ಪುಟ:ಪ್ರಜ್ಞಾ ಸ್ವಯಂವರಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಸನ್ಮಾನಗ್ರಂಥಾವಳಿ ದ್ವಿತೀ • • • \ \ \ \/\n \r\ \r\n ಶ್ರೀ ದ್ವಿತೀಯಾಂಕ ಪ್ರಾರಂಭಃ. (ರಾಜಬೀದಿಯಲ್ಲಿ ಪ್ರಯಾಣವನ್ನ ಭಿನಯಿಸುತ್ತ ಶಿಷ್ಯಸಮೇತನಾದ ಡಂಭನು ಪ್ರವೇಶಿಸುವನು.) . ಡಂಭ- (ಸಂತೋಷದಿಂದ) ರಾಗ- (ಜಾಜೆಯಹೂವು ಬೆಳ್ಳಗೆ) ಮಹಾನುಭಾವನು ನಾನೇ ಭಲೆ ಭಲಾ ||ಪ|| ನಾನೇ ಬಲು ತೂರ ! ನಾನೇ ಬಲುಧೀರ | ನಾನೇ ಸುಕುಮಾರ ಸುಂದ ರಾಕಾರ ||c || ನಾನೇ ಧನವಂತ | ನಾನೇ ಗುಣವಂತ | ಎನ್ನ ನೇ ಎಲ್ಲರು ಬಣ್ಣಿಸುತಿಹರು ||s!! ಇಪ್ಪತ್ತು ಸಾವಿರ ರೂಪ್ಯ ವಧ ನದನು | ಒಪ್ಪಿಸಿ ಮಣಿದನು | ಕನ್ಸವಕೊಂಡೆನು || ಮಹಾ ನು ||೩|| (ಶಿಷ್ಯನ ಕಡೆಗೆ ನೋಡಿ) ಎಲೈ ಶಿಷ್ಯನೆ ! ನಮ್ಮ ಯೋಗ್ಯತೆಗೆ ಅತ್ಯಲ್ಪವಾದ ಕಾಗ್ಯದಲ್ಲಿ ನಮ್ಮ ಮಹಾರಾಜನು ನಮ್ಮನ್ನು ನಿಯೋಗಿಸಿರುವನು. ನಮ್ಮ ರಾಜನಿಗೆ ಪ್ರತಿಪಕ್ಷ ದವನಾದ ವಿಷ್ಣುಭಕ್ತನನ್ನು ಅರಣ್ಯ ಪ್ರಾಪ್ತನನ್ನಾಗಿ ಮಾಡಬೇಕೆಂಬುದು ಅಲ್ಪಕಾರ್ಯವಾದರೂ ಉಪೇಕ್ಷಿಸತಕ್ಕುದಲ್ಲ, ವಿಷ್ಣು ಭಕ್ತನು ಮಧುರಾ ಪಟ್ಟಣದಲ್ಲಿರುವನೆಂದು ಕೇಳಿದೆನು. ಇರಲಿ ಅಲ್ಲಿಗೆ ಹೋಗಿ ನೋಡುವೆನು. (ಮುಂದೆ ಗಮನವನ್ನು ಅಭಿನಯಿಸಿ, ಸಾವಧಾನದಿಂದ ನೋಡಿ)-ಆಹಾ ! ಇದೇ ಮಧುರಾನಗರ ! ಇದು ಬಹು ಪುರಾತನವಾದುದೆಂದು ತೋರುವುದು, ಪಗಡೆಯ ಚಾರಿಯಂತೆ ಸಾಲುಸಾಲಾಗಿಯ ಸುಸಜ್ಜಿತವೂ ಮನೋ