ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನದ ಪ್ರಥಮ ವೆಬ್‌ ಸೈಟ್ www.yakshagana.com ಇದರ ಸಹ ಸ್ಥಾಪಕರು (ಪಿ. ವಾಸುದೇವ ಐತಾಳರ ಜತೆಗೆ) ಹಾಗೂ ಸಂಪಾದಕರು, ೧೦೦ ಕ್ಕೂ ಮಿಕ್ಕಿ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಅರ್ಥ ಹೇಳಿದ್ದಾರೆ. ಹಲವು ಕ್ಯಾಸೆಟ್‌ಗಳ ನಿರ್ದೇಶನ ಮಾಡಿದ್ದಾರೆ. ಯಕ್ಷಗಾನದ ಪ್ರಥಮ ಸಿಡಿಗಳ ನಿರ್ದೇಶಕರು ಜೋಶಿಯವರೇ. • ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ರಾಷ್ಟ್ರೀಯ ೫. ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿಚಾರಗಳನ್ನು ಮಂಡಿಸಿದ್ದಾರೆ. • ನಾಸ್ತಿಕ-ಆಸ್ತಿಕ ವಾಗ್ವಾದದಲ್ಲಿ ಭಾಗವಹಿಸಿದ್ದಾರೆ (ಪಂಡಿತ ಪೆರ್ಲ ಕೃಷ್ಣ ಭಟ್ಟರೊಂದಿಗೆ.) ಶತಾವಧಾನಿ ಆರ್. ಗಣೇಶ್ ಅವರೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಪೃಚ್ಛಕರಾಗಿ ಭಾಗವಹಿಸಿದ್ದಾರೆ. ಉಡುಪಿಯ ಆರ್.ಆರ್.ಸಿ., ಯಕ್ಷಗಾನ ಕೇಂದ್ರ - ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಯಕ್ಷಗಾನ ಕಲಾರಂಗ ಇತ್ಯಾದಿಗಳಿಗೆ ಸಲಹೆಗಾರರು. ಪದವಿಪೂರ್ವ ವಿಭಾಗದ ಅಧ್ಯಾಪಕ ಅಧ್ಯಾಪಕೇತರ ಸಂಘದ ಅಧ್ಯಕ್ಷರಾಗಿ ಮಹತ್ವದ ಕಾರ್ಯ ಮಾಡಿದ್ದಾರೆ; ಸಂಘಟನೆ, ಹೋರಾಟಗಳನ್ನು ಮಾಡಿದ್ದಾರೆ. ಅಧ್ಯಾಪಕ ಒಕ್ಕೂಟದ ಪದಾಧಿಕಾರಿಯೂ ಆಗಿದ್ದರು. ಅನುಬಂಧ – ೧ - ಒಂದು ಬರಹ - ಬುದ್ಧನ ಕುರಿತ ಲೇಖನ ಸಂಕೀರ್ಣವಾದ ದರ್ಶನ-ಧರ್ಮಗಳನ್ನು ಸರಳಗೊಳಿಸಿ ಜನರೆಡೆಗೆ ಕೊಂಡೊಯ್ಯುವುದಕ್ಕೆ ಹೊರಟವನು ಭಗವಾನ್ ಬುದ್ಧ, 'ಲೋಕದಲ್ಲಿರುವ ದೋಷ ಕಲ್ಮಷಗಳೆಲ್ಲ ನನ್ನ ಮೇಲಿರಲಿ, ಲೋಕವು ಮುಕ್ತನಾಗಲಿ' ಎಂದವನೂ ಅವನೇ. ಅವನು ಕಂಡ ಆರ್ಯಸತ್ಯ ಎಂದರೆ, ಶ್ರೇಷ್ಠನಾಗುವುದಕ್ಕೆ ಅರಿಯಬೇಕಾದ ಸತ್ಯ. ಪತ್ರಿಕೆಯೊಂಕ್ಕೆ ಬರೆದ ಈ ಬುದ್ಧತತ್ವ ಚಿಂತನೆಯ ಬರಹ ಡಾ. ಪ್ರಭಾಕರ ಜೋಶಿಯವರ ತಾತ್ವಿಕ ಬರಹಕ್ಕೆ ನಿದರ್ಶನವಾದೀತು. ವೈಶಾಖದ ಹುಣ್ಣಿಮೆ, ಭಗವಾನ್ ಬುದ್ಧನ ಜನನ, ಜ್ಞಾನೋದಯ ಮತ್ತು ಪರಿನಿರ್ವಾಣಗಳ ದಿನ. ಇವು ಮೂರೂ ಒಂದೊಂದು ರೀತಿಯಲ್ಲಿ ಪೂರ್ಣಿಮೆಗಳು. ಒಂದು ಜನನ, ಬೋಧಿ, ನಿರ್ವಾಣ ಇವು ದಾರ್ಶನಿಕ ಪೂರ್ಣತೆಯ ಮುಖಗಳು. ಜಗತ್ತಿನ ಸುಂದರ ಬಹುಪ್ರಭಾವಿ ಶಾಂತ ಚಿತ್ರಗಳಲ್ಲಿ ಬುದ್ಧನ ಮೂರ್ತಿ ಒಂದು. ಜ್ಞಾನೇನಾಕಾಶಕನ ಯೋ ಧರ್ವನ್ ಗಗನೋಪಮಾನ್ | ಜೇಯಾಭಿನ್ನೇನ ಸಂಬುದ್ಧಃ ತಂ ವಂದೇ ದ್ವಿಪದಾಂವರಂ || ಡಾ.ಎಂ.ಪ್ರಭಾಕರ ಜೋಶಿ / ೩೯