ಕಿರಾತನ ಮೂಲಕ ಭೀಷ್ಮನನ್ನು ಶಿಕ್ಷಿಸುವ ಯತ್ನ, ಪರಶುರಾಮ-ಭೀಷ್ಮರ ಯುದ್ಧ, ಭೀಷ್ಮನ ಜಯ- ಹೀಗೆ ಸಾಗುವ ಘಟನೆಗಳ ಉದ್ದಕ್ಕೂ ಭೀಷ್ಮನ ದೃಢತೆ, ಅಂಬೆಯೊಬ್ಬಳು
ಅಪರಾಧಿನಿ, ಹಟವಾದಿ ಹೆಣ್ಣು ಎಂಬಂತೆ ಚಿತ್ರಣ ಸಾಗುತ್ತದೆ. ಆದರೆ ಅದು ಹಾಗೆಯೇ
ಆಗಬೇಕಾಗಿಲ್ಲ. ಬೇರೆ ರೀತಿಯ ಕಲ್ಪನೆಗಳನ್ನು ಅಳವಡಿಸಲು ಸಾಧ್ಯ ಪ್ರಸಂಗದಲ್ಲೇ ಭೀಷ್ಮನ ಪಾತ್ರದಲ್ಲಷ್ಟೆ ಪ್ರಬಲವಾಗಿ, ಸಾಲ್ವ, ಅಂಬೆ, ಪರಶುರಾಮರ ಪಾತ್ರಗಳೂ ಚಿತ್ರಿತವಾಗಿವೆ.
ಈ ಪ್ರಸಂಗವನ್ನು ಹೆಣ್ಣೋರ್ವಳು ಪರಿಸ್ಥಿತಿಗೆ ಸಿಕ್ಕಿ ಅಸಹಾಯಕಳಾಗುವ
ದುರಂತವಾಗಿ,ಸಾಲ್ವನ ಭಗ್ನ ಪ್ರಣಯದ ಚಿತ್ರವಾಗಿ ತೋರಿಸಲು ಬರುತ್ತದೆ. (ಈ ದಿಕ್ಕಿನಲ್ಲಿ ಒಂದು ಪ್ರಯತ್ನ ಕೆರೆಮನೆ ಬಂಧುಗಳು ಪ್ರದರ್ಶಿಸುತ್ತಿದ್ದ ಭೀಷ್ಮವಿಜಯ) ಭೀಷ್ಮನ ಬಿಗಿಮುಷ್ಟಿಯ ಧೋರಣೆ, ಸಾಲ್ವನು ಅಂಬೆಯ ಹೃದಯವನ್ನು ಅರ್ಥಮಾಡಿಕೊಳ್ಳದೆ ತಿರಸ್ಕರಿಸುವುದು,ಕಾಶಿರಾಜನ ದೌರ್ಬಲ್ಯ ಇವುಗಳಿಂದ ಅಂಬೆ ನಿರ್ಗತಿಕಳಾಗುತ್ತಾಳೆ. ಕಾಡಿನ ಕಿರಾತನೊಬ್ಬನನ್ನು ಕರೆತಂದು ಭೀಷ್ಮನೆದುರು ನಿಲ್ಲಿಸುವ ಅಂಬೆಯ ಹತಾಶ ಸಾಹಸ ಈ ದುರಂತದ ಇನ್ನೊಂದು ಮಗ್ಗುಲಾಗುತ್ತದೆ. ಕೊನೆಗೆ, ಪ್ರಬಲನಾದ ಪರಶುರಾಮನೂ ಕೂಡ ಭೀಷ್ಮನಲ್ಲಿ ಸೋತಾಗ ಅಂಬೆಯ ಬಾಳು ಭಗ್ನವಾಗಿ, ಈಗಾಗಲೇ ಬೆಂದು ಹೋಗಿರುವ ಅವಳ ಬದುಕಿನ ದುರಂತದ ಸಂಕೇತವಾಗಿ ಅವಳ ಅಗ್ನಿಪ್ರವೇಶವಾದಾಗ, ಆ ಅಗ್ನಿಕುಂಡವೇ ಒಂದು ಪಾತ್ರವಾಗುತ್ತದೆ.(ಜನ್ಮಾಂತರದಲ್ಲಿ ಅಂಬೆ, ಶಿಖಂಡಿಯಾಗಿ ಭೀಷ್ಮನ ಪತನಕ್ಕೆ ಕಾರಣಳಾಗುವುದೂ ಕೂಡ, ಅಂಬಾ ಪ್ರಕರಣದಲ್ಲಿ ಭೀಷ್ಮನು ನಿಷ್ಕಲಂಕನಲ್ಲವೆಂದೂ, ಅದು ಭೀಷ್ಮ ವಿಜಯಮಾತ್ರವಲ್ಲವೆಂದೂ ಸೂಚಿಸುತ್ತಿರುಬಹುದೇ?) ಭೀಷ್ಮವಿಜಯದ ಅಂಬೆಯ ಈ ಪದ್ಯಇಡಿಯ ಪ್ರಸಂಗದ ಹೃದಯವಾಗಿದೆ.
