ಈ ಕೃತಿಗಳಲ್ಲಿ ಮುಖ್ಯವಾಗಿ ಯಕ್ಷಗಾನಕ್ಕೆ ಸಂಬಂಧಿಸಿದ ಮೀಮಾಂಸೆಗಳು,ನಿಘಂಟು ಮತ್ತು ಡಾಕ್ಟರೇಟ್ ಅಧ್ಯಯನಗಳನ್ನು ಒಂದು ಗುಂಪಾಗಿಯೂ, ಭಾರತೀಯ ತತ್ವಶಾಸ್ತ್ರದ ಬಗ್ಗೆ ಪ್ರೊ.ಎಂ.ಎ.ಹೆಗ್ಡೆಯವರೊಂದಿಗೆ ಸೇರಿ ರಚಿಸಿದ ಕೃತಿಗಳನ್ನು ಇನ್ನೊಂದು ಗುಂಪಾಗಿಯೂ, ಸಮಕಾಲೀನ ವಿಚಾರಗಳು, ಸಂಸ್ಕೃತಿಗಳನ್ನು ಕುರಿತ ವೈಚಾರಿಕ ಲೇಖನಗಳು ಹಾಗೂ ಪ್ರತಿಕ್ರಿಯೆಗಳನ್ನು ಮೂರನೆಯ ಗುಂಪಾಗಿಯೂ, ಜೋಶಿಯವರ ತುಳುಕನ್ನಡ ಸೃಜನಶೀಲ ಕವಿತೆಗಳು ಹಾಗೂ ಮರುರೂಪಗಳನ್ನು ನಾಲ್ಕನೆಯ ಗುಂಪಾಗಿಯೂ, ಗ್ರಂಥ ಸಂಪಾದನೆಗಳನ್ನು ಐದನೆಯ ಗುಂಪಾಗಿಯೂ ನೋಡಬಹುದು. ಈ ಕಿರುಹೊತ್ತಗೆಯಲ್ಲಿ ಅವರ ಕೃತಿಗಳ ಸಮಗ್ರ ಪರಿಚಯ ಮಾಡಿಕೊಡಲು ಸಾಧ್ಯವಾಗಿಲ್ಲ. ಅವರ ಎಲ್ಲ ಬರವಣಿಗೆ ಸಂಕಲನಗಳಾಗಿ ಬಂದಿಲ್ಲ ಎನ್ನುವುದನ್ನೂ ಗಮನಿಸಬೇಕು.
ಲೇಖಕನಾಗಿಯ ಜೋಶಿ ವಿಶಿಷ್ಟ,ಪ್ರಸಿದ್ದ.ಹೇಳಬೇಕಾದುದನ್ನು ನೇರವಾಗಿ,ಕೆಲವೇ ಪದಗಳಲ್ಲಿ ಬರೆಯುವವರು.ಅವರ ಕೃತಿಗಳು ಆಯಾಯ ಕ್ಷೇತ್ರದ ನೇರ ಹಾಗೂ ಪ್ರಾಯೋಗಿಕಜ್ಞಾನದಿಂದ ರಚಿತವಾಗಿವೆ.ಅವುಗಳಲ್ಲಿ ವಸ್ತು ನಿಷ್ಠತೆ,ಸ್ಪಷ್ಟವಾದ ಮೌಲ್ಯ ಪ್ರಜ್ಞೆ ಮತ್ತು ವಿಷಯವನ್ನು ವಿವಿಧ ಕೋನಗಳಿಂದ ಪರಿಶೀಲಿಸುವ ಗುಣ ಎದ್ದು ಕಾಣುತ್ತದೆ.
ಜಾಗರ,ಕೇದಗೆ,ಮಾರುಮಾಲೆ,ಪ್ರಸ್ತುತ,ವಾಗರ್ಥ,ಯಕ್ಷಗಾನ ಪದಕೋಶ,ಮುಡಿ,ತಾಳಮದ್ದಲೆ(ಯಕ್ಷಗಾನ ವಿಮರ್ಶಾಗ್ರಂಥ)ಮೊದಲಾದವು ಪ್ರಭಾಕರಜೋಶಿಯವರ ಪ್ರಮುಖ ಕೃತಿಗಳು.ಪ್ರೊ.ಎಂ.ಎಂ.ಹೆಗಡೆಯವರೊಂದಿಗೆ 'ಭಾರತೀಯ
ತತ್ತ್ವಶಾಸ್ತ್ರ ಪ್ರವೇಶ' ಮತ್ತು'ಕುಮಾರಿಲ ಭಟ್ಟ ಪರಿಚಯ ಮತ್ತು ಆಯ್ದ ಅನುವಾದಗಳು ಕೃತಿ ರಚಿಸಿದ್ದಾರೆ.
