ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇನ್ನು ಕೆಲವೊಮ್ಮೆ ಅಪೂರ್ವ ಘಟನೆಗಳಿಗೆ ಪ್ರತಿಕ್ರಿಯೆಯೋ ಎಂಬಂತೆ ಪತ್ರಿಕೆಗಳ ವಾಚಕರವಿಭಾಗಕ್ಕೆ ಪುಟ್ಟ ಪುಟ್ಟ ಪತ್ರ ಬರೆಯುತ್ತಾರೆ. ಹೀಗೆ ಅವರು ಬರೆದಿರುವ ಪತ್ರಗಳ ಸಂಗ್ರಹವೇಒಂದು ಕೃತಿಯಾದೀತು.

ಮಾಧ್ಯಮಗಳಲ್ಲಿ ಬಳಕೆಯಾಗುವ ಭಾಷಾ ಪ್ರಯೋಗದ ಬಗ್ಗೆ ಜೋಶಿಯವರಲ್ಲಿ ತೀವ್ರ ಅಸಹನೆಯಿದೆ. ಚುನಾವಣಾ ರಣತಂತ್ರ ರಣರಂಗ, ಚುನಾವಣಾ ಕಣ ಮೊದಲಾದ ಪ್ರಚೋದನಕಾರಿ ಪದಪ್ರಯೋಗಗಳು ತಪ್ಪು ಎನ್ನುವುದು ಅವರ ಅಭಿಪ್ರಾಯ. ಹಿರಿಯ ಪತ್ರಕರ್ತ ಅರ್ಣಬ್ ಗೋಸ್ವಾಮಿಯಿಂದ ಹಿಡಿದು ಕನ್ನಡ ಟಿವಿ ಲೋಕದ ಚರ್ಚಾ ಕಾರ್ಯಕ್ರಮಗಳನ್ನೂ ಚಿಕಿತ್ಸಕ ನೋಟದಿಂದ ಕಾಣುವ ಜೋಶಿ, ಸುದ್ದಿಯನ್ನು ಕೇವಲ ಸುದ್ದಿಯಾಗಿ ಮಾತ್ರ ಜನರ ಮುಂದಿಡಬೇಕು ಎಂಬ ನಿಲುವಿನವರು. ಆ ನಿಟ್ಟಿನಲ್ಲಿ ಬಿಬಿಸಿ ವಾಹಿನಿಯ ವಾರ್ತೆಗಳ ಬಗೆಗೆ ಅವರ ಮೆಚ್ಚುಗೆಯಿದೆ.

ಲೇಖಕ, ಸಂಶೋಧಕ, ಅಂಕಣಕಾರ

ಜೋಶಿಯವರ ಪ್ರಕಟಿತ ಕೃತಿಗಳು: ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ಯಕ್ಷಗಾನ ಪದಕೋಶ, ಭಾರತೀಯ ತತ್ತ್ವಶಾಸ್ತ್ರ, ತಾಳಮದ್ದಲೆ, ವಾಗರ್ಥ, ಕೃಷ್ಣಸಂಧಾನ: ಪ್ರಸಂಗ ಮತ್ತು ಪ್ರಯೋಗ, ಮುಡಿ, ಮಂದಾರ ಕೇಶವ ಬಟ್ರ್(ಪರಿಚಯ - ತುಳು), ಗುರ್ತ (ತುಳು ಕವಿತೆಗಳು), ಪಂಡಿತ ಪೆರ್ಲ ಕೃಷ್ಣಭಟ್ಟ, ಯಕ್ಷಗಾನ ಸ್ಥಿತಿಗತಿ. ಸಹ ಕರ್ತೃಕ : ಮಣೇಲ್ ಶ್ರೀನಿವಾಸ ನಾಯಕರು: ಜೀವನ ಪರಿಚಯ (ಎನ್. ಮಾಧವಾ ಚಾರ್ಯರೊಂದಿಗೆ), ಭಾರತೀಯ ತತ್ತ್ವಶಾಸ್ತ್ರ ಪರಿಚಯ (ಪ್ರೊ.ಎಂ.ಎ. ಹೆಗಡೆ ಯವರೊಂದಿಗೆ), ಭಾರತೀಯ ತತ್ತ್ವಶಾಸ್ತ್ರ ಪ್ರವೇಶ (ಪ್ರೊ.ಎಂ.ಎ. ಹೆಗಡೆಯವರೊಂದಿಗೆ), ಕುಮಾರಿಲ ಭಟ್ಟ (ಪ್ರೊ. ಎಂ.ಎ. ಹೆಗಡೆಯವರೊಂದಿಗೆ), ದಕ್ಷಿಣ ಕನ್ನಡ (ಗುರುರಾಜ ಮಾರ್ಪಳ್ಳಿಯವರೊಂದಿಗೆ), ಹಾಜಿ ಅಬ್ದುಲ್ಲಾ (ಪ್ರೊ. ಮುರಳೀಧರ ಉಪಾಧ್ಯ, ಹಿರಿಯಡ್ಕರೊಂದಿಗೆ).

