ಪುಟ:ಪ್ರಜ್ಞಾ ಸ್ವಯಂವರಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಗ್ರಹಯುಕ್ತರಾಗಿಯಾಗಲಿ, ವಿಕಲ್ಲಾರ್ಧ ಗಳನ್ನು ಕಲ್ಪಿಸುವರಾಗಿಯಾಗಲಿ ಆಗುವಂಧವರೂ ಇರಬಹುದು, ಆದರೆ, ಅವರಲ್ಲಿ ನಮ್ಮ ವಿಜ್ಞಾಪನೆಯಿಷ್ಟು ಡಂಭ, ಲೋಭದಿಂದ ಕೂಡಿದತೃಸ್ಥೆಯ ವ್ಯಾಪಾರವೇ ಕೇವಲಜಘನ್ಯವೆಂಬುದನ್ನು ನಿದರ್ಶಿಸುವ ಉದ್ದೇಶದಿಂದಲೇ ಈ ಪಾತ್ರಗಳು ಅಲ್ಲಿ ಪ್ರದರ್ಶಿತವಾಗಿರುವುವೆಂ ಬುದು ಸಂತೋಷ ಲೋಭರ ವಾಗ್ಯುದ್ಧ, ಸಂದರ್ಭ ವಿವರಣದಲ್ಲಿಯೂ, ಮತ್ತು ನಾಟಕಾಂತ್ಯದಲ್ಲಿ ಮಾಡಿರುವ ವಿವೇಚನೆಯಿಂದಲೂ ವ್ಯಕಪಡುವುದರಿಂದ, ಸಾವಧಾನವಾಗಿ ಪರಿಶೀಲಿಸಿ ಮಥಿತಾರ್ಥವನ್ನು ಗ್ರಹಿಸಬೇಕೇ ಹೊರತು ಪೂವಾ೯ಪರಸಂದರ್ಭಗಳನ್ನು ವಿಚಾರಮಾಡದೆ ಅಸಹನೆಯಿಂದ ಒಂದೆರಡು ವಿಚಾರವನ್ನು ಮಾತ್ರ ತೆಗೆದು ಆಕ್ಷೇಪಿಸುವುದು ಸರಿಯೆನಿಸಲಾರದು. ಇನ್ನು 11 ಸನ್ಮಾನಗ್ರಂಥಾವಳಿ ?' ಎಂಬ ಹೆರಿನಿಂದ ಇಂತಹ ನಾಟಕ ಗಳನ್ನು ಪ್ರಕಾಶಪಡಿಸುವ ಉದ್ದೇಶವೇನು ? ಇದರಿಂದ ಸತಿಯರ ಹಿತಸಾಧನೆ ಯಾಗುವುದು ಹೇಗೆ ? ಕೇವಲ ಪಾಮರರಂಜನೆಯೇ ಪ್ರಯೋಜನವಾಗಿಯುಳ್ಳ ಈ ನಾಟಕಪ್ರಕಟನೆಯಿಂದ ವಾ ಯಕ್ಕಾಗಲಿ, ಸಮಾಜಧರ್ಮಕ್ಕಾಗಲಿ, ಸ್ತ್ರೀಯರ ಹಿತಸಾಧನೆಗಾಗಲಿ ಹೇಗೆ ಸಹಕಾರಿಯಾಗವುದು? ಎಂಬೀತರದ ಆಕ್ಷೇ ಪಗಳು ಅನೇಕರಿಂದ ಹೊರಡಬಹುದು. ಅದಕ್ಕೆ ನಮ್ಮ ಉತ್ತರವಿಷ್ಯ, ಸತೀ ಹಿತೈಷಿಣಿಯ ಪುಸ್ತಕಗಳೆಲ್ಲವೂ ಸಾಧ್ಯವಾದಷ್ಟು ಮೇಲಿನ ನಿಯಮವನ್ನು ಅನು ಸರಿಸಿಯೇ ಹೊರಡುವುವು. ಈ ಸನ್ಮಾನಗ್ರಂಥಾವಳಿಯಲ್ಲಿ ನಾಟಕಗಳನ್ನು ಮಾತ್ರವೇ ಪ್ರಕಟಿಸುವೆವೆಂದು ಸಂಕಲ್ಪಿಸಿಲ್ಲ, ವಾಚನಾಭಿರುಚಿಯನ್ನು ಹೆಚಿ ಸುವ ಉದ್ದೇಶದಿಂದಲೂ ಇತರ ಬಂಧು ಭಗಿನಿಯರು, ಸಾಹಿತ್ಯ ಸೇವೆಯಲ್ಲಿ ತೋರುತ್ತಿರುವ ಶ್ರದ್ಧೆಗೆ ಅವರನ್ನು ಯಥೋಚಿತವಾಗಿ ಪ್ರೋತ್ಸಾಹಿಸಬೇಕೆಂಬ ಭಾವನೆಯಿಂದಲೂ ಈ ಸನ್ಮಾನಗ್ರಂಧಾವಳಿ ಎಂಬ ಹೆಸರಿನಿಂದ ಮತ್ತೊಂದು ಶಾಖೆಯನ್ನು ಏರ್ಪಡಿಸಲಾಯಿತು. ಇದರಲ್ಲಿ ನಾಟಕಗಳಲ್ಲದೆ, ಯಕ್ಷಗಾನ' ಉಪನ್ಯಾಸ, ಲೇಖನ, ಮತ್ತು ಇತರ ಐತಿಹಾಸಿಕ ಕಾದಂಬರಿಗಳೂ ಪ್ರಕಟವಾ ಗುವುವು.