ಜಾಗರ' (೧೯೮೫) ಕೃತಿಯು ಯಕ್ಷಗಾನ ಕಲೆಗೆ ಸಂಬಂಧಿಸಿದ ಬರಹಗಳ ಸಂಗ್ರಹ.ಇದರಲ್ಲಿನ ನಾಲ್ಕು ವೇಷಗಳು ಎಂಬ ಲೇಖನವು ಬಡಗುತಿಟ್ಟಿನ ಬಣ್ಣದ ವೇಷ,ಬಡಗುತಿಟ್ಟಿನ ವೃಷಕೇತು,ತೆಂಕುತಿಟ್ಟಿನ ಭೀಮ ಹಾಗೂ ತೆಂಕುತಿಟ್ಟಿನ ರಾವಣ ಪಾತ್ರದ ವೇಷ ವಿಧಾನವನ್ನು ವಿಶ್ಲೇಷಿಸುತ್ತದೆ.ಎಲ್ಲ ಪಾತ್ರಗಳ ಆಹಾರ್ಯದ ಕುರಿತು ಚರ್ಚಿಸುವಾಗ ತೆಂಕು ಹಾಗೂ ಬಡಗು ತಿಟ್ಟುಗಳನ್ನು ತೌಲನಿಕವಾಗಿ ಅವಲೋಕಿಸಿದ್ದಾರೆ.'ಕೇದಗೆ' (೧೯೮೬) ಕೃತಿಯೂ ಯಕ್ಷಗಾನ ಕಲೆಗೆ ಸಂಬಂಧಿಸಿದ ಲೇಖನಗಳ ಸಂಕಲನ.
ಪ್ರಭಾಕರ ಜೋಶಿ ವಾಣಿಜ್ಯ ವಿದ್ಯಾರ್ಥಿಯಾದರೂ ಮಂಗಳೂರು ವಿಶ್ವವಿದ್ಯಾಲಯದ ಮಾನವಿಕ ವಿಭಾಗದಲ್ಲಿ ಪಿಹೆಚ್‌ಡಿ ಮಾಡಿದ್ದು ಇನ್ನೊಂದು ಸಾಧನೆ. 'ಶ್ರೀಕೃಷ್ಣ ಸಂಧಾನ-ಪ್ರಸಂಗ ಮತ್ತು ಪ್ರಯೋಗ' ಡಾ.ಪ್ರಭಾಕರ ಜೋಶಿಯವರ ಪಿಹೆಚ್‌ಡಿ ಮಹಾಪ್ರಬಂಧದ ವಿಷಯ.ಈ ವಿಶಿಷ್ಟ ಸಾಧನೆಗೆ ಕಾರಣರಾದವರು ಹಿರಿಯ ವಿದ್ವಾಂಸ ಪ್ರೊ.ಬಿ.ಎ. ವಿವೇಕ ರೈ.
ಜೋಶಿ ಅಂಕಣಕಾರರಾಗಿಯೂ ಪ್ರಸಿದ್ದರು.ಉದಯವಾಣಿ,ಹೊಸದಿಗಂತ ಸೇರಿದಂತೆ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಸಂಸ್ಕೃತಿ ಸಂಬಂಧ ಸುದೀರ್ಘ ಕಾಲ ಅಂಕಣಗಳನ್ನು ಬರೆದಿದ್ದಾರೆ.ಉದಯವಾಣಿಯಲ್ಲಿ ೧೯೭೫ರಿಂದ ೨೦೦೦ದವರೆಗೆ ಸುಮಾರು ೧೫೦
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೨೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೨
ಡಾ.ಎಂ.ಪ್ರಭಾಕರ ಜೋಶಿ