ಪುಟ:ಪ್ರಜ್ಞಾ ಸ್ವಯಂವರಂ.djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


6 ಸನ್ಮಾನಗ್ರಂಥಾವಳಿ (ಪ್ರಧ • • • • • • • • • • • • ೧೧೧/೧M \ (ನಾಂದ್ಯಂತ ಸೂತ್ರಧಾರ:) ಸೂತ್ರ- (ಮೇಲೆನೋಭಕ್ತಿಭಾವದಿಂದ ಕೈಜೋಡಿಸಿ) ವೃತ್ತ !! ಶ್ರೀಕಾಂತಂ ತಪಾರಿಜಾತಮಮಲಬ್ರಹ್ಮಂದ್ರಗಿಂ ಸೇವಿತಂ | ರಾಕಾಂತರ್ಗತ ಚಂದ್ರಕೋಟಿಸದೃಶಕ್ಕೇರಾನನಂ ಸುಂದರಂ || ಲೋಕವ್ಯಾಪಕನಾಗಿ ಸಾಕಗುಣವ್ಯಾಪಾರದಿಂವರ್ತಿತಾ | ಭೂಕಾಂತಂ ಕಮಲಾಕ್ಷನೇ ತೊರೆಯಲೀ ಶ್ರೀಕೃಷ್ಣಭೂಪಾಲನಂ || ( ಸಭೆಯನ್ನು ನೋಡಿ ವಿನೀತನಾಗಿ) ಸಹೃದಯರಾದ ಸಭಾಸದರಿಗೆ ವಂದಿಸುವೆನು, ಮಹನೀಯರಾದ ಇವರನ್ನು ಯಾವರೀತಿಯಿಂದ ಪ್ರಸನ್ನೀಕರಿಸಲಿ ? (ಕಿವಿಕೊಟ್ಟು ಕೇಳಿದಂತೆ ಅಭಿನಯಿಸಿ) ಏನು! ಏನೆಂದು ಆಜ್ಞಾಪಿಸಲ್ಪಟ್ಟನು ? ಹೀಗಲ್ಲವೆ ? ಕಂದ || ಆವುದರೊಳ್ಳರಸಿ ವಾ | ಕ್ಯಾವುದರೊಳ*ಸಂವಿಧಾನಮತಿಚತುರತರಮೊ | ಆವುದುನವರೂಪಕಮೊ | ನೀವದನಾಡೀಗ ನಮ್ಮ ತುಟ್ಟಿ ಪುದಾಯಾಃ || ( ಸಂತೋಷದಿಂದ ) ಕೃತಕೃತ್ಯನಾದೆನು, ಇರಲಿ, ನನ್ನ ಸಹಚಾರಿಣಿಯೊಡನೆ ಮುಂದಿನ ಸನ್ನಾಹದಲ್ಲಿ ಆಲೋಚಿಸುವೆನು, ( ತೆರೆಯಕಡೆನೋಡಿ ) ಕಂದ || ರಮಣೀಕುಲಮಣಿತರ್ರುಣೀ | ಸುಮಧುರವಾಣಿ ಫಣಿವೇಣಿ ಪಲ್ಲವಪಾಣೀ | ಸುಮಶರನರಗಿಣಿ ಭಾಮಿನಿ || ಮಮಚಿತ್ತಾಕರ್ಷಿಣಿ ನಲಿಯುತೆ ಬಾ ಸವಿನೀಂ |