ಸಂಪಾದಿತ : ಅರ್ಥಗಾರಿಕೆ: ಸ್ವರೂಪ ಸಮೀಕ್ಷೆ, ಯಕ್ಷಗಾನ ಚಿಂತನ, ಕುಕ್ಕಿಲ ಸಂಪುಟ

ಸಂಪಾದಿತ-ಇತರರೊಂದಿಗೆ : ಯಕ್ಷಗಾನ ಮಕರಂದ (ಪೊಳಲಿ ಶಾಸ್ತ್ರಿ ಸಂಸ್ಮರಣಾ ಗ್ರಂಥ), ಯಕ್ಷಕರ್ದಮ (ಪದವೀಧರ ಯಕ್ಷಗಾನ ಸಮಿತಿ, ಮುಂಬೈ, ಸಮ್ಮೇಳನ ಸಂಕಲನ), ಗಾನಕೋಗಿಲೆ (ಭಾಗವತ ದಾಮೋದರ ಮಂಡೆಚ್ಚ ಸಂಸ್ಮರಣ ಗ್ರಂಥ), ಸ್ವರ್ಣರೇಖೆ, Vision 21st century (ಕರ್ನಾಟಕ ರಾಜ್ಯ ಸ್ವರ್ಣ ಮಹೋತ್ಸವ ನೆನಪಿನ ಲೇಖನ ಸಂಕಲನಗಳು), ಪೊಲಿ (ಕೆನರಾ ಜಿಲ್ಲೆ ಶತಮಾನ-ಸಂಪುಟ), ಕುಬಣೂರು ಸ್ಮೃತಿ (ಕುಬಣೂರು ಬಾಲಕೃಷ್ಣರಾವ್ ಸ್ಮೃತಿ ಗ್ರಂಥ), ರಂಗ ವೆಂಕಟ (ಪಣಂಬೂರು ವೆಂಕಟರಾಯ ಐತಾಳ ಸಂಸ್ಮರಣಗ್ರಂಥ), ದಿವಾಣ ಸಂಪದ (ದಿವಾಣ ಭೀಮ ಭಟ್ಟ), ಮೂಡಂಬೈಲು ಶಾಸ್ತ್ರಿ-೭೫ (ಅಭಿನಂದನ ಗ್ರಂಥ), ಶೇಣಿ ಪ್ರಸಂಗ, ಶ್ರೀಮಯ ಅಮೃತ ಸಿಂಚನ (ಶ್ರೀ ಇಡಗುಂಜಿ ಮೇಳ- ೭೫ ಸಂಪುಟ), ಶ್ರೀಮಯ ಅಮೃತ ಸಿಂಚನ (ಶ್ರೀ ಇಡಗುಂಜಿ ಮೇಳ- ೮೦ ಸಂಪುಟ)

ಇತರ : ಬಿಡಿ ಬರಹಗಳು, ಕವಿತೆಗಳು, ವಿಚಾರ ಪತ್ರಗಳು.

ಡಾ.ಎಂ. ಪ್ರಭಾಕರ ಜೋಶಿ/೨೧