಿನ ಎಲ್ಲ ವಿದ್ಯಮಾನಗಳಿಗೂ ತಕ್ಷಣ ಸ್ಪಂದಿಸುವುದು ಜೋಶಿಯವರ ಗುಣ.ಪತ್ರಿಕೆಗಳಲ್ಲಿ ಯಕ್ಷಗಾನದ ಕುರಿತು ಏನೇ ಪ್ರಬುದ್ಧ ಚರ್ಚೆ ನಡೆದರೂ ಅಲ್ಲಿ
ಜೋಶಿಯವರದ್ದೊಂದು ಸ್ಪುಟವಾದ ನಿಶಿತ ಚಿಂತನೆಯ ಪ್ರತಿಕ್ರಿಯೆ ಬಂದೇ ಬರುತ್ತದೆ.
ಡಾ.ಎಂ.ಪ್ರಭಾಕರ ಜೋಶಿ /೨೦