ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಲಾವಿದರನ್ನು ತಮ್ಮ ಅಂಕಣದಲ್ಲಿ ಪರಿಚಯಿಸಿದ್ದಾರೆ. ಯಕ್ಷಗಾನ ಎಂದಲ್ಲ ಯಾವುದೇ ಒಂದು ಕಲೆಯ ಕಲಾವಿದ ಸಮೂಹದ ಬಗ್ಗೆ ಇಷ್ಟೊಂದು ಪರಿಚಯಾತ್ಮಕ ಬರಹಗಳು ಪ್ರಕಟವಾದುದು ಒಂದು ದಾಖಲೆಯೇ. ಹಾಗೆ ಎಷ್ಟೋ ಕಲಾವಿದರ ಪ್ರೀತ್ಯಾದರಗಳಿಗೆ ಪಾತ್ರರು. ಒಂದು ಸಾರಿ ಪಡ್ರೆ ಚಂದು ತನ್ನ ಬಗ್ಗೆ ಬರೆದ ಲೇಖನವನ್ನು ಮೆಚ್ಚಿ ತಾನೇ ಬೆಳೆದ ಅಲಸಂಡೆ ಕಟ್ಟನ್ನು ಜೋಶಿಯವರ ಮನೆಗೆ ತಂದು ಕೊಟ್ಟಿದ್ದರಂತೆ.

೨-೩ ದಶಕಗಳಿಂದ ಉದಯವಾಣಿ ಕಲಾವಿಹಾರ ಸಾಪ್ತಾಹಿಕ ಪುರವಣಿಯಲ್ಲಿನಡೆದ ಹಲವು ಪ್ರಬುದ್ಧ ಚರ್ಚೆಗಳಲ್ಲಿ ಜೋಶಿಯವರು ಸಕ್ರಿಯರಾಗಿರುವವರು.

ಜೋಶಿ ತುಳು ಭಾಷೆಯಲ್ಲೂ ಲೇಖನ, ಕೃತಿಗಳನ್ನು ಬರೆದಿದ್ದಾರೆ. 'ಗುರ್ತ' ಎನ್ನುವುದು ತುಳು ಭಾಷೆಗೇ ವಿಶಿಷ್ಟವಾಗಿರುವ ಕವನ ಸಂಕಲನ. ಭಾಸನ ಬಾಲಚರಿತ ಎಂಬ ಕೃಷ್ಣನ ಬಾಲಲೀಲೆಗಳ ಕುರಿತ ನಾಟಕದಲ್ಲಿರುವ ೪೦ ಪದ್ಯಗಳ ದೂರಾನುವಾದವದು. 'ಮಂದಾರ ಕೇಶವ ಭಟ್ರ್' ಎನ್ನುವುದು ಜೋಶಿಯವರ ಇನ್ನೊಂದು ತುಳು ಪುಸ್ತಕ.

ಜೋಶಿಯವರ 'ಯಕ್ಷಗಾನ ಸ್ಥಿತಿಗತಿ' ಕೃತಿಗೆ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅವರು ಬರೆದ ಪ್ರಸ್ತಾವನೆಯ ಮಾತುಗಳು ಈ ಕೃತಿಯ ಸಂದರ್ಭದಲ್ಲಿ ಉಲ್ಲೇಖನೀಯ:

“...ಯಕ್ಷಗಾನದ ಶಾಸ್ತ್ರೀಯ ಪರಂಪರೆ ಮತ್ತು ಆಧುನಿಕ ಆನ್ವಯಿಕ ಪ್ರಯೋಗ-ಈ ಅಂಶಗಳನ್ನು ತನ್ನದೇ ಆಗಿರುವ ವಿಶಿಷ್ಟ ವಿವೇಕವನ್ನು ಬಳಸಿ ಡಾ. ಎಂ. ಪ್ರಭಾಕರ ಜೋಶಿಯವರು ವಿಶ್ಲೇಷಿಸಿ ತಮ್ಮ ಅಭಿಪ್ರಾಯಗಳನ್ನು ಕರಾರುವಾಕ್ಕಾಗಿ ಮಂಡಿಸಿದ್ದಾರೆ... ಯಕ್ಷಗಾನದ ನಿರ್ದಿಷ್ಟ ವಿಷಯ ಅಥವಾ ಪರಿಕಲ್ಪನೆಗೆ ಸಂಬಂಧಪಟ್ಟಂತೆ ಪ್ರಚಲಿತವಿರುವ ರಂಗ ತಿಳುವಳಿಕೆಯನ್ನು ಡಾ. ಜೋಶಿಯವರು ತಮ್ಮ ಲೇಖನಗಳಲ್ಲಿ ವಿಸ್ತರಿಸಿದ್ದಾರೆ ಎಂಬುದು ಮುಖ್ಯ ಮಾತು. ಯಕ್ಷಗಾನ ರಂಗದ ಜೊತೆಗೆ ಅವರು ಇಟ್ಟುಕೊಂಡಿರುವ ನಿರಂತರ ನಿಕಟ ಸಂಪರ್ಕ, ರಂಗಾನುಭವದ ಮೂಲಕ ಸ್ಪುಟಗೊಂಡ ಕಲಾಧೋರಣೆ, ರಹಸ್ಯ ಕಾರ್ಯಸೂಚಿ ಇಲ್ಲದ ತೆರೆದ ಮನಸ್ಸಿನ ಚಿಂತನೆ, ಹದವರಿತ ಮಾತಿನ ಹರಿತ ಶೈಲಿ- ಈ ಅಂಶಗಳು ಇಲ್ಲಿಯ ಲೇಖನಗಳಿಗೆ ಸೈದ್ಧಾಂತಿಕ ಚೌಕಟ್ಟು ಮತ್ತು ಅಭಿವ್ಯಕ್ತಿಯ ಸೊಗಸನ್ನು ಒದಗಿಸಿವೆ ಹಾಗೂ ಯಕ್ಷಗಾನದ ಕುರಿತಂತೆ ನಾವು ಹೊಂದಬೇಕಾದ ಅರಿವಿನ ವೇಗವನ್ನು ಇಲ್ಲಿಯ ಬರಹಗಳ ಶೈಲಿಯಿಂದಲೇ ಗುರುತಿಸಬಹುದು. ಚಿಂತನಗಳಂತಿರುವ ಹಲವು ಲೇಖನಗಳಲ್ಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಡಾ. ಜೋಶಿಯವರು ಚೆಲ್ಲಿಬಿಡುವ ಆಲೋಚನೆಗಳನ್ನು ಪೋಣಿಸಿ ನೋಡಿದರೆ ಅವರ ಆಲೋಚನೆಯ ಸಮಗ್ರ ನೆಲೆಯನ್ನು ಗುರುತಿಸಲು ಸಾಧ್ಯ... ಬೇರೆ ಬೇರೆ ವಿನ್ಯಾಸಗಳಲ್ಲಿ ಅತ್ಯುತ್ತಮವಾಗಿ, ಸಾಂದ್ರವಾಗಿ ಮತ್ತು ಸಮಗ್ರವಾಗಿ ಯಕ್ಷಗಾನಕ್ಕೆ ಪ್ರತಿಕ್ರಿಯಿಸುವ/ಚಡಪಡಿಸುವ ಸೃಜನಶೀಲ ಮನಸೊಂದನ್ನು ಡಾ. ಜೋಶಿಯವರಲ್ಲಿ ನಾವು ಗುರುತಿಸಬಹುದು..”

'ಯಕ್ಷಗಾನವೆಂಬ ಶೈಲಿಬದ್ಧ, ಶೈಲೀಕೃತ, ಅವಾಸ್ತವ ಪ್ರಧಾನ, ರಮ್ಯಕಲೆ ವಿಧಾನವು ಜಿಗುಟಲ್ಲ, ಪ್ರಯೋಗ ವಿರೋಧಿಯಲ್ಲ. ನಾವೀನ್ಯ ನಿರಾಕರಣಶೀಲವಲ್ಲ. ಸಮಕಾಲೀನ ರಂಗ ನಾಟಕದ ಹಾಗೆ ಮುಕ್ತವೂ ಅಲ್ಲ, ಅ-ಶಿಷ್ಟವೂ ಅಲ್ಲ', 'ಇತ್ತೀಚೆಗೆ ಯಕ್ಷಗಾನದಲ್ಲಿ ಕಾಣುವ ಅನೇಕಾನೇಕ ನರ್ತನಗಳು, ಪದಾಭಿನಯಗಳು, ಚಲನೆಗಳು 'ವಿಕೃತಿ'ಗಳಾಗಿ

ಡಾ.ಎಂ.ಪ್ರಭಾಕರ ಜೋಶಿ / ೨೩