ಉಡುವೆಕೋಡಿ ಸುಬ್ಬಪ್ಪಯ್ಯ,ಮೂಡಂಬೈಲು ಶಾಸ್ತ್ರಿ, ಎಸ್. ಈಶ್ವರ ಭಟ್, ಜಬ್ಬಾರ್
ಸಮೋ, ರಾಧಾಕೃಷ್ಣ ಕಲ್ಟಾರ್, ವಾಸುದೇವ ರಂಗಾಭಟ್, ರಾಮಜೋಯಿಸ್, ಭಾಗವತ ರಘುರಾಮ ಹೊಳ್ಳರು, ಪದ್ಯಾಣ ಸೋದರರು, ಕುರಿಯ ಶಾಸ್ತ್ರಿಗಳು, ಉಜಿರೆ ಅಶೋಕಭಟ್ ಮೊದಲಾದವರು ಜೋಶಿಯವರ ಸಹ ಕಲಾವಿದರು, ಆತ್ಮೀಯ ಸ್ನೇಹಿತರೂ ಹೌದು.
ನೆರವು ನೀಡುವ ಕುಟುಂಬ
ಮೂಲತಃ ಮುಂಡಾಜೆಯ ದಿ. ವೆಂಕಟೇಶ ಲೋಂಡ್ರೆ ಮತ್ತು ಇಂದಿರಾ ಲೋಂಡೆಯವರ ಮಗಳು ಶ್ರೀಮತಿ ಸುಚೇತಾ ಜೋಶಿ, ಪ್ರಭಾಕರ ಜೋಶಿಯವರ ಬದುಕಿನ ಸಂಗಾತಿ. ವೃತ್ತಿಯಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿರುವ ಸುಚೇತಾ ಮೇಡಂ ಕೂಡಾ ಕಲೆ, ಸಾಹಿತ್ಯದಲ್ಲಿ ಪ್ರೀತಿ ಉಳ್ಳವರು. ಚಿತ್ಪಾವನಿ ಭಾಷೆಯಲ್ಲಿ ಶಬ್ದಕೋಶ ತಯಾರಿಯಲ್ಲಿ ನಿರತರಾಗಿದ್ದಾರೆ. ಕೆಲ ಸಂದರ್ಭಗಳಲ್ಲಿ ತಾಳಮದ್ದಲೆ ಕೂಟಗಳಲ್ಲಿ ಅರ್ಥ ಹೇಳಿದ್ದೂ ಉಂಟು. ತನ್ನ ಉದ್ಯೋಗದ ಜೊತೆಗೆ ಕುಟುಂಬದ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿ ಕೊಂಡು, ಜೋಶಿಯವರ ಶೈಕ್ಷಣಿಕ, ಸಾಂಸ್ಕೃತಿಕ ಸಾಧನೆಗಳಿಗೆ ಬೆನ್ನೆಲುಬಾಗಿರುವವರು ಶ್ರೀಮತಿ ಸುಚೇತಾ ಜೋಶಿ. ಪ್ರಭಾಕರ ಜೋಶಿ- ಸುಚೇತಾ ಜೋಶಿ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಶ್ವೇತಾ ಸೂರ್ಯನಾರಾಯಣ ಮತ್ತು ಸ್ವಾತಿ ಕಾರ್ತಿಕ್ ಭಟ್. ಮದುವೆಯಾಗಿ ಇಬ್ಬರೂ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಭವ ಮತ್ತು ಅಮೋಫ್ (ಹಿರಿಯ ಪುತ್ರಿ ಶ್ವೇತಾ ಅವರ ಮಕ್ಕಳು) ಮತ್ತು ನಿಶಿಕಾ (ಕಿರಿಯ ಪುತ್ರಿ ಸ್ವಾತಿ ಅವರ ಮಗು) ಮೊಮ್ಮಕ್ಕಳು.
ಇಂಥ ಪ್ರಭಾಕರ ಜೋಶಿಯವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಯಕ್ಷಗಾನ
ಅಕಾಡೆಮಿಯಿಂದ ೧೯೮೪, ೧೯೯೪ ಮತ್ತು ೨೦೦೩ರ ರಾಜ್ಯ ಪ್ರಶಸ್ತಿಗಳಲ್ಲದೆ ವಿವಿಧ ಸಂದರ್ಭಗಳಲ್ಲಿ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿವೆ. ಇದೀಗ ಜೋಶಿಯವರು ಅಮೆರಿಕದ ಚಿಕಾಗೋ, ಸನ್ನಿವೇಲ್, ಹೂಸ್ಟನ್, ಮಯಾಮಿ, ಮೇರಿಲ್ಯಾಂಡ್ ಮೊದಲಾದೆಡೆ ತಾಳಮದ್ದಲೆ ಅರ್ಥಗಾರಿಕೆ ಪ್ರದರ್ಶನವನ್ನೂ ನೀಡಿದ್ದಾರೆ.
ಕರಾವಳಿಯ ಎಷ್ಟೋ ಕಲಾವಿದರ ಬಗೆಗೆ ದಾಖಲೆಯೆಂಬಷ್ಟು ಲೇಖನ, ಪುಸ್ತಕಗಳನ್ನು ಬರೆದ ಪ್ರಭಾಕರ ಜೋಶಿಯವರ ಬಗ್ಗೆ ಬಂದ ಲೇಖನಗಳು ಬೆರಳೆಣಿಕೆಯಷ್ಟು ಎಂಬುದು ಮಾತ್ರ ದುರಂತ. ಈವರೆಗೆ ಅವರ ಬಗ್ಗೆ ಯಾವ ಕೃತಿಯೂ ಬಂದಿಲ್ಲ. ನಾಡು ಕೂಡ ಅವರನ್ನು ಸಮರ್ಪಕವಾಗಿ ಗುರುತಿಸಿ ಗೌರವಿಸಿಲ್ಲ ಎಂಬ ಕೊರಗು ಕೂಡ ಜೋಶಿಯವರ ಅಭಿಮಾನಿಗಳಲ್ಲಿದೆ. ಜೊತೆಗೆ ಕರಾವಳಿಯಲ್ಲಿ ಅಭಿನಂದನಾ ಸಮಾರಂಭಗಳಿಗೊಂದು ಸ್ವ್ವರೂಪ ಕೊಟ್ಟ ಜೋಶಿಯವರಿಗೆ ಇದುವರೆಗೆ ಅಂತಹುದೊಂದು ಅಭಿನಂದನೆಯೇ
ನಡೆಯಲಿಲ್ಲ ಎನ್ನುವುದು ಗಮನಾರ್ಹ. ಆದರೆ ಜೋಶಿಯವರ ಸಾಧನೆ, ಮೇರು ವ್ಯಕ್ತಿತ್ವಕ್ಕೆ ಪರಮ ಪುಣ್ಯವಾದ ಈ ನಾಡು ಸದಾ ನಮಸ್ಕರಿಸುತ್ತದೆ...
ಡಾ.ಎಂ.ಪ್ರಭಾಕರ ಜೋಶಿ / ೩೮