ಮರುಳೆ ನಾನಾಗಿರ್ಪೆ ಮತ್ತಿತ | ಪರಮ ಪಾತಕಿ ಸಾಲ್ವ ಮೂರ್ಖನು
ಸರಸಿಜಾಸನ ಭ್ರಷ್ಟನಾದನು ಎನ್ನ ಸೃಜಿಸುತಲಿ .. ಸರುವ ಕಾರಣ ಮೂಲಭೀಷ್ಮನು |
-ಇದು ಮಡುಗಟ್ಟಿದ ಅಂಬೆಯ ಅಸಹಾಯಕತೆ. ಈ ಪದ್ಯವು ಪ್ರಸಂಗದ
ಮಧ್ಯಭಾಗದಲ್ಲಿರುವುದು ಸೂಚಕ.
ಈ ಪ್ರಸಂಗವನ್ನು ಕಾಶಿರಾಜನ ಒಡೋಲಗದಿಂದ ಆರಂಭಿಸಿ, ಸಾಲ್ವನಿಂದ ತಿರಸ್ಕರಿಸಲ್ಪಟ್ಟ ಅಂಬೆ, ಎರಡನೇ ಬಾರಿ ಭೀಷ್ಮನಿಂದ ತಿರಸ್ಕೃತಳಾಗುವಲ್ಲಿವರೆಗೆ ಮಾತ್ರ ಪ್ರದರ್ಶಿತವಾದರೂ ಒಂದು ಒಳ್ಳೆಯ ಕಥಾಕನವಾಗುತ್ತದೆ. ಈ ಪ್ರಸಂಗದ ನಾಯಕ ಪಾತ್ರ ನಿಜವಾಗಿ ಭೀಷ್ಮನಲ್ಲ, ಅಂಬೆಯೇ... ನಮ್ಮ ಪರಂಪರೆಯಲ್ಲಿ ಇರುವ ಲೌಕಿಕ ಆಶಯ, ಪ್ರತಿಭಟನೆ, ಭಿನ್ನಮತಗಳಿಗೆ ಮಹತ್ವ ನೀಡಿ ಚಿತ್ರಿಸುವುದಕ್ಕೆ, ಆಸ್ಪದ ಇರುವ ಹಲವು ಕಥಾಭಾಗಗಳಿವೆ...'
ಜೋಶಿಯವರದ್ದು ಕಲೆಯ ಕುರಿತಂತೆ ಕೇವಲ ಸೈದ್ಧಾಂತಿಕ ವಿಶ್ಲೇಷಣೆಯಷ್ಟೇ ಅಲ್ಲ.ಕಲೆಯ ಮೇಲಿನ ಅಭಿಮಾನದ ಜೊತೆಗೆ ಕಲಾವಿದ ಕುರಿತ ಕಾಳಜಿಯೂ ಎದ್ದು
ಕಾಣುವಂಥದ್ದು. ಶೇಣಿ, ಸಾಮಗರ ಕಾಲದಿಂದ ಹಿಡಿದು ಈ ಹೊತ್ತಿನವರೆಗೂ ಆಯಾ
ಕಾಲ ಘಟ್ಟದಲ್ಲಿ ಶ್ರೇಷ್ಠ ಕಲಾವಿದರ ಜೊತೆಗೆ ಮಾತ್ರ ಅಲ್ಲದೆ ಸಾಮಾನ್ಯ ಬಡ ಕಲಾವಿದನ
ಜೊತೆಗೂ ಒಡನಾಡಿದವರು ಜೋಶಿ. ಇದೇ ಕಾರಣಕ್ಕೆ ಒಂದು ಕಾಲದಲ್ಲಿ ಉಪನ್ಯಾಸಕ
ವೃತ್ತಿಗೇ ಸಂಚಕಾರ ಬಂದಾಗಲೂ ಜಗ್ಗದೆ ಮುನ್ನಡೆದವರು. ಸಾಮಾನ್ಯ ಕಲಾವಿದನ
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಡಾ.ಎಂ. ಪ್ರಭಾಕರ ಜೋಶಿ
/ ೨೫